|
(‘ಎ.ಐ.ಯು.ಡಿ.ಎಫ್.ಎ’ ಎಂದರೆ ‘ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಆಫ್ ಅಸ್ಸಾಂ’) –ಅಖಿಲ ಭಾರತೀಯ ಆಸ್ಸಾಮಿ ಪ್ರಜಾಪ್ರಭುತ್ವ ಒಕ್ಕೂಟ)
ಗೌಹತ್ತಿ (ಅಸ್ಸಾಂ) – ಕಳ್ಳತನ, ದರೋಡೆ, ಅತ್ಯಾಚಾರ ಇತ್ಯಾದಿ ಅಪರಾಧಗಳಲ್ಲಿ ನಾವು (ಮುಸಲ್ಮಾನರು) ಮೊದಲ ಸ್ಥಾನದಲ್ಲಿದ್ದೇವೆ. ಜೈಲಿಗೆ ಹೋಗುವವರಲ್ಲಿಯೂ ನಾವು ಮೊದಲನೇ ಕ್ರಮಾಂಕದಲ್ಲಿದ್ದೇವೆ, ಎಂಬ ಹೇಳಿಕೆಯನ್ನು ಅಸ್ಸಾಂನ ಸಂಸದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಆಫ್ ಅಸ್ಸಾಂನ ಮುಖಂಡ ಹಾಗೂ ಸಂಸದರಾದ ಮೌಲಾನಾ ಬದ್ರುದ್ದೀನ ಅಜಮಲ ನೀಡಿದ್ದಾರೆ. ಅಕ್ಟೋಬರ್ 20 ರಂದು ಅಸ್ಸಾಂನ ಗೋಲಪಾರಾದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಹೇಳಿಕೆಯಿಂದ ಟೀಕೆಗೆ ಒಳಗಾಗಿದ್ದರೂ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಅನಂತರ ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡುವಾಗ, `ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ’ ಎಂದು ಹೇಳಿದರು.
ಸಂಸದ ಅಜಮಲರವರು ಮಾತು ಮುಂದುವರಿಸಿ,
1. ಮುಸಲ್ಮಾನ ಮಕ್ಕಳಿಗೆ ಜನರನ್ನು ಮೋಸಗೊಳಿಸಲು ಸಮಯವಿದೆ!
ನಮ್ಮ (ಮುಸಲ್ಮಾನ) ಮಕ್ಕಳಿಗೆ ಶಾಲೆಗೆ ಹೋಗಲು ಸಮಯವಿಲ್ಲ; ಆದರೆ ಜೂಜಾಡಲು ಮತ್ತು ಜನರನ್ನು ವಂಚಿಸಲು ಸಾಕಷ್ಟು ಸಮಯವಿದೆ. ಈ ಎಲ್ಲ ಅಕ್ರಮಗಳಲ್ಲಿ ಭಾಗಿಯಾಗಿರುವವರು ಯಾರು? ಮುಸಲ್ಮಾನರ ಸಹಭಾಗವಿರುವುದು ಆಗಿದ್ದಾರೆ. ಇದು ಖೇದಜನಕ ವಿಷಯವಾಗಿದೆ. (ಒಬ್ಬ ಮುಸಲ್ಮಾನ ಸಂಸದನಿಗೆ ಅನಿಸುತ್ತಿರುವುದು,ಜಾತ್ಯಾತೀತವಾದಿಗಳಿಗೆ ಇನ್ನೂ ಏಕೆ ಅರಿವಾಗಿಲ್ಲ? – ಸಂಪಾದಕರು)
2. ಜೈಲಿನಲ್ಲಿ ಮುಸಲ್ಮಾನರು ಬಹುಸಂಖ್ಯಾತರು!
ಜನರು ಚಂದ್ರ ಮತ್ತು ಸೂರ್ಯನಲ್ಲಿಗೆ ಹೋಗುತ್ತಿದ್ದಾರೆ ಮತ್ತು ನಾವು (ಮುಸಲ್ಮಾನರು) ಜೈಲಿಗೆ ಹೋಗಿ `ಪಿ. ಎಚ್. ಡಿ.’ ಮಾಡುತ್ತಿದ್ದೇವೆ. ಯಾವುದೇ ಪೊಲೀಸ್ ಠಾಣೆಗೆ ಹೋಗಿ ನೋಡಿದರೆ, ನಿಮಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾರಿದ್ದಾರೆ ? ಎಂಬುದು ತಿಳಿಯುತ್ತದೆ. ಅಬ್ದುರ ರಹಮಾನ, ಅಬ್ದುರ ರಹೀಮ, ಅಬ್ದುರ ಮಜೀದ, ಬದ್ರುದ್ದೀನ, ಸಿರಾಜುದ್ದೀನ, ಫಖರುದ್ದೀನ ಸಿಗುತ್ತಾರೆ. ಇದು ದುಖಕರ ಸಂಗತಿಯಲ್ಲವೇ ?
ಟೀಕೆಗಳ ನಂತರ ಅಜಮಲ ರವರು ನೀಡಿರುವ ಪ್ರತ್ಯುತ್ತರ
1. ಜಗತ್ತಿನಾದ್ಯಂತ ಮುಸಲ್ಮಾನರಲ್ಲಿ ಶಿಕ್ಷಣದ ಕೊರತೆಯಿದೆ !
ನಾನು ಜಗತ್ತಿನಾದ್ಯಂತ ಮುಸಲ್ಮಾನ ಸಮುದಾಯಗಳಲ್ಲಿ ಶಿಕ್ಷಣದ ಕೊರತೆಯನ್ನು ನೋಡಿದ್ದೇನೆ. ನಮ್ಮ (ಮುಸಲ್ಮಾನರ) ಮಕ್ಕಳು ಓದುವುದಿಲ್ಲ, ಉನ್ನತ ಶಿಕ್ಷಣವನ್ನು ಪಡೆಯುವುದಿಲ್ಲ, ಮೆಟ್ರಿಕ್ಯುಲೇಷನ್ ಕೂಡ ಮಾಡುವುದಿಲ್ಲ ಎಂದು ನಾನು ಅನೇಕ ಬಾರಿ ಹೇಳಿದ್ದೇನೆ. ಯುವಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಲು ನಾನು ಮುಸಲ್ಮಾನರು ಅಪರಾಧದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ದೆನು.
ಮುಸಲ್ಮಾನರಲ್ಲಿ ವೈದ್ಯರು ಅಥವಾ ಎಂಜಿನಿಯರ್‌ಗಳು ಸಿದ್ಧರಾಗುವುದಿಲ್ಲ!
ಮುಸಲ್ಮಾನ ಸಮಾಜ ಅಭಿವೃದ್ಧಿಯಾಗದಿರುವುದರ ಹಿಂದಿನ ಪ್ರಮುಖ ಕಾರಣವೆಂದರೆ ಅವರಲ್ಲಿನ ಶಿಕ್ಷಣದ ಅಭಾವವೇ ಆಗಿದೆ. ಶಿಕ್ಷಣದ ವಿಷಯದಲ್ಲಿ ನಾವು ಸರಕಾರವನ್ನು ದೂಷಿಸುತ್ತೇವೆ; ಆದರೆ ಸರಕಾರ ನಮಗೆ ವೈದ್ಯರು ಅಥವಾ ಎಂಜಿನಿಯರ್‌ಗಳನ್ನು ಕೇಳಿದರೆ, ನಾವು ಅವರನ್ನು ನೀಡಲು ಸಾಧ್ಯವಿಲ್ಲ. (ಉನ್ನತ ಶಿಕ್ಷಣ ಪಡೆದಿರುವ ಮುಸಲ್ಮಾನರು ಅಪರಾಧಗಳಲ್ಲಿ ತೊಡಗಿರುತ್ತಾರೆ, ಹಾಗೆಯೇ ಜಿಹಾದಿ ಭಯೋತ್ಪಾದಕರಾಗುತ್ತಾರೆ. ಇದರ ಅಸಂಖ್ಯಾತ ಉದಾಹರಣೆಗಳಿವೆ ಎಂಬ ಅಂಶದ ಬಗ್ಗೆಯೂ ಅಜಮಲರವರು ಮಾತನಾಡಬೇಕು! ಮುಸಲ್ಮಾನರಲ್ಲಿ ಅಪರಾಧ ಕೃತ್ಯವನ್ನು ಮಾಡುವ ಪ್ರವೃತ್ತಿ ಏಕೆ ನಿರ್ಮಾಣವಾಗುತ್ತದೆ? ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ವಿಚಾರ ಮಾಡುವ ಧೈರ್ಯವನ್ನು ಅಜಮಲ ರವರು ತೋರಿಸಬೇಕು ಮತ್ತು ಅದನ್ನು ಜಗತ್ತಿಗೆ ತಿಳಿಸಬೇಕು! – ಸಂಪಾದಕರು) ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಬೇಕು. ಅದಕ್ಕಾಗಿ ನಾವು ನಮ್ಮ ಯುವಕರನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸಬೇಕು. ಶಿಕ್ಷಣದ ಕೊರತೆಯು ಎಲ್ಲಾ ದುಶ್ಚಟಗಳಿಗೆ ಮೂಲವಾಗಿದೆ. (ಇದಕ್ಕಾಗಿ ಮೊದಲು ಮದರಸಾಗಳನ್ನು ಮುಚ್ಚಬೇಕು! ಇದನ್ನು ಮಾಡುವ ಧೈರ್ಯವನ್ನು ಅಜಮಲ ರವರು ತೋರಿಸುವರೇ ? – ಸಂಪಾದಕರು)
ಮುಸಲ್ಮಾನರು ಪರಸ್ತ್ರೀಯರನ್ನು ನೋಡುವಾಗ ತಾಯಿ ಮತ್ತು ಸಹೋದರಿಯರ ಬಗ್ಗೆ ವಿಚಾರ ಮಾಡಬೇಕು!
ಯಾವ (ಮುಸಲ್ಮಾನ) ಮಕ್ಕಳು ಮಹಿಳೆಯರನ್ನು ನೋಡಿ ಉತ್ತೇಜಿತರಾಗುತ್ತಾರೆಯೋ, ಅವರಿಗೆ ನಾನು ಇಸ್ಲಾಂನಲ್ಲಿ ಸರಿಯಾಗಿ ನಡೆದುಕೊಳ್ಳುವ ಬಗ್ಗೆ ಯೋಗ್ಯ ಮಾರ್ಗವಿದೆ ಹೇಳಲು ಬಯಸುತ್ತೇನೆ. ನಾವು ಮಾರುಕಟ್ಟೆಯಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿದ್ದಾಗ ಅಲ್ಲಿ ಮಹಿಳೆಯರನ್ನು ನೋಡಿದಾಗ ನಾವು ನಮ್ಮ ದೃಷ್ಟಿಯನ್ನು ತಿರುಗಿಸಿಕೊಳ್ಳಬೇಕು. ಮಕ್ಕಳು ತಮ್ಮ ಮನೆಯಲ್ಲಿಯೂ ಸ್ತ್ರೀಯರು ಇದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವರು ತಮ್ಮ ಸ್ವಂತ ತಾಯಿ ಮತ್ತು ಸಹೋದರಿಯರ ಬಗ್ಗೆ ಯೋಚಿಸಿದರೆ, ಅವರ ಮನಸ್ಸಿನಲ್ಲಿಯೂ ಎಂದಿಗೂ ತಪ್ಪು ವಿಚಾರಗಳು ಬರುವುದಿಲ್ಲ, ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ಅಪರಾಧಗಳಲ್ಲಿ ಮಾತ್ರವಲ್ಲ, ಜಿಹಾದಿ ಭಯೋತ್ಪಾದನೆಯಲ್ಲಿಯೂ ಜಗತ್ತಿನಲ್ಲಿ ಮುಸಲ್ಮಾನರೇ ಮೊದಲ ಕ್ರಮಾಂಕದಲ್ಲಿದ್ದಾರೆ ಎಂಬುದನ್ನು ಅಜಮಲರವರು ಹೇಳಬೇಕು! ಸನಾತನ ಪ್ರಭಾತವು ಕಳೆದ 25 ವರ್ಷಗಳಿಂದ `ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು’ ಎಂದು ಹೇಳುತ್ತಾ ಬಂದಿದೆ. ಸಂಸದ ಅಜಮಲ ರವರು ಇದನ್ನೇ ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ಭಾರತದಲ್ಲಿನ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಈಗಲಾದರೂ ಮಾತನಾಡುವರೇ ? |