ಫಿಜಾ ಜಹಾನರವರ ಘರ ವಾಪಸಿ; ಅಂಕಿತ ವಾಲ್ಮೀಕಿಯೊಂದಿಗೆ ವಿವಾಹ!

ಸನಾತನ ಧರ್ಮದಲ್ಲಿ ತನಗೆ ಸಂಪೂರ್ಣ ಶ್ರದ್ಧೆ ಇರುವುದಾಗಿ ಫಿಜಾ ಪ್ರತಿಪಾದಿಸಿದ್ದಾರೆ

ಮೊರಾದಾಬಾದ (ಉತ್ತರ ಪ್ರದೇಶ) – ಮುಸ್ಲಿಂ ಯುವತಿ ಫಿಜಾ ಜಹಾನಳು ಅಂಕಿತ ವಾಲ್ಮೀಕಿ ಎಂಬ ಹಿಂದೂ ಯುವಕನನ್ನು ಮದುವೆಯಾಗಿದ್ದಾಳೆ. ಇದಕ್ಕಾಗಿ ಅವಳು ಮೊದಲು ತನ್ನ ಶುದ್ಧೀಕರಣದ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ಇಬ್ಬರೂ ನೋಯ್ಡಾದ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಆಕೆಯನ್ನು ಚಾಹತ ವಾಲ್ಮೀಕಿ ಎಂದು ಮರುನಾಮಕರಣ ಮಾಡಲಾಯಿತು. ಈ ಸಮಯದಲ್ಲಿ ಆಕೆಯು ‘ನನಗೆ ಸನಾತನ ಧರ್ಮದಲ್ಲಿ ಸಂಪೂರ್ಣ ಶ್ರದ್ಧೆಯಿದೆ’ ಎಂದು ಹೇಳಿದ್ದಾಳೆ. ಹಿಂದುತ್ವನಿಷ್ಠ ಸಂಘಟನೆಗಳ ಸದಸ್ಯರು ಈ ಇಬ್ಬರ ಮದುವೆಯಲ್ಲಿ ಉಪಸ್ಥಿತರಿದ್ದು ಆಶೀರ್ವದಿಸಿದರು.

ಫಿಜಾ ಜಹಾನಳು ಕಳೆದ 4 ವರ್ಷಗಳಿಂದ ಅಂಕಿತನನ್ನು ಪ್ರೀತಿಸುತ್ತಿದ್ದಳು; ಆದರೆ ಅವರ ಮದುವೆಗೆ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆಕೆಯ ತಂದೆಯ ಹೆಸರು ಅಬ್ರಾರ ಹುಸೇನ. ಒಂದು ದಿನ ಅವಳು ತನ್ನ ಮನೆಯವರ ಅನುಪಸ್ಥಿತಿಯಲ್ಲಿ ಓಡಿಹೋದಳು. ಅಂಕಿತನ ಜೊತೆ ನೋಯ್ಡಾ ತಲುಪಿದಳು. ಅಲ್ಲಿ ಇಬ್ಬರೂ ಆರ್ಯ ಸಮಾಜದ ದೇವಸ್ಥಾನಕ್ಕೆ ಹೋದರು. ಪುರೋಹಿತರಲ್ಲಿ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಇಬ್ಬರೂ 18 ವರ್ಷಕ್ಕಿಂತ ಮೇಲ್ಪಟ್ಟವರು ಎಂಬುದು ದಾಖಲೆಗಳಿಂದ ಸ್ಪಷ್ಟವಾದ ನಂತರ ಅವರ ವಿವಾಹವನ್ನು ಏರ್ಪಡಿಸಲಾಯಿತು.

ಸಂಪಾದಕೀಯ ನಿಲುವು

ಲವ್ ಜಿಹಾದನ್ನು ಹಾಸ್ಯವೆಂದು ಕರೆಯುವ ಮತ್ತು ಅದರ ವಿರುದ್ಧ ಕೃತಿ ಮಾಡುವ ಹಿಂದೂಗಳ ಮೇಲೆ ಸಿಡಿದೇಳುವ ನಿರೂಪಿತ ಜಾತ್ಯತೀತವಾದಿಗಳು ಈಗ ಇಂತಹ ಘಟನೆಗಳನ್ನು ವಿರೋಧಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !