ಮುಸಲ್ಮಾನೇತರ ಹುಡುಗನ ಜೊತೆಗೆ ಮಾತನಾಡಿದಳೆಂದು ಮಗಳು ಫಾತಿಮಾಳನ್ನು ಕೊಂದ ತಂದೆ !

ಎರ್ನಾಕುಲಂ (ಕೇರಳ) – ಇಲ್ಲಿ ಓರ್ವ ಮುಸಲ್ಮಾನೇತರ ಹುಡುಗನ ಜೊತೆಗೆ ಮಾತನಾಡಿರುವ ಫಾತಿಮಾ ಎಂಬ ಹುಡುಗಿಯನ್ನು ಆಕೆಯ ತಂದೆ ಅಭಿಜ್ ಮಹಮ್ಮದ್ ಇವನು ಕೊಲೆ ಮಾಡಿದ್ದಾನೆ. ಮಹಮ್ಮದ್ ಇವನು ಇಂಜಿನಿಯರ್ ಆಗಿದ್ದು ಅವನಿಗೆ ತನ್ನ ಮಗಳು ಸಂಬಂಧಿತ ಹುಡುಗನ ಜೊತೆಗೆ ಮಾತನಾಡುವುದು ಹಿಡಿಸುತ್ತಿರಲಿಲ್ಲ. ಅಕ್ಟೋಬರ್ ೨೯ ರಂದು ಆಕೆ ಮುಸಲ್ಮಾನೇತರ ಹುಡುಗನ ಜೊತೆಗೆ ಮೊಬೈಲಿನಲ್ಲಿ ಮಾತನಾಡುವುದು ಗಮನಕ್ಕೆ ಬಂದ ನಂತರ ಮಹಮ್ಮದನು ಸಿಟ್ಟಿನಭರದಲ್ಲಿ ಆಕೆಗೆ ಕಬ್ಬಿಣದ ರಾಡಿನಿಂದ ಹಿಗ್ಗಾಮುಗ್ಗ ಥಳಿಸಿದ್ದಾನೆ. ನಂತರ ಬಲವಂತವಾಗಿ ಆಕೆಯ ಬಾಯಿಗೆ ವಿಷ ಸುರಿದಿದ್ದಾನೆ. ಇದರಿಂದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು; ಆದರೆ ನವೆಂಬರ್ ೭ ರಂದು ಆಕೆ ಸಾವನ್ನಪ್ಪಿದಳು. ಈ ಪ್ರಕರಣದಲ್ಲಿ ಫಾತಿಮಾಳ ತಾಯಿಯು ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ಮಹಮ್ಮದ್ ನನ್ನು ಬಂಧಿಸಿದ್ದಾರೆ.

೧೪ ವರ್ಷದ ಫಾತಿಮಾ ೧೨ ನೇ ತರಗತಿಯ ಓರ್ವ ಮುಸಲ್ಮಾನೇತರ ಹುಡುಗನ ಜೊತೆಗೆ ಮಾತನಾಡುತ್ತಿದ್ದಳು. ಇದರಿಂದ ಅಕ್ಟೋಬರ್ ೨೯ ರಂದು ಆಕೆಯ ತಂದೆಯು ಆಕೆಯನ್ನು ಥಳಿಸಿದ್ದನು. ಆ ಸಮಯದಲ್ಲಿ ಆಕೆಯ ತಾಯಿಯು ತಂದೆಯನ್ನು ತಡೆಯುವ ಪ್ರಯತ್ನ ಮಾಡಿದ್ದಳು.

ಸಂಪಾದಕೀಯ ನಿಲುವು

ಲವ್ ಜಿಹಾದ್’ ಅನ್ನು ವಿರೋಧಿಸುವ ಹಿಂದುತ್ವನಿಷ್ಠರಿಗೆ ‘ಪ್ರೀತಿಗೆ ಧರ್ಮದ ಬಂಧನ ಇರುವುದಿಲ್ಲ” ಎಂದು ಉಪದೇಶ ನೀಡುವ ಪ್ರಗತಿ (ಅಧೋ) ಪರರು ಈಗೇಕೆ ಮೌನ ವಹಿಸಿದ್ದಾರೆ ?