ಸಂಪೂರ್ಣ ಜಗತ್ತನ್ನು ಆರೋಗ್ಯ ಸಂಪನ್ನಗೊಳಿಸುವ ಮನುಷ್ಯನನ್ನು ಮಾನಸಿಕ ದೌರ್ಬಲ್ಯಗಳಿಂದ ಹೊರತೆಗೆಯುವ ಮಂತ್ರಸಾಮರ್ಥ್ಯ !

ಪದ್ಮಭೂಷಣ ಸೌ. ಸುಧಾ ಮೂರ್ತಿ

೧. ೫ ನಿಮಿಷಗಳ ಪ್ರಾರ್ಥನೆಯಿಂದ ಮಾನವನ ಶರೀರದಲ್ಲಿ ನಿರ್ಮಾಣವಾಗುವ ಜೀವಕೋಶಗಳು ಮೊದಲಿನ ಜೀವಕೋಶಗಳಿಗಿಂತ ಹೆಚ್ಚು ಬಲಶಾಲಿ ಮತ್ತು ತೇಜಸ್ವಿಯಾಗಿರುತ್ತವೆ : ‘ಫಿಜಿಕ್ಸ್ ಎಂಡ್‌ ಕೆಮಿಸ್ಟ್ರಿ ಆಫ್‌ ಹ್ಯೂಮನ್‌ ಬಾಡಿ’, ಎಂಬ ಪುಸ್ತಕದಲ್ಲಿ ವಿದೇಶಿ ವಿಜ್ಞಾನಿ ಗಳು ವಿವಿಧ ಪ್ರಯೋಗಗಳನ್ನು ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಂತ್ರಶಾಸ್ತ್ರ ಮತ್ತು ಯೋಗಶಾಸ್ತ್ರವಿದೆ; ಆದರೆ ದುರದೃಷ್ಠವಶಾತ್‌ ನಾವು ಆ ಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳಲು ಪ್ರಯೋಗಗಳನ್ನು ಮಾಡಲಿಲ್ಲ. ವಿದೇಶಿಯರು ಅದಕ್ಕಾಗಿ ಬಹಳಷ್ಟು ಪ್ರಯೋಗ ಗಳನ್ನು ಮಾಡಿದ್ದಾರೆ. ‘ಫಿಜಿಕ್ಸ್ ಎಂಡ್‌ ಕೆಮೆಸ್ಟ್ರಿ ಆಫ್‌ ಹ್ಯೂಮನ್‌ ಬಾಡಿ’, ಎಂಬ ಪುಸ್ತಕದ ಲೇಖಕರು ಓರ್ವ ವಿಜ್ಞಾನಿಗಳಾಗಿದ್ದಾರೆ. ಅವರು ಹೇಳುತ್ತಾರೆ, ”ಈ ಸಂಪೂರ್ಣ ಜಗತ್ತನ್ನು ಆರೋಗ್ಯಸಂಪನ್ನಗೊಳಿಸಲಿಕ್ಕಿದ್ದರೆ ಮತ್ತು ಮಾನವನನ್ನು ಎಲ್ಲ ಮಾನಸಿಕ ದೌರ್ಬಲ್ಯಗಳಿಂದ ಹೊರ ತೆಗೆಯಲಿಕ್ಕಿದ್ದರೆ, ನನಗೆ ಕೇವಲ ೫ ನಿಮಿಷ ಕೊಡಿ.’’ ಆ ವಿಜ್ಞಾನಿಯು ಹೇಳುತ್ತಾರೆ, ”ಮಾನವನ ಶರೀರದಲ್ಲಿ, ರಕ್ತದಲ್ಲಿ ಚಯಾಪಚಯ (ಮೆಣಚಿಬೊಟೈಸ್ಮ್) ಕ್ರಿಯೆ ನಡೆಯುತ್ತಿರುತ್ತದೆ. ಅದರಲ್ಲಿ ಕೋಶಗಳು ನಾಶವಾಗುವುದು ಮತ್ತು ಬೆಳೆಯುವುದು ನಡೆದಿರುತ್ತದೆ. ಪ್ರತಿ ಕ್ಷಣ ಜೀವಕೋಶಗಳು ಸಾಯುತ್ತವೆ ಮತ್ತು ಅದೇ ಸಮಯದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಪ್ರತಿಯೊಂದು ಸೆಕೆಂಡ್‌ಗೆ ರಕ್ತದಲ್ಲಿನ ೩೦ ಲಕ್ಷ ಜೀವಕೋಶಗಳು ಸಾಯುತ್ತವೆ ಮತ್ತು ೩೦ ಲಕ್ಷ ಹೊಸ ಜೀವಕೋಶಗಳು ಹೊಸತಾಗಿ ಜನ್ಮ ಪಡೆಯುತ್ತವೆ, ”ಒಂದು ಸೆಕೆಂಡ್‌ಗೆ ೩೦ ಲಕ್ಷ, ಅಂದರೆ ಒಂದು ನಿಮಿಷಕ್ಕೆ ೧೮ ಕೋಟಿ ಮತ್ತು ೫ ನಿಮಿಷಗಳಿಗೆ ೯೦ ಕೋಟಿ ಜೀವ ಕೋಶಗಳು ಹೊಸತಾಗಿ ಹುಟ್ಟುತ್ತವೆ. ನೀವು ಮನಸ್ಸಿನಲ್ಲಿ ಬೇರೆ ಯಾವುದೇ ವಿಷಯವನ್ನು ತರದೆ ೫ ನಿಮಿಷ ನಿಮಗೆ ಇಷ್ಟ ಬಂದಲ್ಲಿ ಕುಳಿತು ಅಂತಃಕರಣದಿಂದ ದೇವರ ಹೆಸರನ್ನು ಸ್ಮರಿಸಿರಿ, ಪ್ರಾರ್ಥನೆಯನ್ನು ಮಾಡಿರಿ.’’ ಆ ವಿಜ್ಞಾನಿ ಹೇಳುತ್ತಾರೆ, ”೫ ನಿಮಿಷಗಳ ಪ್ರಾರ್ಥನೆಯಿಂದ ಆ ೧೮ ಕೋಟಿ ಘಿ ೫, ಅಂದರೆ ೯೦ ಕೋಟಿ ಹೊಸತಾಗಿ ಜನಿಸುವ ಜೀವಕೋಶಗಳು ಮೊದಲಿನ ಜೀವಕೋಶಗಳಿಗಿಂತ ಹೆಚ್ಚು ಬಲಶಾಲಿ ಮತ್ತು ಹೆಚ್ಚು ತೇಜಸ್ವಿಯಾಗಿರುತ್ತವೆ.’’ ಇದನ್ನು ಯಾವುದೇ ಭಾರತೀಯ, ಸಂಪ್ರದಾಯಸ್ಥ ಅಥವಾ ಅಂಧಶ್ರದ್ಧಾ ವಾದಿ ಸನಾತನಿ ಅಲ್ಲ, ಓರ್ವ ವಿಜ್ಞಾನಿಯು ಹೇಳುತ್ತಿದ್ದಾರೆ.

೨. ನಿಯಮಿತವಾಗಿ ೫ ನಿಮಿಷ ಮಂತ್ರವನ್ನು ಅಥವಾ ಸ್ತ್ರೋತ್ರವನ್ನು ನೆನಪಿಸಿಕೊಂಡರೆ (ಪಠಿಸಿದರೆ) ೭ ವರ್ಷಗಳ ನಂತರ ಶರೀರದ ಕಾಯಿಲೆಗಳಲ್ಲಿ ಅರ್ಧದಷ್ಟು ಕಾಯಿಲೆಗಳು ದೂರವಾಗುವವು : ಹೀಗೆ ೬ ತಿಂಗಳು ಪ್ರತಿದಿನ ೫ ನಿಮಿಷ ತಪ್ಪದೆ ಯಾವುದಾದರೊಂದು ಮಂತ್ರ (ಜಪ) ಅಥವಾ ಸ್ತೋತ್ರವನ್ನು ಪಠಿಸಿದರೆ, ಈ ೫ ನಿಮಿಷಗಳಲ್ಲಿ ಶರೀರದಲ್ಲಿ ನಿರ್ಮಾಣವಾಗುವ ಹೊಸ ಜೀವಕೋಶಗಳು ಹೆಚ್ಚು ಬಲಶಾಲಿ ಮತ್ತು ತೇಜಸ್ವಿಯಾಗಿರುವವು ಮತ್ತು ಅದರ ಪರಿಣಾಮ ನಿಮಗೆ ೬ ತಿಂಗಳ ನಂತರ ಅನುಭವಿಸಲು ಸಿಗುವುದು. ಆ ವಿಜ್ಞಾನಿ ಏನು ಹೇಳುತ್ತಾರೆಂದರೆ, ‘ನೀವು ನಿಯಮಿತವಾಗಿ ೫ ನಿಮಿಷ ಮಂತ್ರ ಅಥವಾ ಸ್ತೋತ್ರವನ್ನು ಪಠಿಸುತ್ತಿದ್ದರೆ ೭ ವರ್ಷಗಳ ನಂತರ ನಿಮ್ಮ ಶರೀರದಲ್ಲಿನ ವ್ಯಾಧಿಗಳಲ್ಲಿನ ಅರ್ಧದಷ್ಟು ವ್ಯಾಧಿಗಳು ದೂರವಾಗುವವು.’

೩. ಒಂದು ಮಂತ್ರವನ್ನು ಪ್ರಮಾಣವೆಂದು ಸ್ವೀಕರಿಸಿದ್ದರೆ ಬೇರೆ ಮಂತ್ರವನ್ನು (ನಾಮಜಪವನ್ನು) ಜಪಿಸುವ ಅವಶ್ಯಕತೆಯಿರುವುದಿಲ್ಲ : ‘ಪ್ರಾಮಾಣ್ಯಶಕ್ತಿ’ಯು ಮಂತ್ರದ ಮೊದಲ ಶಕ್ತಿಯಾಗಿದೆ. ನೀವು ಒಂದು ಮಂತ್ರವನ್ನು ಪ್ರಮಾಣ ಎಂದು ಸ್ವೀಕರಿಸಿರಿ. ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ತ್ರಯೋದಾಕ್ಷರಿ ಮಂತ್ರ ಇದು ನನ್ನ ಪ್ರಮಾಣ ಆಗಿದೆ; ಏಕೆಂದರೆ ಪ್ರಭು ಶ್ರೀರಾಮರು ನನ್ನ ಆರಾಧ್ಯ ದೇವತೆಯಾಗಿದ್ದಾರೆ. ಅದನ್ನು ನಾವು ಒಂದು ಸಲ ಪ್ರಮಾಣವೆಂದು ಸ್ವೀಕರಿಸಿದ್ದೇವೆ. ಒಂದು ಸಲ ಪ್ರಮಾಣವೆಂದು ಸ್ವೀಕರಿಸಿದರೆ, ಆ ಮಂತ್ರವನ್ನೇ ಜಪಿಸಬೇಕು. ಒಮ್ಮೆ ಒಂದು ಮಂತ್ರವನ್ನು ಪ್ರಮಾಣವೆಂದು ಆಯ್ದುಕೊಂಡ ನಂತರ ಪುನಃ ಇತರ ಮಂತ್ರಗಳನ್ನು (ಜಪ ಗಳನ್ನು) ಜಪಿಸುವ ಆವಶ್ಯಕತೆಯಿಲ್ಲ.

೪. ಒಂದು ಮಂತ್ರವನ್ನು ಸ್ವೀಕರಿಸಿ ಅದನ್ನು ಉಚ್ಚರಿಸಿದರೆ ಅದು ಹೆಚ್ಚು ಫಲ ನೀಡುತ್ತದೆ !

ಮಂತ್ರಶಾಸ್ತ್ರ ಏನು ಹೇಳುತ್ತದೆ ಎಂದರೆ, ‘ನಾವು ಮಾಡಿರುವುದಕ್ಕೆಲ್ಲ ಫಲ ಸಿಗಲಿಕ್ಕೆ ಇದೆ’, ಇದು ಜಗತ್ತಿನ ನಿಯಮವಾಗಿದೆ. ಭಾರತೀಯ ಪರಂಪರೆಯ ವೈದಿಕ ಪರಂಪರೆಯ ವೈಶಿಷ್ಟ್ಯವೆಂದರೆ, ‘ಯಾವ ಕರ್ಮವನ್ನು ಮಾಡುತ್ತಾನೆಯೋ, ಆ ಕರ್ಮದ ಫಲ ಮತ್ತು ಆ ಫಲದಿಂದ ನಿರ್ಮಾಣವಾಗುವ ಸಂಸ್ಕಾರ ಮತ್ತು ಆ ಸಂಸ್ಕಾರದಿಂದ ಪುನಃ ಕರ್ಮ’, ಈ ಚಕ್ರಗಳಿವೆ. ಮಾಡಿದ ಕರ್ಮಗಳ ಫಲಗಳನ್ನು ಭೋಗಿಸದೆ ಬೇರೆ ಪರ್ಯಾಯವಿಲ್ಲ. ಮಂತ್ರಶಾಸ್ತ್ರ ಏನು ಹೇಳುತ್ತದೆ ಎಂದರೆ, ಜಪಿಸಿದ ಪ್ರತಿಯೊಂದು ಮಂತ್ರದ ಫಲ ಅನುಭವಕ್ಕೆ ಬಂದೇ ಬರುತ್ತದೆ. ಕೇವಲ ‘ಮಂತ್ರವನ್ನು ಜಪಿಸಿದೆ ಫಲ ಸಿಕ್ಕಿತು’, ಎನ್ನುವ ಪ್ರಮಾಣವಿಲ್ಲ. ‘ಫಲಿನಿ’ ಕೇವಲ ಶಕ್ತಿಯಲ್ಲ, ಅದು ‘ಬಹುನಿ’ (ನೂರಾರು) ಅಂದರೆ ಅದರಲ್ಲಿ ನೂರಾರು ಶಕ್ತಿಗಳಿವೆ. ಒಂದು ಬೀಜವನ್ನು ಬಿತ್ತಿ ದರೆ ಅದಕ್ಕೆ ನೂರಾರು ಬೀಜಗಳು ಬರುತ್ತವೆ. ಒಂದು ಜೋಳದ ಕಾಳನ್ನು ಬಿತ್ತಿದರೆ, ಅದರಿಂದ ಬರುವ ತೆನೆಯಲ್ಲಿ ಅನೇಕ ಜೋಳದ ಕಾಳುಗಳಿರುತ್ತವೆ. ಹಾಗೆ ನಾವು ಒಂದು ಮಂತ್ರವನ್ನು ಸ್ವೀಕರಿಸಿದರೆ ಮತ್ತು ಅದನ್ನು ಪಠಿಸಿದರೆ, ಅದು ಕೇವಲ ಫಲವನ್ನು ಕೊಡುವುದಲ್ಲ, ಅದು ಅಪಾರ ಫಲವನ್ನು ನೀಡುತ್ತದೆ.

೫. ಮಂತ್ರದ ಫಲ ಇದು ಆ ಮಂತ್ರ, ಆ ವ್ಯಕ್ತಿ ಮತ್ತು ಆ ಸ್ಥಾನ ಈ ಮೂವರಿಗೂ ಸಾಮರ್ಥ್ಯವನ್ನು ಪ್ರಾಪ್ತಮಾಡಿಕೊಡುತ್ತದೆ

ಮಂತ್ರದ ನಾಲ್ಕನೆ ಶಕ್ತಿ ಇದು ಆಂತರಗ್ರಾಹೀ ಶಕ್ತಿ ಯಾಗಿದೆ. ಒಂದು ಮಂತ್ರವನ್ನು ನಿರ್ಧರಿಸಿ ಸ್ಥಾನ ಮತ್ತು ಸಮಯವನ್ನು ನಿರ್ಧರಿಸಿ ಅಲ್ಲಿ ಕುಳಿತು ಆ ಮಂತ್ರವನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಅನುಷ್ಠಾನ ಮಾಡಿದರೆ (ಜಪಿಸಿದರೆ), ಆ ಮಂತ್ರ, ಆ ವ್ಯಕ್ತಿ ಮತ್ತು ಆ ಸ್ಥಾನ ಈ ಮೂವರಿಗೂ ಸಾಮರ್ಥ್ಯ ಪ್ರಾಪ್ತವಾಗುತ್ತದೆ. ಇದರ ಉದಾಹರಣೆ ಪ.ಪ. (ಪರಮ ಹಂಸ ಪರಿವ್ರಾಜಕಾಚಾರ್ಯ) ಶ್ರೀಧರ ಸ್ವಾಮಿ ಇವರು ತಮ್ಮ ‘ಆರ್ಯ ಸಂಸ್ಕೃತಿ’ ಪುಸ್ತಕದಲ್ಲಿ ಮುಂದಿನಂತೆ ಹೇಳಿದ್ದಾರೆ, ”ಈ ೩೩ ಕೋಟಿ ದೇವತೆಗಳೆಂದರೇನು ? ನಮ್ಮ ಭಾರತ ದೇಶದಲ್ಲಿ ನಮ್ಮ ಋಷಿಮುನಿಗಳು ವಿವಿಧ ಸ್ಥಳಗಳಲ್ಲಿ ತಪಾಚರಣೆ ಮಾಡಿ ಅನೇಕ ಸ್ಥಾನಗಳನ್ನು ಸಾಮರ್ಥ್ಯಶಾಲಿಯನ್ನಾಗಿ ಮಾಡಿದ್ದಾರೆ. ಸ್ಥಾನ-ಸ್ಥಾನಗಳಲ್ಲಿ ಸಾಮರ್ಥ್ಯ ಪ್ರಕಟವಾಗಿದೆ.’’ ಮಂತ್ರಶಾಸ್ತ್ರದ ಸಾಮರ್ಥ್ಯವನ್ನು ಹೇಳುವಾಗ, ಅವರು ಹೇಳುತ್ತಾರೆ, ‘ಫಲಿನಿ ಶಕ್ತಿ, ಆಂತರ ಗ್ರಾಹೀ ಶಕ್ತಿ, ಬಹುನೀ ಶಕ್ತಿ, ಪ್ರಾಮಾಣ್ಯ ಶಕ್ತಿ ಈ ರೂಪಗಳಲ್ಲಿ ಮಂತ್ರಗಳು ಪ್ರಕಟವಾಗುತ್ತವೆ.’’

೬. ಮಂತ್ರಗಳ ವಿಧ ಮತ್ತು ಅವುಗಳ ಸಾಮರ್ಥ್ಯ : ನಮ್ಮಲ್ಲಿ ಈ ಮುಂದಿನಂತೆ ಮಂತ್ರಗಳ ವಿಧಗಳನ್ನು ಮಾಡಲಾಗಿದೆ. ‘೧ ರಿಂದ ೧೦ ಅಕ್ಷರಗಳ ವರೆಗಿನ ಮಂತ್ರಗಳೆಂದರೆ ‘ಬೀಜಮಂತ್ರ’ಗಳು. ೧೦ ರಿಂದ ೨೦ ಅಕ್ಷರಗಳ ವರೆಗಿನ ಮಂತ್ರ ಇವು ‘ಕರ್ತರೀಮಂತ್ರ’ಗಳು ಮತ್ತು ೨೦ ರ ಮುಂದಿನ ಅಕ್ಷರಗಳಿರುವ ಮಂತ್ರಗಳು ಮಾಲಾಮಂತ್ರ ಗಳಾಗಿವೆ ಮತ್ತು ಈ ಮಾಲಾಮಂತ್ರಗಳಿಗೆ ಮಿತಿ ಇಲ್ಲ. ‘ದಾಸಬೋಧ’, ‘ಸಂಪೂರ್ಣ ಜ್ಞಾನೇಶ್ವರಿ’, ‘ಪೂರ್ಣ ಏಕನಾಥಿ ಭಾಗವತ’ ಇವೆಲ್ಲವೂ ಮಾಲಾ ಮಂತ್ರಗಳಾಗಿವೆ. ದೊಡ್ಡ ದೊಡ್ಡ ಗ್ರಂಥಗಳು ಮಂತ್ರಮಯವಾಗಿವೆ; ಏಕೆಂದರೆ ಅವುಗಳ ಹಿಂದೆ ಈ ಎಲ್ಲ ಸಂತರ ‘ಸಂಚಿತ ಮನಃಶಕ್ತಿ’ ಇದೆ. ಆ ಗ್ರಂಥಗಳ ಹಿಂದೆ ಅವರ ಸಾಮರ್ಥ್ಯ ದೃಢವಾಗಿ ನಿಂತಿದೆ.’

– ಪದ್ಮಭೂಷಣ ಸೌ. ಸುಧಾ ಮೂರ್ತಿ (‘ಇನ್ಫೋಸಿಸ್’ ಕಂಪನಿಯ ಸಹಸಂಸ್ಥಾಪಕ ಮತ್ತು ಉದ್ಯಮಿ ಶ್ರೀ. ನಾರಾಯಣ ಮೂರ್ತಿಯವರ ಪತ್ನಿ), ಬೆಂಗಳೂರು (ಆಧಾರ : ಜಾಲತಾಣ)