ಮುಸ್ಲಿಂ ಮಹಾಪಂಚಾಯತಿಗೆ ಅವಕಾಶ ನೀಡಿದರೆ ಧಾರ್ಮಿಕ ಸೌಹಾರ್ದತೆ ಹದಗೆಡುವ ಸಾಧ್ಯತೆ ! – ದೆಹಲಿ ಉಚ್ಚನ್ಯಾಯಾಲಯ

ದೆಹಲಿ ಉಚ್ಚನ್ಯಾಯಾಲಯದಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮುಸಲ್ಮಾನ ಮಹಾಪಂಚಾಯತಿ’ ಆಯೋಜಿಸಲು ನಿರಾಕರಣೆ !

ನವ ದೆಹಲಿ – ದೆಹಲಿ ಉಚ್ಚನ್ಯಾಯಾಲಯವು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಮುಸ್ಲಿಂ ಮಹಾ ಪಂಚಾಯತಿಗೆ ಅನುಮತಿ ನಿರಾಕರಿಸಿದೆ. ನ್ಯಾಯಾಲಯವು ತನ್ನ ಟಿಪ್ಪಣಿಯಲ್ಲಿ, ಆಯೋಜಕರು ಸಧ್ಯದ ಹಬ್ಬಗಳ ಕಾಲಾವಧಿಯ ಬಳಿಕ, ಮತ್ತೊಮ್ಮೆ ಸಂಬಂಧಪಟ್ಟ ಆಡಳಿತಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಒಂದು ವೇಳೆ ಮಹಾಪಂಚಾಯತಿಗೆ ಅವಕಾಶ ನೀಡಿದರೆ ಧಾರ್ಮಿಕ ಸೌಹಾರ್ದತೆ ಹದಗೆಡಬಹುದು. ಈ ಮಹಾಪಂಚಾಯತಿಯ ಭಿತ್ತಿಚಿತ್ರದ ಬಣ್ಣವು ಧಾರ್ಮಿಕವಾಗಿದೆ. ಸಧ್ಯಕ್ಕೆ ಹಬ್ಬಗಳ ಕಾಲವಾಗಿರುವುದರಿಂದ ಮುಸಲ್ಮಾನ ಮಹಾಪಂಚಾಯತಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

1. ದೆಹಲಿ ಪೊಲೀಸರು ಮೊದಲು ಈ ಮಹಾಪಂಚಾಯತಿಗೆ ಅನುಮತಿ ನೀಡಿದ್ದರು; ಆದರೆ ನಂತರ ಅದನ್ನು ರದ್ದುಗೊಳಿಸಿದರು. ಈ ಕುರಿತು ಆಯೋಜಕರು ಉಚ್ಚನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ನೀಡುವಂತೆ ಕೋರಿದ್ದರು.

2. ‘ವಿ ದಿ ಇಂಡಿಯನ್ ಮುಸ್ಲಿಂ’ (ನಾವು ಭಾರತೀಯ ಮುಸಲ್ಮಾನರು) ಎಂಬ ಹೆಸರಿನಲ್ಲಿ ಈ ಮಹಾ ಪಂಚಾಯತಿಯನ್ನು ಆಯೋಜಿಸಲಿದ್ದರು. ಪ್ರಸ್ತುತ ಮುಸಲ್ಮಾನರಿಗೆ ಎದುರಾಗಿರುವ ಅಂಶಗಳ ವಿಷಯದಲ್ಲಿ ಚರ್ಚೆ ನಡೆಯುವುದರಲ್ಲಿತ್ತು. ಈ ಬಗ್ಗೆ ‘ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್’ನ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ, ಕಾರ್ಯಕ್ರಮವು ಸಂಪೂರ್ಣ ರಾಜಕೀಯೇತರವಾಗಿದ್ದು, ಎಲ್ಲ ಧರ್ಮದವರ ನಡುವೆ ಶಾಂತಿ ಮತ್ತು ಸಹಕಾರದ ಆಶಯವನ್ನು ವ್ಯಕ್ತಪಡಿಸಲಿದೆ ಎಂದು ತಿಳಿಸಿದ್ದರು. (ಎಂದಾದರೂ ಈ ರೀತಿ ಮಾಡಲಾಗಿದೆಯೇ ? ಮುಸಲ್ಮಾನರ ಸಂಘಟನೆಗಳು ಎಂದಾದರೂ ದೇಶದಲ್ಲಿ ಜಿಹಾದಿ ಭಯೋತ್ಪಾದನೆಯನ್ನು ಖಂಡಿಸುತ್ತವೆಯೇ ? – ಸಂಪಾದಕರು)

ಸಂಪಾದಕೀಯ ನಿಲುವು

ದೆಹಲಿ ನ್ಯಾಯಾಲಯಕ್ಕೆ ಏನು ಅಸುತ್ತದೆಯೋ, ಅದೇ ಶಾಂತಿಪ್ರಿಯ ನಾಗರಿಕರಿಗೆ ಖಂಡಿತವಾಗಿ ಅನಿಸುತ್ತದೆ !