ರಾಜ್ಯ ಸರಕಾರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಳೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಇವರ ಹಿಂದುದ್ರೋಹಿ ಹೇಳಿಕೆ !
ಧಾರವಾಡ – ಹಿಂದೂ ಶಬ್ದ ಉಪಯೋಗಿಸುವ ಲಿಂಗಾಯತ ಜನರಿಗೆ ಭವಿಷ್ಯವಿಲ್ಲ. ಲಿಂಗಾಯತರಲ್ಲಿ ಇದರ ಬಗ್ಗೆ ಇರುವ ಗೊಂದಲ ಮೊದಲು ದೂರಗೊಳಿಸಬೇಕು. ಇದರ ನಂತರ ಧರ್ಮ ಬೇಕಿದ್ದರೆ ಲಿಂಗಾಯತರು ‘ಹಿಂದೂ’ ಈ ಪದ ಬಿಡಲೇಬೇಕಾಗುತ್ತದೆ. ಜೈನ ಮತ್ತು ಸೀಖ ಇವರಿಗೆ ಈಗ ‘ಸ್ವತಂತ್ರ ಧರ್ಮ’ ಎಂದು ಮಾನ್ಯತೆ ದೊರೆತಿದೆ. ಲಿಂಗಾಯತ ಧರ್ಮಕ್ಕೂ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವುದು, ಎಂದು ವಿಶ್ವಾಸ ಇದೆ, ಸ್ವತಂತ್ರ ಧರ್ಮದ ಮಾನ್ಯತೆ ದೊರೆಯುವ ಯೋಗ್ಯತೆ ಕೂಡ ಇದೆ; ಆದ್ದರಿಂದ ಹಿಂದುತ್ವಕ್ಕೆ ಅಂಟಿಕೊಂಡಿರದೆ ಲಿಂಗಾಯತರು ಜಾಗೃತವಾಗಿ ಇದರ ಬಗ್ಗೆ ತಿಳಿದುಕೊಳ್ಳಬೇಕು. ಈ ಸಂದರ್ಭದಲ್ಲಿ ಚಿಂತನೆ ನಡೆಯಬೇಕು, ಎಂದು ಬಳೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು. ಇಲ್ಲಿಯ ಚೆನ್ನಬಸವೇಶ್ವರ ನಗರದಲ್ಲಿನ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಧಾರವಾಡ ಜಿಲ್ಲಾ ಮಹಾಸಭೆಯು ರಾಜ್ಯ ಸರಕಾರದವತಿಯಿಂದ ಆಯೋಜಿಸಲಾದ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದಲ್ಲಿ ೧೨ ನೇ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದಿರುವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.
ನಿಜಗುಣಾನಂದ ಸ್ವಾಮೀಜಿ ಮಾತು ಮುಂದುವರಿಸಿ, ಲಿಂಗಾಯತರ ಈಗಿನ ಪರಿಸ್ಥಿತಿ ಗೊಂದಲದಲ್ಲಿದ್ದು ಮುಂದಿನ ೪೦ ವರ್ಷದಲ್ಲಿ ಅದು ವಿಷಮ ಪರಿಸ್ಥಿತಿಗೆ ತಲುಪುವುದು; ಆದ್ದರಿಂದ ಈಗಲೇ ಲಿಂಗಾಯತರು ಎಚ್ಚರಗೊಂಡು ಜಾತಿಗೆ ಅಂಟಿಕೊಂಡಿರದೆ ಸ್ವತಂತ್ರ ಧರ್ಮ ಎಂದು ಜೋಡಣೆ ಆಗಬೇಕು. ಇದು ಬಹಳ ಗಂಭೀರ ವಿಷಯವಾಗಿದ್ದು ಲಿಂಗಾಯತರು ಧರ್ಮದ ಬಗ್ಗೆ ಹಾಗೂ ಮೂಲ ವಿಷಯದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಇದಕ್ಕಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಇದರ ನೇತೃತ್ವ ವಹಿಸಿ ಮಠಾಧೀಶರಿಂದ ಚಿಂತನ ಮಂಥನ ಮಾಡಿಸಿಕೊಳ್ಳುವುದಕ್ಕಾಗಿ ವೇದಿಕೆ ನಿರ್ಮಾಣದ ಅವಶ್ಯಕತೆ ಉದ್ಭವಿಸಿದೆ.
‘ಲಿಂಗಾಯತ ಜನಾಂಗಕ್ಕೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ದೊರೆಯಲೇಬೇಕು ! (ಅಂತೆ) – ಮಾಜಿ ಸಚಿವ ಬಿ.ಆರ್. ಪಾಟೀಲ
ಮಾಜಿ ಸಚಿವ ಬಿ.ಆರ್. ಪಾಟೀಲ್ ಇವರು, ವೀರಶೈವ ಲಿಂಗಾಯತ ಜನಾಂಗದ ಸ್ಥಾಪನೆ ವೈಜ್ಞಾನಿಕ ಆಧಾರದಲ್ಲಿ ಆಗಿದೆ. ಅದಕ್ಕೆ ಧರ್ಮದ ಮಾನ್ಯತೆ ದೊರೆಯಲೇಬೇಕು. ಸಮಾಜ ಆರ್ಥಿಕ ಅಭಿವೃದ್ಧಿಗಾಗಿ ಬ್ಯಾಂಕುಗಳ ಸ್ಥಾಪನೆ ಮಾಡುವುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈ ರೀತಿಯ ಹೇಳಿಕೆ ನೀಡಿ ಹಿಂದೂಗಳಲ್ಲಿ ಬಿರುಕು ಮೂಡಿಸುವ ಆಘಾತಕಾರಿ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಧರ್ಮಾಭಿಮಾನಿ ಲಿಂಗಾಯತರು ಕಾನೂನು ರೀತಿಯಲ್ಲಿ ವಿರೋಧಿಸುವುದು ಆವಶ್ಯಕವಾಗಿದೆ ! ಇಲ್ಲದಿದ್ದರೆ ಮತಾಂಧರಿಂದ ಹಿಂದೂಗಳ ಜೊತೆಗೆ ಲಿಂಗಾಯತರ ಅವನತಿ ಶತ ಸಿದ್ಧ. ರಾಜಕೀಯ ಲಾಭಕ್ಕಾಗಿ ಈ ರೀತಿಯ ಬೇಡಿಕೆ ಸಲ್ಲಿಸುವ ಹಿಂದೂದ್ರೋಹಿ ರಾಜಕಾರಣಿಗಳು ! |