ಕೆಲವು ಘಂಟೆಗಳ ಕದನವಿರಾಮದ ವಿಷಯದ ಬಗ್ಗೆಯೂ ಹೇಳಿಕೆ!
ತೆಲ್ ಅವಿವ್ (ಇಸ್ರೇಲ್) – ಹಮಾಸ್ ಅನ್ನು ನಷ್ಟಗೊಳಿಸಿದ ನಂತರ ಗಾಝಾದಲ್ಲಿ ಭದ್ರತೆಯ ಜವಾಬ್ದಾರಿ ಇಸ್ರೇಲ್ ದೇಶದ್ದಾಗಿರುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಮತ್ತು ಪ್ಯಾಲೆಸ್ತೇನಿಯನ್ನರಿಗೆ ಸಹಾಯ ಮಾಡಲು ಸ್ವಲ್ಪ ಕಾಲದವರೆಗೆ ಯುದ್ಧವನ್ನು ನಿಲ್ಲಿಸಲು ಸಿದ್ಧರಿರುವುದಾಗಿ ತಿಳಿಸಿದರು. ಅವರು ಮುಂದುವರಿಸಿ, “ನಾವು ಪರಿಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಕೆಲವು ಗಂಟೆಗಳ ಕಾಲ ಕದನ ವಿರಾಮವನ್ನು ಘೋಷಿಸ ಬಹುದು.” ಎಂದು ಹೇಳಿದ್ದಾರೆ. ಆದರೆ ಇನ್ನೊಂದೆಡೆ, ಗಾಝಾ ಪಟ್ಟಿಯ ಮೇಲೆ ದಾಳಿ ಎಲ್ಲಿಯವರೆಗೆ ಮುಂದುವರಿಯುವುದೋ, ಅಲ್ಲಿಯ ವರೆಗೆ ನಾವು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹಮಾಸ್, ಹೇಳಿದೆ.
ಕಾರ್ಯಾಚರಣೇ ಪೂರ್ಣಗೊಳ್ಳಲು ಸಮಯ ತಗಲುವುದು!
ಇಸ್ರೇಲ್ ರಕ್ಷಣಾ ಪಡೆಯು ಗಾಝಾದಲ್ಲಿ ಸೇನಾ ಕಾರ್ಯಾಚರಣೆ ಪೂರ್ಣಗೊಳ್ಳಲು ಸಮಯ ತಗಲುತ್ತದೆ, ಆದುದರಿಂದ ಮುಂಬರುವ ಚಳಿಗಾಲವನ್ನು ಗಮನದಲ್ಲಿಟ್ಟುಕೊಂಡು ಯೋಧರಿಗೆ ಆವಶ್ಯಕವಿರುವ ವಸ್ತುಗಳು, ಸಮವಸ್ತ್ರ ನೀಡಲು ಆರಂಭಿಸಲಾಗಿದ್ದು, ಈ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ನಮ್ಮ ನೆಲೆಗಳನ್ನು ಗುರಿ ಮಾಡಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುವುದು! – ಅಮೇರಿಕಾದ ಎಚ್ಚರಿಕೆ
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಅಮೇರಿಕಾ ಇಸ್ರೇಲ್ ಪರವಾಗಿ ನಿಂತಿದ್ದರಿಂದ ಲೆಬನಾನ್, ಇರಾಕ್ ಮತ್ತು ಟರ್ಕಿಯಲ್ಲಿರುವ ಅಮೇರಿಕೆಯ ವಾಯು ನೆಲೆಗಳನ್ನು ಸ್ಥಳೀಯ ಮುಸ್ಲಿಂ ನಾಗರಿಕರು ಗುರಿ ಮಾಡಿದ್ದಾರೆ. ಈ ವಿಷಯದಲ್ಲಿ ಅಮೇರಿಕೆಯ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಮಾತನಾಡಿ, ಇತ್ತೀಚೆಗೆ ನಮ್ಮ ನೆಲೆಗಳ ಮೇಲೆ ದಾಳಿ ಮಾಡುವ ಪ್ರಯತ್ನ ನಡೆದಿದೆ. ಇದನ್ನು ತಡೆಯದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಈ ದೇಶಗಳ ಸರಕಾರಗಳು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.