Delhi Meat Shops : ದೆಹಲಿಯಲ್ಲಿ ಧಾರ್ಮಿಕ ಸ್ಥಳದಿಂದ ೧೫೦ ಮೀಟರ್ ಅಂತರದಲ್ಲಿ ಮಾಂಸ ಮಾರಾಟದ ಮೇಲೆ ನಿಷೇಧ

ಜನರ ಧಾರ್ಮಿಕ ಭಾವನೆಗಳನ್ನು ಗಮನಿಸಿ ದೆಹಲಿ ಮಹಾನಗರ ಪಾಲಿಕೆಯ ನಿರ್ಣಯ

ನವದೆಹಲಿ – ದೆಹಲಿ ಮಹಾನಗರ ಪಾಲಿಕೆಯು ಅಕ್ಟೋಬರ್ ೩೧ ರಂದು `ಮಾಂಸದ ಅಂಗಡಿ ಅನುಮತಿ ಧೋರಣೆ’ ಸಹಿತ ೫೪ ಪ್ರಸ್ತಾಪಗಳನ್ನು ಸಮ್ಮತಿಸಿದೆ. ಹೊಸ ನೀತಿಯ ಅನುಸಾರ ಯಾವುದೇ ಧಾರ್ಮಿಕ ಸ್ಥಳ ಮತ್ತು ಮಾಂಸದ ಅಂಗಡಿಗಳ ನಡುವೆ ಕನಿಷ್ಠ ೧೫೦ ಮೀಟರ್ ಅಂತರ ಇರಲಿದೆ. ಮಸೀದಿ ಸಮಿತಿ ಅಥವಾ ಇಮಾಮ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) ರಿಂದ `ನಾ ಹರಕತ ಪ್ರಮಾಣ ಪತ್ರ’ ದೊರೆತ ನಂತರ ಮಸೀದಿಯ ಹತ್ತಿರ ಮಾಂಸ ಮಾರಾಟ ಮಾಡಲಾಗುವುದು; ಆದರೆ ಮಸೀದಿಯ ೧೫೦ ಮೀಟರ್ ಅಂತರದಲ್ಲಿರುವ ಪರಿಸರದಲ್ಲಿ ಹಂದಿಯ ಮಾಂಸ ಮಾರಾಟಕ್ಕೆ ತೀವ್ರ ನಿಷೇಧ ಹೇರಲಾಗಿದೆ. ಪಾಲಿಕೆಯು ಜನರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಪಾಲಿಕೆಯು, ಪಶು ವೈದ್ಯಕೀಯ ಸೇವಾ ವಿಭಾಗದಿಂದ ಸುತ್ತೋಲೆ ಜ್ಯಾರಿಯಾದ ನಂತರ ಹೊಸ ಮಾಂಸದ ಅಂಗಡಿ ಅನುಮತಿ ಧೋರಣೆಯನ್ನು ಜ್ಯಾರಿಗೊಳಿಸಲಾಗುವುದು. ಅಂಗಡಿದಾರರು ಧಾರ್ಮಿಕ ಸ್ಥಳಗಳಿಂದ ೧೫೦ ಮೀಟರ ಅಂತರ ಕಾಪಾಡಬೇಕು, ಆಗಲೇ ಅವರಿಗೆ ಅನುಮತಿ ನೀಡಲಾಗುವುದು. ಈ ನೀತಿಯಲ್ಲಿ ಮಾಂಸದ ಚಿಕ್ಕ ಅಂಗಡಿಗಳು, ಪ್ರಕ್ರಿಯೆ ಯುನೀಟ್, ಪ್ಯಾಕೇಜಿಂಗ್ ಮತ್ತು ಸ್ಟೋರೇಜ್ ಪ್ಲಾಂಟ್ ಗಳಿಗೆ ಅನುಮತಿ ನೀಡುವುದು ಮತ್ತು ನವೀಕರಣದ ಸಂದರ್ಭದಲ್ಲಿ ಹೊಸ ನಿಯಮಗಳನ್ನು ತರಲಾಗಿದೆ. ಇದರ ಪ್ರಕಾರ ಮಾಂಸ ಮಾರಾಟ ಅನುಮತಿ ಮತ್ತು ನವೀಕರಣದ ಶುಲ್ಕವು ಅಂಗಡಿಗಳಿಗೆ ೧೮ ಸಾವಿರ ರೂಪಾಯಿ ಮತ್ತು ಪ್ರಕ್ರಿಯೆ ಯೂನಿಟ್ ಗಾಗಿ ಒಂದೂವರೆ ಲಕ್ಷ ರೂಪಾಯಿ ನಿಶ್ಚಯಿಸಲಾಗಿದೆ. ಅನುಮತಿ ನೀಡಿದ ನಂತರ ನವೀಕರಣ ಶುಲ್ಕ ಮತ್ತು ದಂಡವನ್ನು ಪ್ರತಿ ಮೂರು ವರ್ಷಕ್ಕೆ ಶೇ. ೧೫ ರಷ್ಟು ಹೆಚ್ಚಿಸಲಾಗುವುದು, ಎಂದು ಹೇಳಿದೆ.

ಹೊಸ ಅನುಮತಿ ಧೋರಣೆಗೆ ಮಾಂಸ ವ್ಯಾಪಾರಿಗಳ ವಿರೋಧ

ದೆಹಲಿ ಮಹಾನಗರ ಪಾಲಿಕೆಯ ಹೊಸ ಅನುಮತಿ ಧೋರಣೆಗೆ ಮಾಂಸ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿ ಮೀಟ್ ಮರ್ಚೆಂಟ್ಸ್ ಅಸೋಸಿಯೇಷನ್, ಈ ಹಿಂದೆ ಕಾನೂನ ಬಾಹಿರ ಮಾಂಸ ಅಂಗಡಿಯ ಅನುಮತಿಯ ನವೀಕರಣಕ್ಕೆ ೨ ಸಾವಿರದ ೭೦೦ ರೂಪಾಯಿ ನೀಡಬೇಕಾಗುತ್ತಿತ್ತು. ಅದನ್ನು ಈಗ ೭ ಸಾವಿರ ರೂಪಾಯಿ ಮಾಡಲಾಗಿದೆ. ಅಂಗಡಿದಾರರಿಗೆ ಇಷ್ಟೊಂದು ಹಣ ನೀಡಲು ಕಷ್ಟವಾಗುತ್ತದೆ. ಪಾಲಿಕೆಯು ಅನುಮತಿ ಧೋರಣೆಯನ್ನು ಹಿಂಪಡೆಯದಿದ್ದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗುವೆವು, ಎಂದು ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟು ಕೇಂದ್ರ ಮತ್ತು ರಾಜ್ಯ ಸರಕಾರಗಳು ಗೋಹತ್ಯೆಯನ್ನು ನಿಷೇಧಿಸಲು ಹಾಗೂ ಅದನ್ನು ಕಠೋರವಾಗಿ ಜ್ಯಾರಿಗೊಳಿಸಲು ಯಾವಾಗ ಪ್ರಯತ್ನಿಸುವುವು ?