‘ದುರ್ಗಾ ದೇವಿ ಎನ್ನುವುದು ಕೇವಲ ಒಂದು ಕಾಲ್ಪನಿಕ ವಿಷಯವಾಗಿದ್ದು, ಬೇರೇನೂ ಅಲ್ಲವಂತೆ !’ – ಬಿಹಾರದ ರಾಷ್ಟ್ರೀಯ ಜನತಾ ದಳದ ಶಾಸಕ ಫತೇ ಬಹದ್ದೂರ್ ಸಿಂಗ್

  • ಹಿಂದೂ ದ್ವೇಷದ ವಿಷ ಕಾರಿದ ಬಿಹಾರದ ರಾಷ್ಟ್ರೀಯ ಜನತಾ ದಳದ ಶಾಸಕ ಫತೇ ಬಹದ್ದೂರ್ ಸಿಂಗ್ !

  • ತನ್ನನ್ನು ಮಹಿಷಾಸುರ ವಂಶಜ ಎಂದು ಹೇಳಿಕೊಂಡರು

ಪಾಟಲಿಪುತ್ರ (ಬಿಹಾರ) – ಶ್ರೀದುರ್ಗಾದೇವಿ ಎನ್ನುವುದು ಯಾವುದೂ ಇಲ್ಲ, ಅದೊಂದು ಕಾಲ್ಪನಿಕ ಕಥೆಯಾಗಿದೆ ಎಂದು ಬಿಹಾರದ ರೋಹತಾಸ ಜಿಲ್ಲೆಯ ಡೆಹರಿಯ ರಾಷ್ಟ್ರೀಯ ಜನತಾ ದಳ (‘ಆರ್‌ಜೆಡಿ’) ಶಾಸಕ, ಫತೇಹ ಬಹದ್ದೂರ ಸಿಂಹ ವಿಷಕಾರಿದ್ದಾರೆ. ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ದುರ್ಗಾ ಸಪ್ತಶತಿಯು ನಕಲಿ ಮತ್ತು ನಿಷ್ಪ್ರಯೋಜಕ ಕಥೆ ಎಂದು ಹೇಳುವ ಮೂಲಕ ಅವರು ತಮ್ಮನ್ನು ‘ಮಹಿಷಾಸುರನ ವಂಶಸ್ಥರು’ ಎಂದು ಕರೆದರು.

(ಸೌಜನ್ಯ – शौर्य न्यूज इंडिया)

ಫತೇಹ್ ಬಹದ್ದೂರ್ ಮುಂದುವರಿದು,

1. ಮಹಿಷಾಸುರನು ಒಬ್ಬ ತೇಜಸ್ವಿ ರಾಜನಾಗಿದ್ದ ಮತ್ತು ಅವನು ಶೇ. 90 ರಷ್ಟು ಬಹುಸಂಖ್ಯಾತ ಜನರನ್ನು ಪ್ರತಿನಿಧಿಸಿದ್ದನು. (ಮಹಿಷಾಸುರನಂತಹ ದುಷ್ಟ ಮತ್ತು ದುರಹಂಕಾರಿ ರಾಕ್ಷಸನ ಕಪಿಮುಷ್ಠಿಯಿಂದ ಸಾಮಾನ್ಯ ಜನರನ್ನು ರಕ್ಷಿಸಲು ಮಹಿಷಾಸುರಮರ್ದಿನಿ ಶ್ರೀ ದುರ್ಗಾದೇವಿ ಅವತರಿಸಿದಳು ಎಂಬುದು ಎಲ್ಲರಿಗೂ ತಿಳಿದಿರುವಾಗ ಮಹಿಷಾಸುರನನ್ನು ತೇಜಸ್ವಿ ಮತ್ತು ಜನಪ್ರಿಯ ನಾಯಕ ಎಂದು ಕರೆದು ಫತೇಹ ಬಹಾದೂರ ತನ್ನ ಅಜ್ಞಾನವನ್ನು ಬಹಿರಂಗಪಡಿಸಿದ್ದಾನೆ ! – ಸಂಪಾದಕರು)

2. ಧರ್ಮಗ್ರಂಥಗಳಲ್ಲಿ, ಭಗವಾನ್ ಶಿವನು ಇತರ ದೇವತೆಗಳೊಂದಿಗೆ ಶ್ರೀ ದುರ್ಗಾದೇವಿಯನ್ನು ಆವಾಹಿಸಿ ಆಕೆಯನ್ನು ಸೃಷ್ಟಿಸಿದನೆಂದು ಹೇಳಲಾಗಿದೆ. ಈ ಸಂಬಂಧದಲ್ಲಿ ದುರ್ಗಾದೇವಿಯು ಶಿವನ ಮಗಳಾದಳು. ಮತ್ತೊಂದೆಡೆ, ಈ ದುರ್ಗಾದೇವಿಯನ್ನು ‘ಮಹಾಗೌರಿ’ ಎಂದೂ ಕರೆಯುತ್ತಾರೆ. ಮಹಾಗೌರಿಯು ಶಿವನ ಹೆಂಡತಿ, ಅಂದರೆ ಶಿವನು ತನ್ನ ಮಗಳನ್ನು ಮದುವೆಯಾದನೇ ಎಂಬ ಅಸಹ್ಯಕರ ಪ್ರಶ್ನೆಯನ್ನೂ ಅವರು ಎತ್ತಿದರು. (ಪುರಾಣಗಳ ಕಥೆಗಳನ್ನು ತಮಗೆ ಬೇಕಾದಂತೆ ಅರ್ಥೈಸಿ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅವಮಾನಿಸುವ ಫತೇ ಬಹದ್ದೂರ್ ಅವರ ಅಲ್ಪ ಬುದ್ಧಿಯನ್ನು ಟೀಕಿಸಿದಷ್ಟೂ ಕಡಿಮೆಯೇ ಆಗುವುದು ! – ಸಂಪಾದಕರು)

3. ಮನುವಾದಿಗಳು ‘ಶ್ರೀ ದುರ್ಗಾದೇವಿಯು ಮಹಿಷಾಸುರನ ಕೋಟಿಗಟ್ಟಲೆ ಸೈನ್ಯದೊಂದಿಗೆ ಯುದ್ಧ ಮಾಡಿದಳು ಮತ್ತು ಮಹಿಷಾಸುರನನ್ನು ಕೊಂದಳು’ ಎಂದು ಬರೆದಿದ್ದಾರೆ. ಅಂತಹ ಮನುವಾದಿಗಳಲ್ಲಿ ಕೇಳುವುದೇನೆಂದರೆ, ಮುಷ್ಟಿಯಷ್ಟು ಬ್ರಿಟಿಷರು ಭಾರತವನ್ನು ಗುಲಾಮರನ್ನಾಗಿ ಮಾಡಿದಾಗ ದುರ್ಗಾದೇವಿ ಏನು ಮಾಡುತ್ತಿದ್ದಳು? (ದೇವತೆಗಳು, ಅವತಾರ ಮುಂತಾದ ಉಚ್ಚಕೋಟಿಯ ಕಾರ್ಯಗಳ ವಿಷಯದಲ್ಲಿ ಎಳ್ಳಷ್ಟೂ ಜ್ಞಾನವಿಲ್ಲದವರು ಮಾತ್ರ ಇಂತಹ ಅಜ್ಞಾನದ ಪ್ರಶ್ನೆಯನ್ನು ಕೇಳುತ್ತಾರೆ ! – ಸಂಪಾದಕರು)

ಈ ಹಿಂದೆ ಬಿಹಾರದ ಮತ್ತೊಬ್ಬ ಆರ್‌ಜೆಡಿ ಶಾಸಕ ಹಾಗೂ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ ಇವರು ವಿವಾದಾತ್ಮಕ ಹೇಳಿಕೆ ನೀಡುವಾಗ ರಾಮಚರಿತಮಾನಸದ ತುಲನೆಯನ್ನು `ಪೊಟ್ಯಾಷಿಯಂ ಸೈನೈಡ್‌’ಗೆ ಹೋಲಿಸಿದ್ದರು.

ಸಂಪಾದಕೀಯ ನಿಲುವು

ಶ್ರೀ ದುರ್ಗಾದೇವಿಯನ್ನು ‘ಕಾಲ್ಪನಿಕ’ ಎಂದು ಹೇಳಿ ತಮ್ಮನ್ನು ‘ಮಹಿಷಾಸುರನ ವಂಶಜರು ಎಂದು ಹೇಳಿಕೊಳ್ಳುವವರ ಆಡಳಿತದಲ್ಲಿರುವ ಬಿಹಾರದ ಸಾಮಾನ್ಯ ಜನತೆ ಎಷ್ಟು ಸಹಿಸಬೇಕಾಗುತ್ತಿರಬಹುದು? ಎನ್ನುವ ವಿಚಾರವನ್ನೇ ಮಾಡದಿರುವುದು ಒಳ್ಳೆಯದು. ಇದನ್ನೆಲ್ಲ ಗಮನಿಸಿದಾಗ ಹಿಂದೂರಾಷ್ಟ್ರದ ಅನಿವಾರ್ಯತೆ ಸ್ಪಷ್ಟವಾಗುತ್ತದೆ.

ಧರ್ಮಶ್ರಾದ್ಧಗಳನ್ನು ಅವಮಾನಿಸುವವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಿಂದೂಗಳಿಗೆ ನಾಚಿಕೆಗೇಡು !