ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಹಿಂಸಾತ್ಮಕ ಎಂದು ಹೇಳುವ ಗೀತರಚನಾಕಾರ ಜಾವೇದ್ ಅಖ್ತರ್ ಅವರಿಂದ ಹಿಂದೂ ಸಂಸ್ಕೃತಿಯ ಬಗ್ಗೆ ಶ್ಲಾಘನೆ !
ಮುಂಬಯಿ – ಕೆಲವು ತಿಂಗಳ ಹಿಂದೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಈ ಹಿಂದುತ್ವನಿಷ್ಠ ಸಂಘಟನೆಗಳನ್ನು ತಾಲಿಬಾನ್‌ಗೆ ಹೋಲಿಸಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಹಿಂಸಾತ್ಮಕ ಎಂದು ನಿರ್ಧರಿಸಿದ ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಇವರು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಮನಸೆ) ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತ್ರ ಹಿಂದೂ ಸಂಸ್ಕೃತಿಯನ್ನು ಹಾಡಿ ಹೊಗಳಿದ್ದಾರೆ. ‘ಹಿಂದೂ ಸಂಸ್ಕೃತಿಯಿಂದಲೇ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ’ ಎಂದು ಜಾವೇದ್ ಅಖ್ತರ್ ಹಿಂದೂ ಸಂಸ್ಕೃತಿಯ ಬಗ್ಗೆ ಗೌರವೋದ್ಗರಿಸಿದರು. ಮನಸೆ ವತಿಯಿಂದ ಶಿವಾಜಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ದೀಪೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ವೇಳೆ ಚಿತ್ರಕಥೆಗಾರ ಸಲೀಂ ಖಾನ್, ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ ಮತ್ತು ಚಲನಚಿತ್ರ ನಿರ್ದೇಶಕ ಅಶುತೋಷ್ ಗೋವಾರಿಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
(ಸೌಜನ್ಯ – TV9 Marathi)
ರಾಮಾಯಣವು ಭಾರತೀಯ ಸಂಸ್ಕೃತಿಯ ಪರಂಪರೆ !
ಹಿಂದೂ ಸಂಸ್ಕೃತಿಯನ್ನು ಶ್ಲಾಘಿಸುತ್ತಾ ಜಾವೇದ್ ಅಖ್ತರ್ ಇವರು, ”ರಾಮಾಯಣವು ಭಾರತೀಯ ಸಂಸ್ಕೃತಿಯ ಪರಂಪರೆಯಾಗಿದೆ. ನಾನು ಶ್ರೀರಾಮ ಮತ್ತು ಸೀತೆಯ ದೇಶದಲ್ಲಿ ಜನಿಸಿದ್ದೇನೆ. ನಾನು ರಾಮ ಮತ್ತು ಸೀತೆಯನ್ನು ಕೇವಲ ಹಿಂದೂ ಪರಂಪರೆ ಎಂದು ಪರಿಗಣಿಸುವುದಿಲ್ಲ. ಇದು ಈ ದೇಶದ ಪ್ರತಿಯೊಬ್ಬ ವ್ಯಕ್ತಿಯ ಆಸ್ತಿಯಾಗಿದೆ. ರಾಮ ಮತ್ತು ಸೀತೆ ಈ ದೇಶದ ಎಲ್ಲಾ ಪ್ರಜೆಗಳ ದೇವರಾಗಿದ್ದಾರೆ. ಭಾರತದ ಹಿಂದೂ ಸಂಸ್ಕೃತಿ ಸಹಿಷ್ಣುವಾಗಿದ್ದರಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದೆ’, ಎಂದರು. ‘ಜೈ ಸಿಯಾರಾಂ’ನ ಘೋಷಣೆ ನೀಡುತ್ತಾ ನೆರೆದಿದ್ದವರಿಗೆ ಘೋಷಣೆ ಕೂಗಲೂ ಹೇಳಿದರು. (ಶ್ರೀರಾಮಮಂದಿರವನ್ನು ವಿರೋಧಿಸುವವರಿಗೆ ಜಾವೇದ್ ಅಖ್ತರ್ ಎಂದಾದರೂ ವಿರೋಧಿಸಿದ್ದಾರಾ ? ಕಾಶಿ ಮತ್ತು ಮಥುರಾದಲ್ಲಿನ ಹಿಂದೂಗಳ ದೇವಾಲಯಗಳನ್ನು ಕಬಳಿಸಿದ ಮುಸಲ್ಮಾನರ ಬಗ್ಗೆ ಅವರು ಏಕೆ ಮಾತನಾಡುವುದಿಲ್ಲ ? – ಸಂಪಾದಕರು)
‘ಹಿಂದೂಗಳಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ (ಯಂತೆ) !’ – ಜಾವೇದ್ ಅಖ್ತರ್
‘ನಾವು ಸರಿ ಇದ್ದೇವೆ ಮತ್ತು ಇತರರು ತಪ್ಪುತ್ತಿದ್ದಾರೆ’, ಎಂದು ಹೇಳುವುದು ಹಿಂದೂ ಸಂಸ್ಕೃತಿಯ ಭಾಗವಾಗಲು ಸಾಧ್ಯವೇ ಇಲ್ಲ. ಆದರೆ ಈಗ ಅಸಹಿಷ್ಣುತೆ ಹೆಚ್ಚುತ್ತಿದೆ. (ಹಿಂದೂಗಳಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದರೇ ನಿಖರವಾಗಿ ಏನು ? ಜಾವೇದ್ ಅಖ್ತರ್ ಇದನ್ನು ಸ್ಪಷ್ಟಪಡಿಸಬೇಕು. ಹೀಗೆ ಹೇಳಿ ಅಖ್ತರ್ ಹಿಂದೂಗಳನ್ನು ಹಿಂಸಾತ್ಮಕರು ಎಂದು ಹೇಳುತ್ತಿದ್ದಾರೆ. ಹಿಂದೂಗಳು ಧರ್ಮದ ಆಧಾರದ ಮೇಲೆ ಹಿಂಸೆ ಮಾಡುತ್ತಿದ್ದಾರೆ ಎಂಬುದಕ್ಕೆ ಜಾವೇದ್ ಅಖ್ತರ್ ಇವರು ಒಂದಾದರೂ ಉದಾಹರಣೆ ತೋರಿಸಬೇಕು. – ಸಂಪಾದಕರು) ‘ಶೋಲೆ’ ಚಿತ್ರದಲ್ಲಿ ಪ್ರೇಮಿಯು ದೇವರ ಮೂರ್ತಿಯ ಹಿಂದೆ ನಿಂತು, ‘ದೇವರು ಮಾತನಾಡುತ್ತಾನೆ’ ಎಂದು ಹೇಳಿ ಪ್ರಿಯತಮೆಗೆ ಭಾಸಿಸಿದದ ಬಗ್ಗೆ ಈಗ ವಿರೋಧ ವ್ಯಕ್ತವಾಗುತ್ತಿತ್ತು ಹಿಂದೆ ಹೀಗಾಗುತ್ತಿರಲಿಲ್ಲ, ಎಂದೂ ಜಾವೇದ್ ಅಖ್ತರ್ ಹೇಳಿದ್ದಾರೆ.
(ಇದು ಹಿಂದೂ ದೇವತೆಯ ಅವಹೇಳನೆಯಾಗಿದೆ. ಹಿಂದೆ ಹಿಂದೂಗಳು ಧರ್ಮದ ಅವಹೇಳನದ ಬಗ್ಗೆ ನಿದ್ರಿಸುತ್ತಿದ್ದರು. ಈಗ ಅವರು ಎಚ್ಚೆತ್ತು ಅದನ್ನು ನ್ಯಾಯಸಮ್ಮತವಾಗಿ ವಿರೋಧಿಸುತ್ತಿದ್ದಾರೆ. ಜಾವೇದ್ ಅಖ್ತರ್ ಇದನ್ನು ‘ಅಸಹಿಷ್ಣುತೆ’ ಎಂದು ಕರೆದರೆ ಅವರು ಧರ್ಮಾಭಿಮಾನಿ ಹಿಂದೂಗಳನ್ನು ವಿರೋಧಿಸುತ್ತಿದ್ದಾರೆ. ಹಿಂದೂ ಎಂದಿಗೂ ಇಂತಹ ಸಂದರ್ಭದಲ್ಲಿ ‘ಸರ್ ತನ್ ಸೆ ಜುದಾ’ (ತಲೆಯನ್ನು ಮುಂಡದಿಂದ ಬೇರ್ಪಡಿಸುವುದು) ಎಂದು ಹೇಳುವುದಿಲ್ಲಾ. ಆದರೂ ಜಾವೇದ್ ಅಖ್ತರ್ ಅವರನ್ನು ಅಸಹಿಷ್ಣು ಎಂದು ಕರೆಯುತ್ತಾರೆ, ಆದರೆ ಅವರು ಸ್ವಧರ್ಮೀಯರ ಬಗ್ಗೆ ಮೌನವಾಗಿದ್ದಾರೆ, ಎಂಬುದನ್ನು ಅರಿತುಕೊಳ್ಳಿ ! – ಸಂಪಾದಕರು)
ಕೆಲವು ತಿಂಗಳ ಹಿಂದೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾವೇದ್ ಅಖ್ತರ್ ಇವರು, ‘ತಾಲಿಬಾನ್ ಇಸ್ಲಾಮಿಕ್ ರಾಷ್ಟ್ರವನ್ನು ರಚಿಸಲು ಪ್ರಯತ್ನಿಸುತ್ತಿರುವ ರೀತಿಯಲ್ಲಿ, ನಮ್ಮಲ್ಲಿ ಕೆಲವರು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಪ್ರಸ್ತುತಪಡಿಸುತ್ತಾರೆ. ‘ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಜರಂಗ ದಳ ಮತ್ತು ತಾಲಿಬಾನ್‌ಗಳಂತಹ ಸಂಘಟನೆಗಳ ಧ್ಯೇಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರ ಮನಸ್ಥಿತಿಯೂ ಒಂದೇಯಾಗಿದೆ. ಈ ಸಂಘಟನೆಗಳ ಗುರಿಗಳ ಮಾರ್ಗದಲ್ಲಿ ಭಾರತದ ಸಂವಿಧಾನವು ಅಡ್ಡಿಯಾಗುತ್ತಿದೆ; ಆದರೆ ಅವಕಾಶ ಸಿಕ್ಕರೆ ಅವರು ಸಂವಿಧಾನದ ಗಡಿಯನ್ನೂ ದಾಟುವರು’ ಎಂದು ಅಖ್ತರ್ ಹೇಳಿದ್ದರು.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರಿಂದ ದೇಶದ ಸ್ಥಿತಿ ಏನಾಗಿದೆ ಎಂಬುದನ್ನೂ ಜಾವೇದ್ ಅಖ್ತರ್ ಹೇಳಬೇಕು ! ಹಿಂದೂ ರಾಷ್ಟ್ರದ ಪರಿಕಲ್ಪನೆಯು ಹಿಂದೂ ಸಂಸ್ಕೃತಿಯನ್ನು ಆಧರಿಸಿದೆ. ಒಂದೆಡೆ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಹಿಂಸಾತ್ಮಕ ಎಂದು ಹೇಳುವುದು ಮತ್ತೊಂದೆಡೆ ‘ಹಿಂದೂ ಸಂಸ್ಕೃತಿ ಸಹಿಷ್ಣು’ ಎಂದು ಹೇಳುವುದು ಇದು ಜಾವೇದ್ ಅಖ್ತರ್ ಅವರ ಅವಕಾಶವಾದಿಯಾಗಿದೆ. ಜಾವೇದ್ ಅಖ್ತರ್ ನಿಜವಾಗಿಯೂ ಹಿಂದೂ ಸಂಸ್ಕೃತಿಯ ಮಹತ್ವವನ್ನು ಅರ್ಥಮಾಡಿಕೊಂಡಿದ್ದರೆ, ಹಿಂದೂ ಧರ್ಮವನ್ನು ಹಿಂಸಾತ್ಮಕ ಎಂದು ಹೇಳುವ ಬಗ್ಗೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. |