ನವ ದೆಹಲಿ – ಕೇರಳದ ಸರಕಾರಿ ಸಾರಿಗೆ ಬಸ್ಸಿನಲ್ಲಿ ಬುರ್ಖಾ ಧರಿಸಿರುವ ಕೆಲವು ಮುಸಲ್ಮಾನ ಮಹಿಳೆಯರು ಸೀರೆ ಧರಿಸಿದ್ದ ಹಿಂದೂ ಮಹಿಳೆಗೆ ಬಸ್ಸಿನಲ್ಲಿ ಹತ್ತಿಸಲು ವಿರೋಧಿಸಿದರು. ಹಿಂದೂ ಮಹಿಳೆಯು ಬುರ್ಖಾ ಧರಿಸದೆ ಇದ್ದರಿಂದ ಈ ಮತಾಂಧ ಮಹಿಳೆಯರು ಆಕೆಗೆ ವಿರೋಧಿಸುತ್ತಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ‘ಈ ವಿಡಿಯೋ ಯಾವ ದಿನ ಹಾಗೂ ಯಾವ ನಗರದಲ್ಲಿದು ? ಇದು ಸ್ಪಷ್ಟವಾಗಿಲ್ಲ. ಆದರೂ ಈ ವಿಡಿಯೋ ಸುಳ್ಳು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ.
(ಸೌಜನ್ಯ – facto 1)
ಹಿಂದುಗಳಿಗೆ ಇಸ್ಲಾಂ ಸ್ವೀಕರಿಸಬೇಕೆ ? – ಭಾಜಪ
ಭಾಜಪದ ಸಂಸದರು ಮತ್ತು ರಾಷ್ಟ್ರೀಯ ವಕ್ತಾರರಾದ ಸುಧಾಂಶು ತ್ರಿವೇದಿ ಇವರು ಈ ವಿಡಿಯೋ ‘ಎಕ್ಸ್’ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿ, ‘ಈಗ ಕೇರಳದಲ್ಲಿನ ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ಪ್ರವಾಸ ಮಾಡುವುದಕ್ಕಾಗಿ ಹಿಂದೂಗಳು ಇಸ್ಲಾಂ ಸ್ವೀಕರಿಸಬೇಕೆ ? ಕೇರಳದ ಈ ಸರಕಾರಿ ಬಸ್ಸಿನಲ್ಲಿ ಮುಸಲ್ಮಾನ ಮಹಿಳಾ ಪ್ರಯಾಣಿಕರು, ಯಾವ ಮಹಿಳೆಯರು ಬುರ್ಖಾ ಧರಿಸಿಲ್ಲ ಅವರಿಗೆ ಬಸ್ಸಿನಲ್ಲಿ ಹತ್ತಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಕೇರಳ ಭಾರತದಲ್ಲಿದೆ ಅಥವಾ ಪಾಕಿಸ್ತಾನದಲ್ಲಿ ? ಕೇರಳ ರಾಜ್ಯ ಇಸ್ಲಾಮಿ ರಾಜ್ಯದತ್ತ ಹೆಜ್ಜೆ ಇಡುತ್ತಿದೆ. ಇದರ ಬಗ್ಗೆ ಗಮನಹರಿಸಿ ಕೇಂದ್ರದಲ್ಲಿನ ಭಾಜಪ ಸರಕಾರವು ಈಗಲೇ ಭವಿಷ್ಯದಲ್ಲಿನ ಅನಾಹುತ ಗುರುತಿಸಿ ಹಿಂದೂಗಳ ರಕ್ಷಣೆಗಾಗಿ ಕೃತಿಶೀಲವಾಗಬೇಕೆಂದು ಹಿಂದೂಗಳಿಗೆ ಅನಿಸುತ್ತಿದೆ ! ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ರಾಜ್ಯದಲ್ಲಿ ಹಿಂದೂಗಳಿಗೆ ಈ ರೀತಿ ಅನುಭವಿಸಬೇಕಾಗುತ್ತದೆ. ಇದು ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರಿಗೆ ತಿಳಿಯುವ ದಿನವೇ ಸುದಿನ ! |