|
ನವ ದೆಹಲಿ – ಭಾರತದಲ್ಲಿ ದೀಪಾವಳಿ ಸಮಯದಲ್ಲಿ 3 ಲಕ್ಷ 75 ಸಾವಿರ ಕೋಟಿ ರೂಪಾಯಿಗಳ ದಾಖಲೆಯ ವಹಿವಾಟು ನಡೆದಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಮಾಹಿತಿ ನೀಡಿದೆ. ಕಾರ್ತಿಕ ಹುಣ್ಣಿಮೆಯ ವರೆಗೆ ಈ ಅಂಕಿ ಅಂಶವು 4 ಲಕ್ಷದ 25 ಸಾವಿರ ಕೋಟಿ ರೂಪಾಯಿಗಳ ಗಡಿ ದಾಟುವ ನಿರೀಕ್ಷೆಯಿದೆ.
‘ಕಾನ್ಫೆಡರೆಶನ್ ಆಫ್ ಆಲ್ ಇಂಡಿಯಾ ಟ್ರೆಡರ್ಸ್’ದ ಪ್ರಧಾನ ಕಾರ್ಯದರ್ಶಿ ಪ್ರವೀಣ ಖಂಡೇಲವಾಲ ಇವರು ಮಾತನಾಡಿ, ಈ ವರ್ಷ ದೀಪಾವಳಿ ಸಂದರ್ಭದ ವ್ಯಾಪಾರದಲ್ಲಿ ಚೀನಾಗೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರದಲ್ಲಿ ನಷ್ಟವಾಗಿದೆ.
ಈ ಹಿಂದೆ ದೀಪಾವಳಿ ಸಂದರ್ಭದಲ್ಲಿ ಚೀನಾ ನಿರ್ಮಿತ ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ಶೇ.70ರಷ್ಟು ಪಾಲು ಪಡೆಯುತ್ತಿದ್ದವು. ಈ ಬಾರಿ ಈ ಮೊತ್ತ ತೀರಾ ಕಡಿಮೆಯಾಗಿದೆ.
ಈ ವರ್ಷ ದೇಶದ ವ್ಯಾಪಾರಿಗಳು ದೀಪಾವಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಂಡಿಲ್ಲ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ಅಭಿಯಾನದ ಫಲವಾಗಿದೆ. ದೇಶದ ಎಲ್ಲ ನಗರಗಳ ಸ್ಥಳೀಯ ಉತ್ಪಾದಕರು, ಕುಶಲಕರ್ಮಿಗಳು ಮತ್ತು ಕಲಾವಿದರು ತಯಾರಿಸಿದ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ಈ ಕಾರಣದಿಂದ ದೀಪಾವಳಿ ಹಬ್ಬದ ಮೂಲಕ ದೇಶ ಮತ್ತು ಜಗತ್ತಿಗೆ ಸ್ವಾವಲಂಬಿ ಭಾರತದ ವಿಶೇಷ ನೋಟವನ್ನು ತೋರಿಸಲಾಯಿತು.
ಸಂಪಾದಕೀಯ ನಿಲುವುಭಾರತೀಯರು ಯಾವಾಗಲೂ ಇಂತಹ ರಾಷ್ಟ್ರನಿಷ್ಠೆಯನ್ನು ತೋರಿಸಿದರೆ, ಚೀನಾಗೆ ಸರಿದಾರಿಗೆ ತರಲು ಹೆಚ್ಚು ಸಮಯ ಬೇಕಾಗುವುದಿಲ್ಲ ! |