ವಾರಣಾಸಿ (ಉತ್ತರಪ್ರದೇಶ) – ಭಾರತದಲ್ಲಿನ ಪ್ರತಿಷ್ಠಿತ ಐಐಟಿ ಬನಾರಸ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಭದ್ರತೆಯ ಬಗ್ಗೆ ಅನುಮಾನ ಹುಟ್ಟುತ್ತಿದೆ. ಇಲ್ಲಿಯ ಐಐಟಿ ಬನಾರಸ ಕಾಲೇಜಿನಲ್ಲಿ ನವಂಬರ್ ೧ ರ ರಾತ್ರಿ ಇಂಜಿನಿಯರಿಂಗಿನ ಓರ್ವ ವಿದ್ಯಾರ್ಥಿನಿಯ ಮಾನಭಂಗ ಮಾಡಲಾಯಿತು. ಬೈಕ್ ನಲ್ಲಿ ಬಂದಿದ್ದ ೩ ಕಾಮುಕರು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನಿಗೆ ಬಂದುಕಿನ ಭಯ ತೋರಿಸಿ ಬೇರೆ ಮಾಡಿ ವಿದ್ಯಾರ್ಥಿನಿಗೆ ಆಕೆಯ ಬಟ್ಟೆ ತೆಗೆಯಲು ಅನಿವಾರ್ಯಗೊಳಿಸಿದರು. ಈ ಘಟನೆಯ ವಿಡಿಯೋ ಕೂಡ ಮಾಡಿದರು. ಈ ಘಟನೆಯ ೨ ದಿನದ ಹಿಂದೆ ಅಂದರೆ ಅಕ್ಟೋಬರ್ ೩೦ ರಂದು ಕೂಡ ಕಾಲೇಜಿನ ಅದೇ ಜಾಗದಲ್ಲಿ ಇನ್ನೊಬ್ಬ ವಿದ್ಯಾರ್ಥಿನಿಗೆ ಮಾನಹಾನಿ ಮಾಡಿರುವುದು ಬೆಳಕಿಗೆ ಬಂದಿದೆ.
೧. ನವೆಂಬರ್ ೧ ರ ಘಟನೆ ಬೆಳಕಿಗೆ ಬಂದ ನಂತರ ನವಂಬರ್ ೨ ಕ್ಕೆ ೨ ಸಾವಿರದ ೫೦೦ ವಿದ್ಯಾರ್ಥಿಗಳು ಕಾಲೇಜಿನ ಪರಿಸರದಲ್ಲಿ ಪ್ರತಿಭಟನೆ ನಡೆಸಿದ್ದರು. ಅಕ್ಟೋಬರ್ ೩೦ ರಂದು ನಡೆದಿರುವ ಘಟನೆಯಲ್ಲಿ ಮಾತ್ರ ಅವಮಾನದ ಭಯಯಲ್ಲಿ ಸಂತ್ರಸ್ತೆ ಶಾಂತವಾಗಿದ್ದು ಮತ್ತು ಆಕೆ ಯಾವುದೇ ಲಿಖಿತ ದೂರು ನೀಡಿಲ್ಲ.
೨. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಸದ ಸದಸ್ಯ ಪ್ರಣವ ಇವರು, ಅಕ್ಟೋಬರ್ ೩೦ ರಂದು ನಡೆದಿರುವ ಘಟನೆಗೆ ಸಂಬಂಧಿತ ಕೆಲವು ಹುಡುಗರ ಗುರುತು ಪತ್ತೆಯಾಗಿದೆ ಎಂದು ಹೇಳಿದರು.
೩. ಬೇಲುಪುರದ ಪೊಲೀಸ ಅಧಿಕಾರಿ ಪ್ರವೀಣ ಸಿಂಹ ಇವರು, ಅನೇಕ ಅನುಮಾನಸ್ಪದರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ‘ಆರೋಪಿ ಜಾಗರೂಕ ಆಗಬಾರದು’, ಆದ್ದರಿಂದ ನಾವು ಈಗ ಯಾರಿಗೂ ಕೂಡ ಗುರುತು ಬಹಿರಂಗಪಡಿಸಿಲ್ಲ. ಕಾಲೇಜಿನ ಪರಿಸರದ ಸುರಕ್ಷೆಗಾಗಿ ೨ ಪೊಲೀಸ ಅಧಿಕಾರಿ (೧ ಪುರುಷ ಮತ್ತು ೧ ಮಹಿಳೆ) ಮತ್ತು ೫ ಪೊಲೀಸ್ ಪೇದೆಗಳನನ್ನು ನೇಮಿಸಲಾಗಿದೆ ಎಂದು ಹೇಳಿದರು.
೪. ಕಾಲೇಜಿನ ಅಧಿಕಾರಿ ಪ್ರಾ. ವಿಕಾಸ ದುಬೆ ಇವರು, ಸುರಕ್ಷಿತ ಕ್ಯಾಂಪಸ್ಸಿನ ಬೇಡಿಕೆ ಪೂರ್ಣಗೊಳಿಸುವುದಕ್ಕಾಗಿ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ. ‘ಬಿಹೆಚ್ಯು’ ಮತ್ತು ‘ಐಐಟಿ’ಯ ಪರಿಸರದಲ್ಲಿ ಕಾಂಪೌಂಡ್ ಕಟ್ಟಲಾಗುವುದು. ಅದರ ಜೊತೆಗೆ ಯಾವ ಸ್ಥಳದಲ್ಲಿ ಮಾನಹಾನಿಯ ಘಟನೆಗಳು ಘಟಿಸಿವೆ, ಅಲ್ಲಿ ರಾತ್ರಿ ಸಮಯದಲ್ಲಿ ದಿಗ್ಬಂದನ ಹಾಕಲಾಗುವುದು ಎಂದು ಹೇಳಿದರು.
೫. ಈ ಕಂಪೌಂಡ್ ಗೆ ೨ ಸಾವಿರದ ೫೦೦ ಐಐಟಿ ವಿದ್ಯಾರ್ಥಿಗಳು ಬೆಂಬಲಿಸಿದ್ದಾರೆ ಆದರೂ ‘ಬಿಹೆಚ್ಯು’ದ ೨೦ ಸಾವಿರ ವಿದ್ಯಾರ್ಥಿಗಳಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಇದಕ್ಕಾಗಿ ಎರಡೂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು‘ಐಐಟಿ’ ಅಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಈ ರೀತಿಯ ಘಟನೆ ನಡೆದಿರುವುದರಿಂದ ಭಾರತದ ಹೆಸರು ಹಾಳಾಗುತ್ತಿದೆ. ಸಂಬಂಧಪಟ್ಟ ಕಾಮುಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! |