ಪ್ರಯಾಗರಾಜ (ಉತ್ತರಪ್ರದೇಶ) – ಭಾರತವು ಶ್ರವಣ ಕುಮಾರನ ಭೂಮಿಯಾಗಿದೆ. ವೃದ್ಧರ ಆರೈಕೆ ಮಾಡುವುದು ಇದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಕೇವಲ ನೈತಿಕತೆ ಅಷ್ಟೇ ಅಲ್ಲದೆ, ಈಗ ಅದಕ್ಕೆ ಕಾನೂನಿನ ಬಂಧನ ಕೂಡ ಇದೆ. ಅದು ಕರ್ತವ್ಯ ಕೂಡ ಇದೆ. ಮಕ್ಕಳು ತಂದೆ-ತಾಯಿಯ ಸೇವೆ ಮಾಡುವುದು ಪಿತೃ ಋಣ ತೀರಿಸುವುದಕ್ಕಾಗಿ ಇದೆ, ಎಂದು ಅಲಹಾಬಾದ್ ಹೈಕೋರ್ಟ್ ೮೫ ವರ್ಷದ ಛವೀನಾಥ ಇವರ ಅರ್ಜಿಯ ಕುರಿತು ವಿಚಾರಣೆ ಮಾಡುವಾಗ ಹೇಳಿದರು. ಛವೀನಾಥ ಇವರ ಮಕ್ಕಳು ಅವರೊಂದಿಗೆ ಕೆಟ್ಟದಾಗಿ ವರ್ತಿಸುವುದರ ಜೊತೆಗೆ ಅವರನ್ನು ಆಸ್ತಿಯಿಂದ ಕಾನೂನಬಾಹಿರ ರೀತಿಯಲ್ಲಿ ಕಬಳಿಸಿದ್ದಾರೆ. ಆದ್ದರಿಂದ ಅವರು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.
ನ್ಯಾಯಾಲಯವು, ವೃದ್ಧಾಪ್ಯದಲ್ಲಿ ಜನರು ಕೇವಲ ಶರೀರಿಕ ಅಷ್ಟೇ ಅಲ್ಲದೆ, ಮಾನಸಿಕ ತೊಂದರೆಯ ವಿರುದ್ಧ ಕೂಡ ಹೋರಾಡುತ್ತಿರುತ್ತಾರೆ. ಸಾಮಾನ್ಯವಾಗಿ, ಆಸ್ತಿ ದೊರೆತನಂತರ ಮಕ್ಕಳು ತಂದೆ ತಾಯಿಯ ಕೈ ಬಿಡುತ್ತಾರೆ ಇದು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ನೋಡಲು ಸಿಗುತ್ತದೆ. ಇದು ತಪ್ಪಾಗಿದೆ. ಮಕ್ಕಳು ಶ್ರವಣ ಕುಮಾರನ ಹಾಗೆ ಆಗಬೇಕು ಎಂದು ಹೇಳಿದರು.