ಜಿಂದ (ಹರಿಯಾಣ) – ಇಲ್ಲಿಯ ಅಪ್ರಾಪ್ತ ೫೦ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ಶಾಲೆಯ ಮುಖ್ಯೋಪಾಧ್ಯಾಯನನ್ನು ಬಂಧಿಸಲಾಗಿದೆ.
ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷ ರೇಣು ಭಾಟಿಯ ಇವರು ಪತ್ರಕರ್ತರಿಗೆ ಮಾಹಿತಿ ನೀಡುವಾಗ, ನಮ್ಮ ಬಳಿ ೬೦ ಹುಡುಗಿಯರ ಲಿಖಿತ ದುರುಗಳು ಬಂದಿವೆ. ಇದರಲ್ಲಿ ೫೦ ವಿದ್ಯಾರ್ಥಿನಿಯರು, ಶಾಲೆಯಲ್ಲಿ ಅವರ ಲೈಂಗಿಕ ಶೋಷಣೆ ಮಾಡಲಾಗಿದೆ. ಇತರ ೧೦ ಹುಡುಗಿಯರ ಪ್ರಕಾರ ಮುಖ್ಯೋಪಾಧ್ಯಾಯರು ಈ ರೀತಿ ಮಾಡುತ್ತಾರೆ ಇದು ಅವರಿಗೆ ತಿಳಿದಿತ್ತು. ಅದರ ನಂತರ ನಾವು ಪೊಲೀಸರಿಗೆ ದೂರು ನೀಡಿದೆವು ಎಂದು ಹೇಳಿದರು. ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸುತ್ತಾ ಮುಖ್ಯೋಪಾಧ್ಯಾಯನನ್ನು ಬಂಧಿಸಿದ್ದಾರೆ. ಅವರ ಮೇಲೆ ಕಲಂ ೩೫೪ ಅ, ಕಲಂ ೩೪೧ ಮತ್ತು ಪೋಕ್ಸೋ ಕಾನೂನಿನಂತರ್ಗತ ದೂರು ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುಶಿಕ್ಷಕರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿದ್ದರೆ, ಪೋಷಕರು ಯಾರ ಮೇಲೆ ವಿಶ್ವಾಸವಿಡಬೇಕು ? ಇಂತಹವರಿಗೆ ಗಲ್ಲು ಶಿಕ್ಷೆಯೆ ವಿಧಿಸಬೇಕು, ಅಂದರೆ ಇತರರಿಗೆ ಭಯ ಹುಟ್ಟುವುದು ! |