ತಂದೆಯ ಸಹಾಯದಿಂದ ಮತಾಂತರ !
ಚಿತ್ರದುರ್ಗ – ರಾಜ್ಯದಲ್ಲಿ ಪ್ರಥಮ ಬಾರಿಗೆ ಮತಾಂತರ ತಡೆ ಕಾಯ್ದೆಯಡಿ ಅಪ್ರಾಪ್ತ ಬಾಲಕಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಆಕೆಯ ತಂದೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದರಲ್ಲಿ 17 ವರ್ಷದ ಸಂತ್ರಸ್ತ ವಿದ್ಯಾರ್ಥಿಯ ಅಪ್ರಾಪ್ತ ವಿದ್ಯಾರ್ಥಿನಿಯ ತರಗತಿಯಲ್ಲಿ ಓದುತ್ತಿದ್ದನು. ಈ ಹುಡುಗಿ ತನ್ನ ತಂದೆಯ ಸಹಾಯದಿಂದ ಅವನ ಬ್ರೈನ್ ವಾಷ್ ಮಾಡಿ ಆತನನ್ನು ಮುಸಲ್ಮಾನನನ್ನಾಗಿ ಮತಾಂತರಗೊಳಿಸಿದ್ದಳು. ಸಂತ್ರಸ್ತ ವಿದ್ಯಾರ್ಥಿಯ ಪೋಷಕರಿಗೆ ಇದು ತಿಳಿದಿರಲಿಲ್ಲ. ಅವನ ಶಾಲೆಯ ಚೀಲದಲ್ಲಿ ಗೋಲು ಟೊಪ್ಪಿಗೆ ಮತ್ತು ಇಸ್ಲಾಮಿಕ್ ಸಾಹಿತ್ಯವನ್ನು ಕಂಡು ಅವರು ಅನುಮಾನಗೊಂಡರು. ಆಗ ಈ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಿಲ್ಲ.
ಸಂತ್ರಸ್ತನು ಮನೆಯಲ್ಲಿ ಪೂಜೆ ಮತ್ತು ಪ್ರಾರ್ಥನೆಗಳನ್ನು ಮಾಡುವುದನ್ನು ನಿಲ್ಲಿಸಿದ್ದನು. ಮತ್ತು ಅವನು ದಸರಾ ಪೂಜೆಗೆ ಹಾಜರಾಗಲು ನಿರಾಕರಿಸಿದ್ದನು. ಇದರಿಂದ ಪೋಷಕರಿಗೆ ಅನುಮಾನ ಬಂದು ಆತನ ಶಾಲೆಯ ಚೀಲವನ್ನು ಪರಿಶೀಲಿಸಿದರು. ಆಗ ಅದರಲ್ಲಿ ಗೋಲು ಟೋಪಿಗಳು ಮತ್ತು ಇಸ್ಲಾಮಿಕ್ ಸಾಹಿತ್ಯ ಪತ್ತೆಯಾಗಿವೆ. ಆತನ ಮೊಬೈಲನಲ್ಲಿ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಸಂತ್ರಸ್ತ ಹುಡುಗನ ಪೋಷಕರು, ಅಪ್ರಾಪ್ತ ಬಾಲಕಿಯು ನಮ್ಮ ಮಗನನ್ನು ಅವಳ ತಂದೆಯೊಂದಿಗೆ ಮಸೀದಿಗೆ ಕರೆದುಕೊಂಡು ಹೋಗುತ್ತಿದ್ದಳು ಹಾಗೂ ನನ್ನ ಮಗನನ್ನು ಅವನ ಅನುಮತಿಯಿಲ್ಲದೆ ಮತಾಂತರಗೊಳಿಸಲಾಗಿದೆಯೆಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳಿಗೆ ಧರ್ಮ ಶಿಕ್ಷಣ ಇಲ್ಲದ್ದರಿಂದ, ಅವರನ್ನು ಕ್ರೈಸ್ತರು ಮತ್ತು ಮುಸ್ಲಿಮರು ಬ್ರೈನ್ ವಾಷ್ ಅಥವಾ ಆಮಿಷವೊಡ್ಡಿ ಮತಾಂತರಗೊಳಿಸುತ್ತಾರೆ ಎನ್ನುವುದನ್ನು ಗಮನಿಸಬೇಕು ! |