ಚಿಕ್ಕಮಗಳೂರಿನ ಪವಿತ್ರ ದತ್ತ ಪೀಠವನ್ನು ಇಸ್ಲಾಮಿ ಅತಿಕ್ರಮಣದಿಂದ ಮುಕ್ತಗೊಳಿಸುವುದಕ್ಕಾಗಿ ಶ್ರೀರಾಮ ಸೇನೆಯಿಂದ ನಾಳೆಯಿಂದ ದತ್ತಮಾಲಾ ಅಭಿಯಾನ !

ಮಂಗಳೂರು – ಚಿಕ್ಕಮಗಳೂರಿನ ದತ್ತಪೀಠ ಇಸ್ಲಾಮಿ ಅತಿಕ್ರಮಣದಿಂದ ಮುಕ್ತಗೊಳಿಸುವುದಕ್ಕಾಗಿ ಶ್ರೀರಾಮ ಸೇನೆಯ ವತಿಯಿಂದ ಇಡೀ ರಾಜ್ಯದಲ್ಲಿ ಅಕ್ಟೋಬರ್ ೩೦ ರಿಂದ ನವೆಂಬರ್ ೫ ರ ಕಾಲಾವಧಿಯಲ್ಲಿ ‘ದತ್ತಮಾಲಾ ಅಭಿಯಾನ’ ನಡೆಸಲಿದೆ, ಎಂದು ಶ್ರೀರಾಮ ಸೇನೆಯ ಪದಾಧಿಕಾರಿ ಶ್ರೀ. ಆನಂದ ಶೆಟ್ಟಿ ಅಡ್ಯಾರ್ ಇವರು ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀ ಆನಂದ ಶೆಟ್ಟಿ ಅಡ್ಯಾರ್ ಮಾತು ಮುಂದುವರಿಸಿ, ಶ್ರೀರಾಮ ಸೇನೆ ಕಳೆದ ೧೯ ವರ್ಷಗಳಿಂದ ದತ್ತಪೀಠದ ಮುಕ್ತಿಗಾಗಿ ಆಂದೋಲನ ನಡೆಸುತ್ತಿದೆ. ‘ದತ್ತಪೀಠ’ವು ‘ಹಿಂದೂಪೀಠ’ ಎಂದು ಘೋಷಿಸಿ ಅಲ್ಲಿರುವ ಕಾನೂನುಬಾಹಿರ ಗೋರಿಗಳನ್ನು ಬಾಬಾ ಬುಡನ್ ದರ್ಗಾದಲ್ಲಿ ಸ್ಥಳಾಂತರಗೊಳಿಸಬೇಕು. ದತ್ತಪೀಠ ದತ್ತಿ ಇಲಾಖೆಯ ಕಡೆಗೆ ಇರುವುದರಿಂದ ಅಲ್ಲಿಯ ಉರೂಸ ನಿಲ್ಲಿಸಬೇಕು. ಸಾಧು-ಸಂತರಿಗೆ ದರ್ಶನಕ್ಕಾಗಿ ಮುಕ್ತ ಅವಕಾಶ ನೀಡಬೇಕು ಮತ್ತು ಅಲ್ಲಿ ಬರುವ ಭಕ್ತರಿಗಾಗಿ ನಿತ್ಯ ಪ್ರಸಾದ ವ್ಯವಸ್ಥೆ, ಯಾತ್ರಾ ವ್ಯವಸ್ಥೆ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು. ಈ ಬೇಡಿಕೆಗಳು ಪೂರ್ಣಗೊಳಿಸುವುದಕ್ಕಾಗಿ ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ ನಡೆಸಲಾಗುವುದು.

ಸಂಪಾದಕೀಯ ನಿಲುವು

ಇಸ್ಲಾಮಿ ಆಕ್ರಮಕರು ಕಬಳಿಸಿದ ದೇಶದಲ್ಲಿನ ಹಿಂದೂಗಳ ಧಾರ್ಮಿಕ ಸ್ಥಳಗಳು ಸ್ವಾತಂತ್ರ್ಯದ ೭೫ ವರ್ಷಗಳ ನಂತರ ಕೂಡ ಹಿಂದೂಗಳಿಗೆ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ ಇದು ಲಜ್ಜಾಸ್ಪದವಾಗಿದೆ !