ದೀಪಾವಳಿ ವೇಳೆಯೇ ‘ಪ್ಲೇ ಸ್ಟೋರ್‌’ನಿಂದ ಸನಾತನ ಸಂಸ್ಥೆಯ ೫ ಆಪ್ಸ್ ತೆಗೆದ ‘ಗೂಗಲ್’ !

  • ನಾಗರಿಕರ ವಿರುದ್ಧ ಹಿಂಸಾಚಾರದಲ್ಲಿ ತೊಡಗಿರುವ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಕಾರಣಗಳನ್ನು ನೀಡಿ ಕ್ರಮ!

  • ‘ಹಿಂದೂಗಳು ಆಧ್ಯಾತ್ಮಿಕವಾಗಿ ಹೇಗೆ ಜೀವಿಸಬೇಕು?’, ಈ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಆಪ್ಸ್ ನಿಂದ ಹಿಂಸಾಚಾರಕ್ಕೆ ಹೇಗೆ ಪ್ರಚೋದನೆ ಸಿಗುತ್ತದೆ ? – ಸನಾತನ ಸಂಸ್ಥೆ

ಮುಂಬಯಿ – ಸನಾತನ ಸಂಸ್ಥೆ ಸಾತ್ತ್ವಿಕ ಆಚಾರವನ್ನು ಪಾಲಿಸುವುದು, ಧರ್ಮಶಿಕ್ಷಣ ಮತ್ತು ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಅನೇಕ ‘ಆಪ್ಸ್‌’ ತಯಾರಿಸಿ, ಆ ಮೂಲಕ ಕಳೆದ ಅನೇಕ ವರ್ಷಗಳಿಂದ ಅಧ್ಯಾತ್ಮದ ಪ್ರಸಾರ ಮಾಡುತ್ತಿದೆ. ಇದಕ್ಕಾಗಿ, ಈ ಆಪ್ಸ್ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿವೆ; ಆದಾಗ್ಯೂ, ದೀಪಾವಳಿ ಹಬ್ಬದ ಸಮಯದಲ್ಲಿಯೇ ಅಂದರೆ ನವೆಂಬರ್‌ ೮ ರಿಂದ ಸನಾತನ ಸಂಸ್ಥೆಯ ೫ ಆಪ್ಸ್ ಅಲ್ಲಿಂದ ತೆಗೆದುಹಾಕಲಾಗಿದೆ, ಅಂದರೆ ‘ಸಸ್ಪೆಂಡ್’ ಮಾಡಲಾಗಿದೆ. ಈ ವಿಷಯದಲ್ಲಿ ‘ಗೂಗಲ್’ ಸನಾತನ ಸಂಸ್ಥೆಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಪ್ರಕ್ರಿಯೆಯ ನಂತರ, ಗೂಗಲ್‌ ನಿಂದ ‘ಕಂಟೆಂಟ ರಿಲೇಟೆಡ್‌ ಟು ಮೂವಮೆಂಟ್ಸ ಆರ್‌ ಅರ್ಗನೈಸೇಶನ್‌ ಅಸೋಸಿಯೇಟೆಡ್‌ ವಿತ್‌ ವಾಯಲೆನ್ಸ ಅಗೇನ್ಸ್ಟ ಸಿವಿಲಿಯನ್ಸ’ (ನಾಗರಿಕರ ವಿರುದ್ಧ ಹಿಂಸಾಚಾರದಲ್ಲಿ ತೊಡಗಿರುವ ಸಂಘಟನೆಗಳೊಂದಿಗೆ ಸಂಬಂಧಿಸಿದ ಮಾಹಿತಿ) ಇರುವುದರಿಂದ ಈ ‘ಆಪ್ಸ್‌’ ತೆಗೆಯುತ್ತಿದ್ದೇವೆ’ ಎಂದು ಇ- ಮೇಲ್‌ ಮೂಲಕ ತಿಳಿಸಲಾಗಿದೆ. ‘ಸಸ್ಪೆಂಡ್’ ಮಾಡಿರುವ ಆಪ್‌ ಗಳಲ್ಲಿ, ‘ಸನಾತನ ಚೈತನ್ಯವಾಣಿ’ ಆಪ್ಸ್ ಗೆ ೬೫ ಸಾವಿರ ಬಳಕೆದಾರರು ಇದ್ದಾರೆ. ಈ ಆಪ್‌ನಲ್ಲಿ ವಿವಿಧ ದೇವತೆಗಳ ನಾಮಜಪ, ಶ್ಲೋಕ, ಸ್ತೋತ್ರಗಳು ಮುಂತಾದವುಗಳಿವೆ. ‘ಶ್ರಾದ್ಧವಿಧಿ’ ಆಪ್‌ ನಲ್ಲಿ ಹಿಂದೂ ಧರ್ಮದ ‘ಶ್ರಾದ್ಧಕರ್ಮ’ ಈ ವಿಷಯದ ಅಧ್ಯಾತ್ಮಶಾಸ್ತ್ರದ ಮಾಹಿತಿಯನ್ನು ನೀಡಲಾಗಿದ್ದು, ಈ ವಿಷಯದಲ್ಲಿ ಸಂದೇಹ ನಿವಾರಣೆಯನ್ನು ಕೂಡ ಮಾಡಲಾಗಿದೆ. ‘ಶ್ರೀ ಗಣೇಶ ಪೂಜಾ ಮತ್ತು ಆರತಿ’ ಆಪ್‌ ನಲ್ಲಿ, ಶ್ರೀ ಗಣೇಶಪೂಜೆಯ ಬಗ್ಗೆ ವಿವರವಾದ ಅಧ್ಯಾತ್ಮಶಾಸ್ತ್ರೀಯ ಮಾಹಿತಿಯನ್ನು ನೀಡಲಾಗಿದೆ. ಈ ಆಪ್‌ ಮೂಲಕ ಸಮಾಜಕ್ಕೆ ಸಾಧನೆ ಮತ್ತು ಧಾರ್ಮಿಕ ಕೃತಿಗಳನ್ನು ಒಳ್ಳೆಯ ರೀತಿಯಲ್ಲಿ ಮಾಡಲು ಮಾರ್ಗದರ್ಶನ ಸಿಗುತ್ತಿದೆ. ‘ಈ ಆಪ್‌ ನಿಂದ ಹಿಂಸಾಚಾರಕ್ಕೆ ಪ್ರೋತ್ಸಾಹ ಹೇಗೆ ಸಿಗುತ್ತದೆ ?’ ಎಂದು ಸನಾತನ ಸಂಸ್ಥೆ ಪ್ರಶ್ನಿಸಿದೆ.

‘ಗೂಗಲ್’ ಮಾಡಿರುವ ಈ ಕ್ರಮವನ್ನು ಸನಾತನ ಸಂಸ್ಥೆಯು ಖಂಡಿಸುತ್ತದೆ. ಹಾಗೆಯೇ ಈ ವಿಷಯದಲ್ಲಿ ಕಾನೂನು ಸಲಹೆ ತೆಗೆದುಕೊಳ್ಳುತ್ತಿದೆ ಎಂದೂ ಸನಾತನ ಸಂಸ್ಥೆಯ ವತಿಯಿಂದ ತಿಳಿಸಲಾಗಿದೆ. ಆಪ್‌ ಬಳಕೆದಾರರಿಗಾಗಿ ಈ ಆಪ್‌ ಗಳಲ್ಲಿನ ಮಾಹಿತಿಯು Sanatan.orgSanatan.org ಈ ಜಾಲತಾಣದಲ್ಲಿ ಉಚಿತವಾಗಿ ಲಭ್ಯವಿದೆ ಮತ್ತು ಪ್ರತಿಯೊಬ್ಬರೂ ತಪ್ಪದೇ ಇದರ ಲಾಭವನ್ನು ಪಡೆದುಕೊಳ್ಳಬೇಕು, ಎಂದೂ ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.

ತೆಗೆದುಹಾಕಿದ ಆಪ್ಸ್‌ಗಳನ್ನು ಸಂಚಾರವಾಣಿಯಲ್ಲಿ ಈಗಲೂ ಉಪಯೋಗಿಸಬಹುದು !

ಈ ‘ಆಪ್’ ಗಳನ್ನು ‘ಗೂಗಲ್‌ ಪ್ಲೇ ಸ್ಟೋರ್‌’ನಲ್ಲಿ ಕಾಣಿಸದಿದ್ದರೂ, ಅವುಗಳನ್ನು ನಿಷೇಧಿಸಲಾಗಿಲ್ಲ. ಈ ಆಪ್‌ ಅನ್ನು ಯಾರು ‘ಡೌನ್‌ಲೋಡ್‌ ಮಾಡಿಕೊಂಡಿದ್ದಾರೆಯೋ, ಅವರ ಮೊಬೈಲ್‌ ನಲ್ಲಿ ಅವುಗಳು ಕಾರ್ಯನಿರ್ವಹಿಸುತ್ತವೆ. ಆದರೆ ಈ ಸಮಸ್ಯೆ ಪರಿಹಾರವಾಗುವವರೆಗೆ ಅದನ್ನು ‘ಅಪ್‌ ಡೇಟ್‌'(ನವೀಕರಿಸಲು) ಮಾಡಲು ಬರುವುದಿಲ್ಲ. ಇದನ್ನು ಎಲ್ಲರೂ ಗಮನಿಸಬೇಕು. ‘ಗೂಗಲ್‌ ಪ್ಲೇ ಸ್ಟೋರ್’ ನಿಂದ ಸಸ್ಪೆಂಡ್‌ ಮಾಡಿರುವ ಆಪ್‌ ಗಳ ಹೆಸರುಗಳನ್ನು ಮುಂದೆ ನೀಡಲಾಗಿದೆ.

೧. ‘ಸನಾತನ ಸಂಸ್ಥೆ’ ಆಪ್‌

೨. ‘ಸನಾತನ ಚೈತನ್ಯವಾಣಿ’ ಆಪ್‌

೩. ‘ಗಣೇಶ ಪೂಜಾ ಮತ್ತು ಆರತಿ’ ಆಪ್‌

೪. ‘ಶ್ರಾದ್ಧವಿಧಿ’ ಆಪ್‌

೫. ‘survival guide’’ ಆಪ್‌ (ಆಪತ್ಕಾಲದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು?ಎನ್ನುವ ಮಾರ್ಗದರ್ಶನವನ್ನು ಇದರಲ್ಲಿ ನೀಡಲಾಗಿದೆ).

ಸಂಪಾದಕೀಯ ನಿಲುವು

ಸನಾತನ ಸಂಸ್ಥೆಯು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಭಾರತೀಯ ನ್ಯಾಯಾಲಯದ ತೀರ್ಪುಗಳಿಂದ ಆಯಾ ಸಮಯದಲ್ಲಿ ಸ್ಪಷ್ಟ ಪಡಿಸಿರುವಾಗ ಗೂಗಲ್‌ ಯಾವ ಆಧಾರದಲ್ಲಿ ಹೀಗೆ ಹೇಳುತ್ತಿದೆಯೆಂದು ಸ್ಪಷ್ಟಪಡಿಸಬೇಕು!

ಭಯೋತ್ಪಾದಕ ಝಾಕೀರ್‌ ನಾಯಕ ಇವನಿಗೆ ಸಂಬಂಧಿಸಿದ ಆಪ್ಸ್ ತೆಗೆಯದ ಗೂಗಲ್‌ ಸಂಸ್ಥೆಯು ಸಮಾಜಕ್ಕೆ ಅಧ್ಯಾತ್ಮವನ್ನು ಹೇಳುವ ಸನಾತನ ಸಂಸ್ಥೆಯ ಆಪ್ಸ್ ಮಾತ್ರ ಅಳಿಸುತ್ತದೆ ಎನ್ನುವುದನ್ನು ಗಮನದಲ್ಲಿಡಬೇಕು.