‘ವಾಲ್ಕ್ಸವ್ಯಾಗನ್’ ಇಂದ ಪ್ರಭು ಶ್ರೀರಾಮನ ಅವಾಮಾನ ಮಾಡುವ ಜಾಹೀರಾತು ತೆರೆವು !

ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರು ಸಂಘಟಿತರಾಗಿ ವಿರೋಧಿಸಿದ ಪರಿಣಾಮ !

(ಈ ಚಿತ್ರ ಪ್ರಕಾಶಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ)

ಮುಂಬಯಿ – ವಾಹನ ನಿರ್ಮಾಣ ಮಾಡುವ ಜರ್ಮನಿಯಲ್ಲಿನ ಕಂಪನಿ ‘ವೊಲ್ಕ್ಸವ್ಯಾಗನ್’ ನಿಂದ ತನ್ನ ಜಾಹೀರಾತಿನಲ್ಲಿ ಪ್ರಭು ಶ್ರೀ ರಾಮನನ್ನು ಅವಮಾನಿಸಿತ್ತು. ಇದನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರು ವಿರೋಧಿಸಿದ ನಂತರ ಈ ಜಾಹಿರಾತು ತೆಗೆದು ಹಾಕಲಾಗಿದೆ.

ದಸರಾದ ಹಿನ್ನೆಲೆಯಲ್ಲಿ ಈ ಜಾಹೀರಾತು ಪ್ರಸಾರ ಮಾಡಲಾಗಿತ್ತು ಇದರಲ್ಲಿ ಪ್ರಭುಶ್ರೀ ರಾಮನು ವೊಲ್ಕ್ಸವ್ಯಾಗನ್ ಓಡಿಸುತ್ತಿರುವುದು ತೋರಿಸಲಾಗಿತ್ತು. ಅದೇ ಸಮಯದಲ್ಲಿ ವಾಹನದ ಮಾರ್ಗ ಮಧ್ಯದಲ್ಲಿ ರಾವಣ ಕಾಣುತ್ತಾನೆ. ಅವನನ್ನು ನೋಡಿ ಶ್ರೀರಾಮ ರಾವಣನ್ನು ವಾಹನದಲ್ಲಿ ಕೂಡಿಸುತ್ತಾನೆ. ಅದರ ನಂತರ ರಾವಣ ವಾಹನದಲ್ಲಿ ಕುಳಿತುಕೊಳ್ಳುತ್ತಾನೆ. ಇದರಿಂದ ತಮ್ಮಲ್ಲಿನ ಒಳ್ಳೆಯತನದಿಂದ ಕೆಟ್ಟದ್ದನ್ನು ದೂರಗೊಳಿಸಬಹುದು, ಎಂದು ಸಂದೇಶ ನೀಡಲಾಗಿತ್ತು. ಆರ್ಥಿಕ ಲಾಭಕ್ಕಾಗಿ ಪ್ರಭು ಶ್ರೀ ರಾಮನನ್ನು ಮಾನವೀಕರಣಗೊಳಿಸಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿತ್ತು. ನಂತರ ಧರ್ಮಾಭಿಮಾನಿಗಳು ಕೂಡ ಈ ಜಾಹೀರಾತನ್ನು ವಿರೋಧಿಸಲು ಆರಂಭಿಸಿದರು. ಇದರ ನಂತರ ವೊಲ್ಕ್ಸವ್ಯಾಗನ್ ನಿಂದ ಸಾಮಾಜಿಕ ಜಾಲತಾಣದಲ್ಲಿನ ಎಲ್ಲಾ ಖಾತೆಯಿಂದ ಈ ಜಾಹಿರಾತು ತೆಗೆಯಿತು.