ಗಾಝಾ ಮೇಲಿನ ಹಮಾಸನ್ ನಿಯಂತ್ರಣ ಸಂಕಷ್ಟಕ್ಕೆ ! – ಇಸ್ರೇಲ್ ದಾವೆ

ತೆಲ್ ಅವಿವ (ಇಸ್ರೇಲ್) – ಹಮಾಸ ಗಾಝಾ ಪಟ್ಟಿಯಲ್ಲಿನ ಹಿಡಿತ ೧೬ ವರ್ಷದ ನಂತರ ಕಳೆದುಕೊಂಡಿದೆ. ಹಮಾಸದ ಭಯೋತ್ಪಾದಕರು ದಕ್ಷಿಣ ಗಾಝಾದ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ನಾಗರಿಕರು ಹಮಾಸದ ಕೇಂದ್ರಗಳನ್ನು ಲೂಟಿ ಮಾಡುತ್ತಿದ್ದಾರೆ, ಎಂದು ಇಸ್ರೇಲ್ ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಇವರು ದಾವೆ ಮಾಡಿದ್ದಾರೆ. ಇಸ್ರೇಲ್ ಸೈನ್ಯವು ಹಮಾಸದ ಸಂಸತ್ತಿನ ಮೇಲೆ ನಿಯಂತ್ರಣ ಸಾಧಿಸಿದೆ. ಇದರ ಛಾಯಾಚಿತ್ರಗಳನ್ನು ಪ್ರಸಾರ ಮಾಡಿದೆ.

‘ರೇಂಟಿಸಿ ಚಿಲ್ಡ್ರನ್’ ಆಸ್ಪತ್ರೆಯ ಕೆಳಗೆ ಹಮಾಸದ ಕಮಾಂಡ ಸೆಂಟರ್ !

ಇಸ್ರೇಲಿನ ಸೈನ್ಯವು, ಹಮಾಸ ಒತ್ತೆಯಾಳನ್ನಾಗಿಸಿದವರನ್ನು ‘ರೇಂಟಿಸಿ ಚಿಲ್ಡ್ರನ್’ ಆಸ್ಪತ್ರೆಯ ಕೆಳಗೆ ಇರುವ ಅವರ ಮುಖ್ಯಾಲಯದ (ಕಮಂಡ ಸೆಂಟರ್) ಲ್ಲಿ ಬಂಧನದಲ್ಲಿಟ್ಟಿತ್ತು ಎಂದು ಕಳವಳ ವ್ಯಕ್ತಪಡಿಸಿದೆ. ಸೈನ್ಯವು ಅಲ್ಲಿಂದ ಕುರ್ಚಿ, ಹಗ್ಗ, ಶಸ್ತ್ರಾಸ್ತ್ರ, ಬೈಕ, ರಕ್ಷಕರಿಗಾಗಿ ಸೇವೆಯ ಸೂಚಿ ಇಂತಹ ಅನೇಕ ವಸ್ತುಗಳು ವಶಪಡಿಸಿಕೊಂಡಿದೆ. ಇಲ್ಲಿ ತಾತ್ಕಾಲಿಕ ಶೌಚಾಲಯ, ಅಡುಗೆ ಮನೆ ಮತ್ತು ವೆಂಟಿಲೇಶನ್ ಪೈಪ್ ಕೂಡ ಇದ್ದವು. ಸೈನ್ಯ ಅಲ್ಲಿ ತಲುಪುವ ಮೊದಲೇ ಅಲ್ಲಿಂದ ಒತ್ತೆಯಾಳುಗಳನ್ನು ಇನ್ನೊಂದು ಕಡೆಗೆ ಕರೆದುಕೊಂಡು ಹೋಗಲಾಗಿದೆ. ಈ ಆಸ್ಪತ್ರೆ ಅಂತರಾಷ್ಟ್ರೀಯ ಆರೋಗ್ಯ ಸಂಘಟನೆಯ ಸಹಾಯದಿಂದ ನಡೆಸಲಾಗುತ್ತಿದೆ.

೯೧ ಸುರಂಗಗಳ ನಾಶ !

ಇಸ್ರೇಲಿ ಸೈನ್ಯವು, ಗಾಝಾದ ಅಲ್ ಕುದಸ್ ಆಸ್ಪತ್ರೆಯಿಂದ ಅವರ ಸೈನಿಕರ ಮೇಲೆ ದಾಳಿ ನಡೆಯುತ್ತಿದೆ. ಗುಂಡಿನ ದಾಳಿಯ ಜೊತೆಗೆ ಗ್ರೆನೆಡ್ ಕೂಡ ಎಸೆಯಲಾಗುತ್ತಿದೆ. ಪ್ರತ್ಯುತ್ತರದಲ್ಲಿ ಹಮಾಸದ ೨೧ ಭಯೋತ್ಪಾದಕರು ಹತರಾಗಿದ್ದಾರೆ. ಸೈನ್ಯದಿಂದ ಇಲ್ಲಿಯವರೆಗೆ ಗಾಝಾದಲ್ಲಿನ ೯೧ ಸುರಂಗಗಳು ಹುಡುಕಿ ಅದನ್ನು ಸ್ಪೋಟಕದ ಸಹಾಯದಿಂದ ನಾಶ ಮಾಡಿದೆ.

ಅಲ್ ಶಿಫಾ ಆಸ್ಪತ್ರೆ ಖಾಲಿ ಮಾಡಲು ಡಾಕ್ಟರರ ನಿರಾಕರಣೆ !

ಗಾಝಾದಲ್ಲಿನ ಅಲ್ ಶಿಫಾ ಆಸ್ಪತ್ರೆಯ ಡಾಕ್ಟರರು ಆಸ್ಪತ್ರೆ ಖಾಲಿ ಮಾಡಲು ನಿರಾಕರಿಸಿದ್ದಾರೆ. ಇಸ್ರೇಲಿ ರಕ್ಷಣಾ ದಳದಿಂದ ಆಸ್ಪತ್ರೆ ಖಾಲಿ ಮಾಡಲು ಹೇಳಲಾಗಿತ್ತು. ಡಾಕ್ಟರರು, ಅವರು ಈ ಜಾಗ ಖಾಲಿ ಮಾಡಿದರೆ ಸುಮಾರು ೭೦೦ ರೋಗಿಗಳು ಸಾವನ್ನಪ್ಪುವರು ಎಂದು ಹೇಳಿದ್ದಾರೆ.