ವಿಶ್ವದ ಅತ್ಯಧಿಕ ಕಲುಷಿತ ನಗರಗಳಲ್ಲಿ ದೆಹಲಿ ಮೊದಲ ಸ್ಥಾನ !

ವಾಯು ಗುಣಮಟ್ಟ ಸೂಚ್ಯಂಕ 700 ತಲುಪಿದೆ !

ನವ ದೆಹಲಿ – ಭಾರತದ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು 700 ಕ್ಕಿಂತ ಮುಂದೆ ತಲುಪಿದೆ. ಇದರಿಂದಾಗಿ, ದೆಹಲಿಯು ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಮೊದಲ ಸ್ಥಾನವನ್ನು ತಲುಪಿದೆ. ಸುಮಾರು 100 ರ ಸೂಚ್ಯಂಕವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ನಂತರ ಅದು ಅಪಾಯಕಾರಿಯಾಗುತ್ತದೆ. ದೆಹಲಿಯ ನಂತರ ಕೊಲಕಾತಾ 206 ರ ಸೂಚ್ಯಂಕದೊಂದಿಗೆ ಮೂರನೇ ಅತ್ಯಂತ ಕಲುಷಿತ ನಗರವಾಗಿದೆ, ಹಾಗೂ ಮುಂಬಯಿ 162 ರ ಸೂಚ್ಯಂಕದೊಂದಿಗೆ ಐದನೇ ಅತ್ಯಂತ ಕಲುಷಿತ ನಗರವಾಗಿದೆ. ಪಾಕಿಸ್ತಾನದ ಲಾಹೋರ್ ನಗರವು ಅತ್ಯಂತ ಕಲುಷಿತ ನಗರಗಳಲ್ಲಿ ಎರಡನೇ ಸ್ಥಾನದಲ್ಲಿದೆ.

1. ಮಾಲಿನ್ಯದಿಂದಾಗಿ ದೆಹಲಿ ಸರಕಾರವು ಪ್ರಾಥಮಿಕ ಶಾಲೆಗಳನ್ನು ನವೆಂಬರ್ 10 ರವರೆಗೆ ಮುಚ್ಚುವಂತೆ ಆದೇಶಿಸಿದೆ. ದೆಹಲಿ ಶಿಕ್ಷಣ ಸಚಿವ ಅತಿಶಿ ಇವರು, 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ವಿಚಾರ ಮಾಡಲಾಗುತ್ತಿದೆಯೆಂದು ಹೇಳಿದ್ದಾರೆ.

2. ವೈದ್ಯಕೀಯ ತಜ್ಞರ ಪ್ರಕಾರ, ಮಾಲಿನ್ಯದಿಂದಾಗಿ ಚರ್ಮ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಆಗುವ ಅಪಾಯ ಅಧಿಕವಾಗಿದೆ. ಇದಲ್ಲದೆ ಮಧುಮೇಹ, ಆಲ್ಝೈಮರ್ ಮತ್ತು ತಲೆನೋವುಗಳ ತೊಂದರೆಯಾಗಬಹುದು. ಮಾಲಿನ್ಯವು ಉಸಿರಾಟದ ಮೇಲೆಯೂ ಪರಿಣಾಮ ಬೀರುವುದು. ಇದು ಚಿಕ್ಕ ಮಕ್ಕಳ ಮೆದುಳಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವರ ಮಾನಸಿಕ ಶಕ್ತಿ ಕಡಿಮೆಯಾಗುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

ಒಳ್ಳೆಯ ವಿಷಯಗಳಿಗೆ ಅಲ್ಲ ಬದಲಾಗಿ ಕೆಟ್ಟ ವಿಷಯಗಳಿಗೆ ಭಾರತದ ರಾಜಧಾನಿ ಮಂಚೂಣಿಯಲ್ಲಿರುತ್ತದೆ, ಇದು ನಾಚಿಕೆಗೇಡಿನ ಸಂಗತಿ ! ಇದಕ್ಕೆ ಎಲ್ಲಾ ಪಕ್ಷದ ಆಡಳಿತಗಾರರು, ಆಡಳಿತ ಮತ್ತು ಜನರೇ ಹೊಣೆ !