ಕೇವಲ ‘ಅಲ್ಲಾಹು ಅಕ್ಬರ್’ ಹೇಳುವುದರಿಂದ ಪ್ರಗತಿ ಆಗದು ಶಿಕ್ಷಣ ಪಡೆಯುವುದು ಆವಶ್ಯಕ ! – ದೆಹಲಿಯ ಮಾಜಿ ಉಪರಾಜ್ಯಪಾಲ ನಜೀಬ್ ಜಂಗ

ದೆಹಲಿಯ ಮಾಜಿ ಉಪರಾಜ್ಯಪಾಲ ನಜೀಬ್ ಜಂಗ ಇವರಿಂದ ಮುಸಲ್ಮಾನರಿಗೆ ಸಲಹೆ !

(ಅಲ್ಲಾಹು ಅಕ್ಬರ್ ಎಂದರೆ ಅಲ್ಲ ಮಹಾನನಾಗಿದ್ದಾನೆ.)

ಬಾರಾಬಂಕಿ (ಉತ್ತರಪ್ರದೇಶ) – ಕೇವಲ ‘ಅಲ್ಲಾಹು ಅಕ್ಬರ್’ ಹೇಳುವುದರಿಂದ ಪ್ರಗತಿ ಆಗುವುದಿಲ್ಲ. ಶಿಕ್ಷಣ ಹೆಚ್ಚು ಆವಶ್ಯಕವಾಗಿದೆ. ಯಾವ ಧರ್ಮದ ಪ್ರಾರಂಭ ‘ಇಕ್ರ’ (ಶಿಕ್ಷಿತ) ಈ ಪದದಿಂದ ಆಗುತ್ತದೆ, ಅದೇ ಧರ್ಮದ ಜನರು ಇಂದು ಎಲ್ಲಕ್ಕಿಂತ ಹಿಂದುಳಿದಿದ್ದಾರೆ. ಇಂದು ಮುಸಲ್ಮಾನ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಜಗತ್ತಿನಲ್ಲಿ ನೀಡಲಾಗುವ ಶಿಕ್ಷಣ ಕೂಡ ಆವಶ್ಯಕವಾಗಿದೆ. ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ದಲಿತ ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚು ಹಿಂದುಳಿದಿದ್ದಾರೆ, ಎಂದು ದೆಹಲಿಯ ಮಾಜಿ ಉಪ ರಾಜ್ಯಪಾಲ ನಜಿಬ್ ಜಂಗ್ ಇವರು ಮುಸಲ್ಮಾನರಿಗೆ ಸಲಹೆ ನೀಡಿದರು. ಅವರು ಇಲ್ಲಿ ರಫೀ ಅಹಮದ್ ಕಿಡವಾಯ್ ಮೆಮೋರಿಯಲ್ ಡಿಗ್ರಿ ಕಾಲೇಜಿನ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಜೀಬ್ ಜಂಗ ಮಾತು ಮುಂದುವರೆಸಿ, ಮದರಸಾಗಳಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಲ್ಲಿ ಕಡಿಮೆ ಪ್ರತಿಭೆ ಇರುತ್ತದೆ; ಜನರಿಗೆ ತಪ್ಪಾದ ತಿಳುವಳಿಕೆ ಇದೆ ಆದರೆ ವಾಸ್ತವದಲ್ಲಿ ಹಾಗಿಲ್ಲ. ಮದರಸಾಗಳಲ್ಲಿ ಎಂಟನೇ ತರಗತಿಯವರೆಗೆ ಅಧ್ಯಯನ ಮಾಡಿರುವ ವಿದ್ಯಾರ್ಥಿ ಯಾವಾಗ ಶಿಕ್ಷಣ ಮುಂದುವರೆಸುತ್ತಾನೆ ಆಗ ಅವನಲ್ಲಿನ ಪ್ರತಿಭೆ ಕಾಣುತ್ತದೆ, ಎಂದು ಅವರು ದಾವೆ ಕೂಡ ಮಾಡಿದರು. (ಮದರಸಾಗಳಲ್ಲಿ ಅಧ್ಯಯನ ಮಾಡುವವರು ಜಿಹಾದಿ ಭಯೋತ್ಪಾದಕರು ಏಕೆ ಆಗುತ್ತಾರೆ ? ಮದರಸಾದಲ್ಲಿ ವಿದ್ಯಾರ್ಥಿಗಳ ಮೇಲೆ ಅವರ ಶಿಕ್ಷಕರೇ ಲೈಂಗಿಕ ಅತ್ಯಾಚಾರ ಏಕೆ ಮಾಡುತ್ತಾರೆ ? ಇದರ ಬಗ್ಗೆ ಕೂಡ ನಜೀಬ್ ಗಂಜ ಇವರು ಮಾತನಾಡಬೇಕು ! – ಸಂಪಾದಕರು)