ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಭೂಮಿಕೆ

ನವದೆಹಲಿ – ರಾಜಕೀಯ ಪಕ್ಷಗಳಿಗೆ ದೇಣಿಗೆ ಪಡೆಯಲೆಂದು ಸಿದ್ಧಗೊಳಿಸಲಾಗಿರುವ `ಎಲೆಕ್ಟೊರಲ್ ಬಾಂಡ್ ವ್ಯವಸ್ಥೆ’ಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಇದರ ಆಲಿಕೆಯ ಮೊದಲೆ ಅಕ್ಟೋಬರ್ ೩೦ ರಂದು ಭಾರತ ಸರಕಾರದ ಮುಖ್ಯನ್ಯಾಯವಾದಿ ಆರ್. ವೆಂಕಟರಮನಿಯವರು ನ್ಯಾಯಾಲಯದಲ್ಲಿ ಉತ್ತರ ಪ್ರಸ್ತುತಪಡಿಸಿದರು. ರಾಜಕೀಯ ಪಕ್ಷಗಳಿಗೆ ದೊರೆಯುವ ದೇಣಿಗೆಯ ಮಾಹಿತಿ ದೊರೆಯುವುದು ನಾಗರೀಕರ ಮೂಲಭೂತ ಅಧಿಕಾರವಲ್ಲ. ಆದುದರಿಂದ ಜನರಿಗೆ ದೇಣಿಗೆಯ ಮಾಹಿತಿ ದೊರೆಯುತ್ತಿಲ್ಲ, ಹೀಗೆ ಇದ್ದರೂ ಎಲೆಕ್ಟ್ರೋರಲ್ ಬಾಂಡಿನ ವ್ಯವಸ್ಥೆಯನ್ನು ರದ್ದು ಪಡಿಸುವುದೂ ಸಾಧ್ಯವಿಲ್ಲ, ಎಂಬ ಯುಕ್ತಿವಾದವನ್ನು ವೆಂಕಟರಮನಿಯವರು ನ್ಯಾಯಾಲಯದಲ್ಲಿ ಮಂಡಿಸಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಧನಂಜಯ ಚಂದ್ರಚೂಡರವರ ಅಧ್ಯಕ್ಷತೆಯಲ್ಲಿ ೫ ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಅಕ್ಟೋಬರ್ ೩೧ ರಿಂದ ಇದರ ಬಗ್ಗೆ ವಿಚಾರಣೆ ನಡೆಸಲಿದೆ.
`ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ಫೋರಮ್ಸ್’ ಎಂಬ ಸಂಸ್ಥೆಯು ಎಲೆಕ್ಟೋರಲ್ ಬಾಂಡ್ ವ್ಯವಸ್ಥ’ಯನ್ನು ಪ್ರಶ್ನಿಸುತ್ತ ಅರ್ಜಿ ಸಲ್ಲಿಸಿದ್ದು ನ್ಯಾಯವಾದಿ ಪ್ರಶಾಂತ ಭೂಷಣರವರು ಅವರ ವತಿಯಿಂದ ಖಟ್ಲೆ ನಡೆಸುತ್ತಿದ್ದಾರೆ. ಭೂಷಣರವರು ಯುಕ್ತಿವಾದ ಮಂಡಿಸುವಾಗ, ಅಧಿಕಾರದಲ್ಲಿರುವ ಪಕ್ಷಗಳಿಗೆ ದೊಡ್ಡ ಸಂಸ್ಥೆಗಳಿಂದ ದೇಣಿಗೆ ಸ್ವರೂಪದಲ್ಲಿ ನಿಧಿ ದೊರೆಯುತ್ತದೆ ಮತ್ತು ಮುಂದೆ ಸರಕಾರವು ಆ ಸಂಸ್ಥೆಗಳ ಹಿತವನ್ನು ಗಮನದಲ್ಲಿಟ್ಟು ನಿಯಮಗಳನ್ನು ರೂಪಿಸುತ್ತದೆ. ಅ ಸಂಸ್ಥೆಗಳಿಗೆ ಇದರಿಂದ ಆರ್ಥಿಕ ಲಾಭವಾಗುತ್ತಿರುವುದರಿಂದ ಈ ವ್ಯವಸ್ಥೆ ರದ್ದು ಪಡಿಸಬೇಕು, ಎಂದು ಹೇಳಿದರು.
ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ಅಂದರೆ ಏನು ?
ರಾಜಕೀಯ ಪಕ್ಷಗಳು ನಿಧಿ ಸಂಗ್ರಹಣೆಗಾಗಿ ಜನರಿಗೆ ಈ ವ್ಯವಸ್ಥೆಯ ಮೂಲಕ ತಮ್ಮ ಪಕ್ಷಗಳಿಗೆ ನಿಧಿ ನೀಡುವಂತೆ ಕರೆ ನೀಡಬಹುದು, ಈ ಬಾಂಡ್ ಗಳನ್ನು ೧000 ರೂಪಾಯಿಯಿಂದ ೧ ಕೋಟಿ ರೂಪಾಯಿಯವರೆಗೆ ಖರೀದಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಲವು ಶಾಖೆಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಈ ನಿಧಿ ಯಾರಿಂದ ಬಂದಿದೆ ಎಂಬುದನ್ನು ರಾಜಕೀಯ ಪಕ್ಷಗಳಿಂದಲೂ ಗೌಪ್ಯವಾಗಿ ಇಡಲಾಗುತ್ತದೆ .೨೦೧೮ ರಲ್ಲಿ ಭಾಜಪ ಸರಕಾರವು ಈ ಕಾನೂನನ್ನು ರೂಪಿಸಿ ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿತ್ತು.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ