ಜಿನೀವಾ – ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲಿನ ದಾಳಿಯನ್ನು ನಿಲ್ಲಿಸಿರಿ, ಎಂಬ ಪದಗಳಲ್ಲಿ ಭಾರತ ಕೆನಡಾದ ಕಿವಿ ಹಿಂಡಿದೆ. ಭಾರತದ ಸ್ಥಾಯಿ ಸಮಿತಿಯ ಕಾರ್ಯದರ್ಶಿ ಕೆ.ಎಸ್. ಮೊಹಮ್ಮದ್ ಹುಸೇನ್ ಇವರು ಕಳೆದ ವಾರ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ ಸಭೆಯಲ್ಲಿ ಕೆನಡಾದ ಕಿವಿ ಹಿಂಡಿದರು. ಹುಸೇನ ತಮ್ಮ ಭಾಷಣದಲ್ಲಿ, `ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಕೆನಡಾದ ನಿಯೋಗವು ರಾಷ್ಟ್ರೀಯ ವರದಿಯನ್ನು ಸಲ್ಲಿಸಿರುವ ಬಗ್ಗೆ ಭಾರತ ಸ್ವಾಗತಿಸುತ್ತದೆ ಮತ್ತು ಅವರಿಗೆ ಧನ್ಯವಾದ ಅರ್ಪಿಸುತ್ತದೆಯೆಂದು ಹೇಳಿದರು.
ಭಾರತವು ಕೆನಡಾಗೆ,
1. ಹಿಂಸಾಚಾರವನ್ನು ಪ್ರಚೋದಿಸಲು ಕಾರಣವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ತಡೆಯಿರಿ. ಅದಕ್ಕಾಗಿ ದೇಶೀಯ ಚೌಕಟ್ಟನ್ನು ಬಲಪಡಿಸಿ, ಭಯೋತ್ಪಾದಕತೆಗೆ ಉತ್ತೇಜಿಸುವ ಗುಂಪುಗಳ ಚಟುವಟಿಕೆಗಳನ್ನು ಬೆಂಬಲಿಸಬೇಡಿರಿ.
2. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳನ್ನು ಮತ್ತು ದ್ವೇಷದ ಭಾಷಣವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಿರಿ ಎಂದು ಹೇಳಿದ್ದಾರೆ.