ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಮಾಡಲಾಗುವ ಆಧ್ಯಾತ್ಮಿಕ ಸಂಶೋಧನೆಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಜಗತ್ತಿನಲ್ಲಿನ ಎಲ್ಲ ಜಿಜ್ಞಾಸುಗಳಿಗೆ ಅಧ್ಯಾತ್ಮ ಮತ್ತು ಸಾಧನೆಯ ಮಹತ್ವ ತಿಳಿಯಬೇಕು ಮತ್ತು ಎಲ್ಲರೂ ಸ್ವತಃ ಸಾಧನೆಯನ್ನು ಮಾಡಿ ಆನಂದಪ್ರಾಪ್ತಿಯನ್ನು ಮಾಡಿಕೊಳ್ಳಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಆಧುನಿಕ ವೈಜ್ಞಾನಿಕ ಪರಿಭಾಷೆ ಯಲ್ಲಿ ಅಧ್ಯಾತ್ಮ ಮತ್ತು ಸಾಧನೆ ಯನ್ನು ತಿಳಿಸಿ ಹೇಳುತ್ತಾರೆ. ಅದಕ್ಕಾಗಿ ೨೦೧೪ ರಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಇಲೆಕ್ಟ್ರೋಸೊಮೇಟೋಗ್ರಾಫಿಕ್‌ ಸ್ಕ್ಯಾನಿಂಗ್‌’, ‘ಯುನಿವರ್ಸಲ್‌ ಔರಾ ಸ್ಕ್ಯಾನರ್‌ (ಯು.ಎ.ಎಸ್‌.)’, ‘ಪಾಲಿಕಾಂಟ್ರಾಸ್ಟ್ ಇಂಟರ್‌ಫೆರೆನ್ಸ್ ಫೊಟೋಗ್ರಾಫಿ (ಪಿ.ಐ.ಪಿ.)’, ‘ಥರ್ಮಲ್‌ ಇಮೇಜಿಂಗ್‌’, ‘ಗ್ಯಾಸ್‌ ಡಿಸ್ಚಾರ್ಜ್ ವಿಜ್ಯುವಲೈಸೇಶನ್‌ (ಜಿ.ಡಿ.ವಿ.)’ ಇತ್ಯಾದಿ ವೈಜ್ಞಾನಿಕ ಉಪಕರಣಗಳ ಮೂಲಕ ಆಧ್ಯಾತ್ಮಿಕ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಈ ಸಂಶೋಧನೆಯ ಕಾರ್ಯಕ್ಕೆ ಸ್ಥೂಲ ಪಂಚಜ್ಞಾನೇಂದ್ರಿಯಗಳು (ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಚರ್ಮ), ಮನಸ್ಸು ಮತ್ತು ಬುದ್ಧಿಯ ಆಚೆಗಿನ ಜ್ಞಾನದ, ಅಂದರೆ ‘ಸೂಕ್ಷ್ಮ ಪರೀಕ್ಷಣೆ’ಯ (ಟಿಪ್ಪಣಿ) ಜೊತೆಯನ್ನು ನೀಡಿ ಈ ಸಂಶೋಧನೆಯ ವಿಶ್ಲೇಷಣೆಯನ್ನು ಮಾಡಲಾಗುತ್ತದೆ.

ಟಿಪ್ಪಣಿ – ಸ್ಥೂಲ ಪಂಚಜ್ಞಾನೇಂದ್ರಿಯಗಳು (ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಚರ್ಮ), ಮನಸ್ಸು ಮತ್ತು ಬುದ್ಧಿಯ ಆಚೆಗಿರುವುದು ಅಂದರೆ, ‘ಸೂಕ್ಷ್ಮ’! ಯಾವುದಾದರೊಂದು ಘಟನೆಯ ವಿಷಯದಲ್ಲಿ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ ದಂತೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ವೈಜ್ಞಾನಿಕ ಉಪಕರಣಗಳ ಮೂಲಕ ವಿವಿಧ ವಿಷಯಗಳಿಗೆ ಸಂಬಂಧಿಸಿದ ೫ ಸಾವಿರಕ್ಕಿಂತಲೂ ಹೆಚ್ಚು ಸಂಶೋಧನಾತ್ಮಕ ಪರೀಕ್ಷಣೆಗಳನ್ನು ಮಾಡಲಾಗಿದೆ. ಪ್ರಸ್ತುತ ಈ ಸಂಶೋಧನೆಯು ಅನೇಕ ಸತ್ತ್ವಪರೀಕ್ಷೆಗಳನ್ನು ಎದುರಿಸಿ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಅಂಶಗಳನ್ನು ನಾವು ಈ ವಾರದ ಲೇಖನದ ಮೂಲಕ ತಿಳಿದುಕೊಳ್ಳೋಣ.

೧. ಆಧ್ಯಾತ್ಮಿಕ ಸಂಶೋಧನೆಯ ಹೆಚ್ಚುತ್ತಿರುವ ವ್ಯಾಪ್ತಿಯಿಂದಾಗಿ ಪ್ರತ್ಯಕ್ಷ ವ್ಯಕ್ತಿ ಅಥವಾ ವಸ್ತುಗಳ ಬದಲು ಅವುಗಳ ಛಾಯಾಚಿತ್ರಗಳ ಪರೀಕ್ಷಣೆಯನ್ನು ಮಾಡಲಾಗುತ್ತದೆ : ಸಂಶೋಧನೆಯ ಅಂತರ್ಗತ ಹೆಚ್ಚಿನ ಪರೀಕ್ಷಣೆಗಳನ್ನು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಲಾಗಿದೆ. ಯು.ಎ.ಎಸ್. ಈ ಉಪಕರಣದ ಮೂಲಕ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯ ಬಹುದು. ೨೦೧೮ ರ ವರೆಗೆ ವ್ಯಕ್ತಿ ಅಥವಾ ವಸ್ತುಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚೆಂದರೆ ೧೦ ರಿಂದ ೧೨ ಮೀಟರ್‌ಗಳ ವರೆಗೆ ಬರುತ್ತಿತ್ತು. ೨೦೧೯ ರಿಂದ ಮಾತ್ರ ಈ ಪ್ರಭಾವಲಯಗಳು ೩೫ ಮೀಟರ್‌ಗಿಂತಲೂ ಹೆಚ್ಚು ಬರುವುದರಿಂದ ಅವುಗಳನ್ನು ನಿಖರವಾಗಿ ಅಳೆಯಲು ಪರೀಕ್ಷಣೆ ಮಾಡುವ ಸ್ಥಳ ಕಡಿಮೆ ಬೀಳತೊಡಗಿತು. ಕೆಲವೊಂದು ಕಿಲೋಮೀಟರ್‌ ದೂರದಲ್ಲಿ ಬೇರೆಯೆ ಒಂದು ದೊಡ್ಡ ಸ್ಥಳವನ್ನು ಕಂಡುಹಿಡಿದು ಅಲ್ಲಿ ಪರೀಕ್ಷಣೆಯನ್ನು ಮಾಡಲು ಆರಂಭಿಸಿದೆವು. ಕೆಲವು ತಿಂಗಳುಗಳ ನಂತರ ಕೆಲವು ಸಂತರ ಅಥವಾ ಅವರಿಗೆ ಸಂಬಂಧಿಸಿದ ವಸ್ತುಗಳ ಪ್ರಭಾವಲಯ ೫೦೦ ಮೀಟರ್‌ಗಳಿಗಿಂತಲೂ ಹೆಚ್ಚು ಬರುತ್ತದೆ ಎಂಬುದು ಗಮನಕ್ಕೆ ಬಂದಿತು. ೨೦೨೧ ರಿಂದ ಆಧ್ಯಾತ್ಮಿಕ ಸಂಶೋಧನೆಯ ವ್ಯಾಪ್ತಿ ಮತ್ತು ಪರೀಕ್ಷಣೆಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಆದ್ದರಿಂದ ವ್ಯಕ್ತಿ ಅಥವಾ ವಸ್ತುವಿನ ಪ್ರಭಾವಲಯವನ್ನು ಅಳೆಯಲು ಅವರನ್ನು ದೂರದ ಸ್ಥಳಕ್ಕೆ ಕರೆದುಕೊಂಡು ಹೋಗಿ ಪುನಃ ಕರೆದುಕೊಂಡು ಬರುವುದು ತುಂಬಾ ಕಷ್ಟಕರವಾಗಿತ್ತು. ಆದ್ದರಿಂದ ವ್ಯಕ್ತಿ ಅಥವಾ ವಸ್ತುವಿನ ಬದಲು ಅವುಗಳ ಛಾಯಾಚಿತ್ರಗಳನ್ನು ತೆಗೆದು ಅವುಗಳ ಪ್ರಭಾವಲಯವನ್ನು ಅಳಯಲು ಪ್ರಾರಂಭಿಸಿದೆವು. ಇದರ ಹಿಂದಿನ ತತ್ತ್ವವನ್ನು ಮುಂದೆ ಕೊಡಲಾಗಿದೆ.

೨. ವ್ಯಕ್ತಿ ಅಥವಾ ವಸ್ತುಗಳ ಛಾಯಾಚಿತ್ರಗಳಲ್ಲಿ ಅವುಗಳ ಸ್ಪಂದನಗಳಿರುತ್ತವೆ : ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗಿರುತ್ತವೆ’, ಇದು ಅಧ್ಯಾತ್ಮದ ಒಂದು ತತ್ತ್ವವಾಗಿದೆ. ಈ ತತ್ತ್ವಕ್ಕನುಸಾರ ವ್ಯಕ್ತಿ ಅಥವಾ ವಸ್ತುವಿನ ಛಾಯಾಚಿತ್ರಗಳಲ್ಲಿ ಅವುಗಳ ಸ್ಪಂದನಗಳಿರುತ್ತವೆ. ಆದ್ದರಿಂದ ಪ್ರತ್ಯಕ್ಷ ವ್ಯಕ್ತಿಯ ಎಷ್ಟು ಪ್ರಭಾವಲಯ ಇರುತ್ತದೆಯೋ, ಸಾಧಾರಣ ಅಷ್ಟೇ ಪ್ರಭಾವಲಯ ಅವರ ಛಾಯಾಚಿತ್ರದಲ್ಲಿಯೂ ಇರುತ್ತದೆ.

ಈ ಅಂಶವನ್ನು ಕೆಲವು ಪ್ರಯೋಗಗಳನ್ನು ಮಾಡಿ ಪರೀಕ್ಷಿಸಲಾಯಿತು. ಉದಾ. ವ್ಯಕ್ತಿ ಪ್ರತ್ಯಕ್ಷ ಉಪಸ್ಥಿತನಿರುವಾಗ ಅವನ ಪ್ರಭಾವಲಯವನ್ನು ಅಳೆಯಲಾಯಿತು. ಅನಂತರ ಅವನ ಛಾಯಾಚಿತ್ರದ ಪ್ರಭಾವಲಯವನ್ನು ಅಳೆಯಲಾಯಿತು. ಆಗ ಎರಡೂ ಪ್ರಕಾರಗಳಲ್ಲಿ ಅಳತೆಗಳು ಸಾಧಾರಣ ಸಮಾನವಾಗಿತ್ತು. ಇದೇ ಪ್ರಮಾಣ ವಸ್ತುಗಳ ವಿಷಯದಲ್ಲಿಯೂ ಗಮನಕ್ಕೆ ಬಂದಿತು.

೩. ‘ಛಾಯಾಚಿತ್ರ’ಗಳನ್ನು ಬಳಸಿ ಸಂಶೋಧನೆಯನ್ನು ಮಾಡುವ ಸಂಕಲ್ಪನೆಯ ಜನಕ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ೨೦೨೧ ರಲ್ಲಿ ಅವರ ಕೋಣೆಯ, ಹಾಗೆಯೇ ಅವರ ದೇವರಕೋಣೆಯ ಛಾಯಾಚಿತ್ರಗಳನ್ನು ತೆಗೆದು ಅವುಗಳ ಸಂಶೋಧನೆ ಮಾಡಲು ಹೇಳಿದರು. ಈ ಸಂಶೋಧನೆ ಅತ್ಯುತ್ತಮವಾಯಿತು. ‘ಛಾಯಾಚಿತ್ರಗಳ ಮೂಲಕ ಸಂಶೋಧನೆ ಮಾಡುವ’ ಈ ಸಂಕಲ್ಪನೆಯು ಭವಿಷ್ಯದಲ್ಲಿ ಆಧ್ಯಾತ್ಮಿಕ ಸಂಶೋಧನೆಯ ಮಹತ್ವದ ಅಂಗವಾಯಿತು. ಈ ಸಂಕಲ್ಪನೆಯಿಂದ ಆಗಿರುವ ಲಾಭವನ್ನು ಮುಂದೆ ಕೊಡಲಾಗಿದೆ. ಈ ಅಂಶಗಳನ್ನು ಓದಿ ಎಲ್ಲರಿಗೂ ಪರಾತ್ಪರ ಗುರು ಡಾಕ್ಟರರ ದಾರ್ಶನಿಕತೆಯು ಅರಿವಾಗಬಹುದು.

೪. ‘ಛಾಯಾಚಿತ್ರ’ ಬಳಸಿ ಸಂಶೋಧನೆ ಮಾಡುವ ಸಂಕಲ್ಪನೆಯಿಂದ ಆಗಿರುವ ಲಾಭ

೪ ಅ. ಒಂದೇ ಬಾರಿ ೧ ಕ್ಕಿಂತ ಹೆಚ್ಚು ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಲು ಬರುವುದು : ಕೆಲವೊಮ್ಮೆ ಯಜ್ಞಯಾಗ ಅಥವಾ ಧಾರ್ಮಿಕ ವಿಧಿಗಳನ್ನು ಅಥವಾ ಸಂತರಿಗೆ ಸಂಬಂಧಿಸಿದ ಸಂಶೋಧನೆಗಳನ್ನು ಒಂದೇ ದಿನ ಮಾಡುವುದು ಆವಶ್ಯಕವಾಗಿರುತ್ತಿತ್ತು. ಇಂತಹ ಸಂದರ್ಭ ದಲ್ಲಿ ಪ್ರಯೋಗದಲ್ಲಿನ ವ್ಯಕ್ತಿ ಅಥವಾ ವಸ್ತುವಿನ ಛಾಯಾಚಿತ್ರವನ್ನು ತೆಗೆದು ನಂತರ ಅವುಗಳ ಪರೀಕ್ಷಣೆಯನ್ನು ಮಾಡಲು ಆರಂಭಿಸುವುದರಿಂದ ಒಂದೇ ಬಾರಿ ೧ ಕ್ಕಿಂತ ಹೆಚ್ಚು ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತು, ಉದಾ. ೨೦೨೧ ನೇ ಇಸವಿಯಲ್ಲಿ ನವರಾತ್ರಿಯ ಸಮಯದಲ್ಲಿ ರಾಮನಾಥಿ ಆಶ್ರಮದಲ್ಲಿ ಮಹರ್ಷಿಗಳ ಆಜ್ಞೆಯಿಂದ ಪ್ರತಿದಿನ ಯಜ್ಞಯಾಗಗಳನ್ನು ಮಾಡಲಾಗಿತ್ತು. ಅದೇ ವೇಳೆಗೆ ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ಶ್ರೀಸಪ್ತಶತಿಪಾಠದ ಅನುಷ್ಠಾನವನ್ನು ಪ್ರತಿದಿನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಎರಡೂ ಪ್ರಯೋಗಗಳ ಘಟಕಗಳ ಛಾಯಾಚಿತ್ರಗಳನ್ನು ಪ್ರತಿದಿನ ತೆಗೆದು ನಂತರ ಅವುಗಳ ಸಂಶೋಧನೆಯನ್ನು ಮಾಡಲಾಯಿತು. ಆದ್ದರಿಂದ ಸಂಶೋಧನೆ ಮಾಡಲು ಮೊದಲಿನಂತೆ ಸ್ಥಳ, ಕಾಲದ ಬಂಧನ ಇಲ್ಲವಾಯಿತು.

೪ ಆ. ವಿವಿಧ ರೀತಿಯ ಮಿತಿಗಳನ್ನು ದಾಟಿ ಸಂಶೋಧನೆಗಳನ್ನು ಮಾಡಲು ಸಾಧ್ಯವಾಯಿತು : ಪ್ರಯೋಗದಲ್ಲಿ ಭಾಗವಹಿಸಿದ ಸಾಧಕರು ಮತ್ತು ಸಂತರ ಛಾಯಾಚಿತ್ರಗಳನ್ನು ತೆಗೆದು ಅವುಗಳ ಸಂಶೋಧನೆ ಮಾಡಲು ಆರಂಭಿಸಿದ್ದರಿಂದ ಅವರಿಗೆ ಪರೀಕ್ಷಣೆಗಾಗಿ ಕೊಡಬೇಕಾದ ಸಮಯ, ಹೆಚ್ಚಿನ ಶ್ರಮ ಇತ್ಯಾದಿ ಉಳಿಯಿತು. ಅದೇ ರೀತಿ ಬೇಸಿಗೆ, ಮಳೆಗಾಲ, ಚಳಿಗಾಲದಿಂದಾಗಿ ಪರೀಕ್ಷಣೆ ಮಾಡುವಾಗ ಬರುವ ಅಡಚಣೆಗಳು ದೂರವಾಗಿ ಸಂಶೋಧನೆ ಮಾಡಲು ಸಾಧ್ಯವಾಯಿತು, ಉದಾ. ಸಂಗೀತ ಪ್ರಯೋಗದ ಸಮಯದಲ್ಲಿ ದಿನವಿಡೀ ೩-೪ ಪ್ರಯೋಗಗಳನ್ನು ಮಾಡಲಾಗುತ್ತದೆ. ಈ ಪ್ರಯೋಗದಲ್ಲಿನ ಕಲಾವಿದರು ಮತ್ತು ಅವರ ವಾದ್ಯಗಳು, ಪ್ರಯೋಗ ದಲ್ಲಿನ ಉಪಸ್ಥಿತ ವೀಕ್ಷಕರು (ಸಾಧಕರು ಮತ್ತು ಸಂತರು), ಅದೇ ರೀತಿ ಪ್ರಯೋಗದ ಸ್ಥಳದಲ್ಲಿರುವ ವನಸ್ಪತಿಗಳನ್ನು ಪ್ರಯೋಗದ ಮೊದಲು ಮತ್ತು ಪ್ರಯೋಗದ ನಂತರ ಪರೀಕ್ಷಣೆಗಾಗಿ ದೂರದ ಸ್ಥಳಕ್ಕೆ ಪ್ರತ್ಯಕ್ಷ ತೆಗೆದುಕೊಂಡು ಹೋಗಲು ತುಂಬಾ ಮಿತಿ ಬರುತ್ತದೆ. ಆದ್ದರಿಂದ ಎಲ್ಲವುಗಳ ಛಾಯಾಚಿತ್ರಗಳನ್ನು ತೆಗೆದು ನಂತರ ಅವುಗಳ ಸಂಶೋಧನೆ ಗಳನ್ನು ಮಾಡಲಾಯಿತು. ಇದರಿಂದ ಕಡಿಮೆ ಸಮಯದಲ್ಲಿ ಸಂಗೀತದ ಅನೇಕ ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತು. ಇದೇ ರೀತಿ ಬೇರೆ ವಿಷಯಗಳಿಗೆ ಸಂಬಂಧಿಸಿದ ಸಂಶೋಧನೆಗಳ ಸಂದರ್ಭದಲ್ಲಿಯೂ ಆಯಿತು.

೪ ಇ. ಬುದ್ಧಿಗೆಮೀರಿದ ಘಟನೆಗಳ ಸಂಶೋಧನೆಯನ್ನು ಸಹಜವಾಗಿ ಮಾಡಲು ಬರುವುದು : ಆಧ್ಯಾತ್ಮಿಕ ವಿಶ್ವದಲ್ಲಿ ಪ್ರತಿದಿನ ಯೋಗ್ಯ-ಅಯೋಗ್ಯ ಬುದ್ಧಿಗೆ ಮೀರಿದ ಘಟನೆಗಳು ಘಟಿಸುತ್ತಿರುತ್ತವೆ. ಈ ಘಟನೆಗಳಿಗೆ ಸಂಬಂಧಿಸಿದ ಛಾಯಾಚಿತ್ರ ಗಳ ಸಂಶೋಧನೆ ಮಾಡುವುದರಿಂದ ಅಧ್ಯಾತ್ಮದಲ್ಲಿನ ವಿವಿಧ ಅಂಗಗಳು ಸ್ಪಷ್ಟವಾಗುತ್ತವೆ. ಉದಾ. ೨೦೨೨ ರಲ್ಲಿ ರಾಮನಾಥಿ ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ಇಟ್ಟಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರ ಯಾವುದೇ ಸ್ಥೂಲ ಕಾರಣವಿಲ್ಲದೆ ತನ್ನಿಂದತಾನೇ ಕೆಳಗೆ ಬಿದ್ದಿತು. ಈ ಘಟನೆಯ ಛಾಯಾಚಿತ್ರವನ್ನು ತೆಗೆದು ಅದರ ಸಂಶೋಧನೆಯನ್ನು ಮಾಡಲಾಯಿತು. ಈ ಸಂಶೋಧನೆಯಿಂದ ‘ಸೂಕ್ಷ್ಮದಲ್ಲಿನ ದೊಡ್ಡ ಅನಿಷ್ಟ ಶಕ್ತಿಗಳು ಸಂತರ ಮೇಲೆ ಹೇಗೆ ಆಕ್ರಮಣ ಮಾಡುತ್ತವೆ ? ಹಾಗೆಯೇ ಅವುಗಳ ತೀವ್ರತೆ ಎಷ್ಟು ಹೆಚ್ಚಿರುತ್ತದೆ ?’ ಈ ಅಂಶಗಳನ್ನು ಅಧ್ಯಯನ ಮಾಡಲು ಬಂದಿತು.

೪ ಈ. ಯಜ್ಞಯಾಗಗಳ ಸಂದರ್ಭದಲ್ಲಿ ವೈಶಿಷ್ಟ್ಯಪೂರ್ಣ ಸಂಶೋಧನೆಗಳನ್ನು ಮಾಡಲು ಸಾಧ್ಯವಾಗುವುದು : ಜನವರಿ ೨೦೨೨ ರಲ್ಲಿ ಮಹರ್ಷಿಗಳ ಆಜ್ಞೆಯಿಂದ ರಾಮನಾಥಿ ಆಶ್ರಮದಲ್ಲಿ ಕೆಲವು ಯಜ್ಞಯಾಗಗಳನ್ನು ಮಾಡಲಾಗಿತ್ತು. ಈ ಯಜ್ಞಯಾಗಗಳ ವೈಶಿಷ್ಟ್ಯವೆಂದರೆ ಅವುಗಳ ಪರಿಣಾಮ ಕೇವಲ ಪೃಥ್ವಿಯ ಮೇಲೆ ಮಾತ್ರವಲ್ಲ, ಸಪ್ತಲೋಕಗಳಲ್ಲಿಯೂ ಆಗುತ್ತದೆ. ಈ ವಿಷಯದಲ್ಲಿ ಸಂಶೋಧನೆ ಮಾಡಲು ದೇಶ-ವಿದೇಶಗಳಲ್ಲಿನ ಕೆಲವು ಸ್ಥಳಗಳನ್ನು ಆರಿಸಿ ಅಲ್ಲಿನ ಮಣ್ಣು, ನೀರು ಮತ್ತು ವಾಯುಮಂಡಲದ ಛಾಯಾಚಿತ್ರಗಳನ್ನು ತೆಗೆದು ಸಂಶೋಧನೆಗಳನ್ನು ಮಾಡಲಾಯಿತು. ಅದೇ ರೀತಿ ಸನಾತನದ ಕೆಲವು ಸಾಧಕರಿಗೆ ಮೃತ್ಯೋತ್ತರ ಮಹರ್ಲೋಕದ ಮತ್ತು ದೇಹತ್ಯಾಗ ಮಾಡಿದ ಸಂತರಿಗೆ ಜನಲೋಕ ಪ್ರಾಪ್ತಿಯಾಗಿತ್ತು. ಇವರಲ್ಲಿನ ಕೆಲವು ಸಾಧಕರ ಮತ್ತು ಸಂತರ ಛಾಯಾಚಿತ್ರಗಳನ್ನು ಆರಿಸಿ ಯಜ್ಞಸ್ಥಳದಲ್ಲಿಟ್ಟು ಅವರ ಮೇಲೆ ಏನು ಪರಿಣಾಮವಾಗುತ್ತದೆ ? ಎಂಬುದರ ಅಧ್ಯಯನ ಮಾಡಲಾಯಿತು. ಇದರಿಂದ ಯಜ್ಞದ ಸಕಾರಾತ್ಮಕ ಪರಿಣಾಮ ದೇಶ-ವಿದೇಶಗಳಲ್ಲಿನ ವಾತಾವರಣದ ಮೇಲೆ ಮತ್ತು ಸಪ್ತಲೋಕಗಳಲ್ಲಿನ ಜೀವಗಳ ಮೇಲೆ ಕೂಡ ಆಗುತ್ತದೆ ಎಂಬುದು ತಿಳಿಯಿತು.

೪ ಉ. ವ್ಯಕ್ತಿ ಅಥವಾ ವಸ್ತುಗಳಲ್ಲಿ ಆಗುವ ಒಳ್ಳೆಯ ಮತ್ತು ತೊಂದರೆದಾಯಕ ಬದಲಾವಣೆಯನ್ನು ಅಧ್ಯಯನ ಮಾಡುವುದು : ವ್ಯಕ್ತಿ ಅಥವಾ ವಸ್ತುಗಳ ಛಾಯಾಚಿತ್ರಗಳಲ್ಲಿ ಅವುಗಳ ಆಯಾ ಸಮಯದ ಸ್ಪಂದನಗಳಿರುತ್ತವೆ. ಆದ್ದರಿಂದ ವ್ಯಕ್ತಿ ಅಥವಾ ವಸ್ತುಗಳ ಛಾಯಾಚಿತ್ರಗಳಲ್ಲಿ ಆಗುವ ಒಳ್ಳೆಯ ಅಥವಾ ತೊಂದರೆದಾಯಕ ಬದಲಾವಣೆಯನ್ನು ಅವುಗಳ ಆಯಾ ಸಮಯದ ಛಾಯಾಚಿತ್ರಗಳನ್ನು ತೆಗೆದು ಸಂಶೋಧನೆ ಮಾಡಿ ಅಧ್ಯಯನ ಮಾಡಬಹುದು.

ಉದಾ. ಪರಾತ್ಪರ ಗುರು ಡಾ. ಆಠವಲೆಯವರ ಕೂದಲು ಮತ್ತು ಉಗುರುಗಳಲ್ಲಿ ಆಗಿರುವ ದೈವೀ ಬದಲಾವಣೆಗಳನ್ನು ವರ್ಷಗಳಿಗನುಸಾರ ಅವುಗಳ ಛಾಯಾಚಿತ್ರಗಳನ್ನು ತೆಗೆದು ಸಂಶೋಧನಾತ್ಮಕ ಅಧ್ಯಯನ ಮಾಡಲು ಸಾಧ್ಯವಾಯಿತು. ಅದೇ ರೀತಿ ಅವರ ಕೋಣೆಯ ಗೋಡೆಯ ಮೇಲೆ ಅನಿಷ್ಟಶಕ್ತಿಗಳ ಆಕ್ರಮಣದಿಂದ ನಿರ್ಮಾಣವಾದ ಕಲೆಗಳಿಗೆ ಸಂಬಂಧಿಸಿದ ಕಲೆಗಳ ಛಾಯಾಚಿತ್ರಗಳನ್ನು ತೆಗೆದು ಸಂಶೋಧನೆ ಮಾಡಲಾಯಿತು. ಇದರಿಂದ ‘ಅನಿಷ್ಟ ಶಕ್ತಿಗಳು ಸಂತರ ಕಾರ್ಯದಲ್ಲಿ ಹೇಗೆ ಅಡಚಣೆ ತರಲು ಪ್ರಯತ್ನಿಸುತ್ತವೆ ? ಮತ್ತು ಈಶ್ವರನು ವಿವಿಧ ಮಾಧ್ಯಮಗಳಿಂದ ಸಂತರನ್ನು ಹೇಗೆ ರಕ್ಷಿಸುತ್ತಾನೆ ?’, ಇತ್ಯಾದಿ ವಿಷಯಗಳ ಅಧ್ಯಯನ ಮಾಡಲು ಸಾಧ್ಯವಾಯಿತು.

೫. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಸಂಬಂಧಿಸಿದ ‘ನ ಭೂತೋ ನ ಭವಿಷ್ಯತಿ’ ಇಂತಹ ಸಂಶೋಧನೆಗಳನ್ನು ಮಾಡಲು ಸಾಧ್ಯವಾಗುವುದು : ೨೦೨೨ ರಿಂದ ಪರಾತ್ಪರ ಗುರು ಡಾಕ್ಟರರಿಗೆ ಸಂಬಂಧಿಸಿದ ಪರೀಕ್ಷಣೆಯ ಸಮಯದಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ೨ ಸಾವಿರದ ೩೩೭ ಮೀಟರ್‌ಗಿಂತಲೂ ಹೆಚ್ಚಿದ್ದವು; ಆದರೆ ಅವುಗಳನ್ನು ನಿಖರವಾಗಿ ಅಳೆಯಲು ಅವರಿಂದ ಇನ್ನೂ ಹಿಂದೆ ಹೋಗಲು ಸ್ಥಳದ ಅಭಾವದಿಂದ ಸಾಧ್ಯವಿಲ್ಲದ ಕಾರಣ ಅದಕ್ಕೆ ಮಿತಿ ಬಂದಿತು. ಆದ್ದರಿಂದ ಈಗ ಸರಿಯಾಗಿ ಅಳತೆ ಮಾಡುವುದು ಹೇಗೆ ? ಎಂಬ ದೊಡ್ಡ ಪ್ರಶ್ನೆ ನಿರ್ಮಾಣವಾಯಿತು. ಬೇರೆ ಸ್ಥಳವನ್ನು ಹುಡುಕಲಾಯಿತು; ಆದರೆ ಪ್ರಭಾವಲಯವನ್ನು ನಿಖರವಾಗಿ ಅಳೆಯಲು ಸಾಕಾಗುವಂತಹ ಸ್ಥಳ ಸಿಗಲಿಲ್ಲ. ಆದ್ದರಿಂದ ೨೦೨೩ ನೇ ವರ್ಷದಿಂದ ಲೋಲಕವನ್ನು (ಪೆಂಡುಲಮ್) ಉಪಯೋಗಿಸಿ ಪ್ರಭಾವಲಯವನ್ನು ಅಳೆಯಲು ಆರಂಭಿಸಿದೆವು. ಅದರಿಂದ ಪರಾತ್ಪರ ಗುರು ಡಾಕ್ಟರರಿಗೆ ಸಂಬಂಧಿಸಿದ ವಿಷಯಗಳ, ಉದಾ. ಅವರ ಕೂದಲು, ಉಗುರು, ಬಟ್ಟೆ, ಅವರ ದೇವರಕೋಣೆ, ಅವರ ಕೋಣೆ ಇತ್ಯಾದಿಗಳ ಪ್ರಭಾವಲಯ ಸಾವಿರಾರು ಮೀಟರ್‌ಗಳಷ್ಟಿದೆ, ಎಂಬುದು ತಿಳಿಯಿತು.

ಏಪ್ರಿಲ್‌ ೨೦೨೩ ರಲ್ಲಿ ಒಂದು ಪ್ರಯೋಗದ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರ ಪ್ರಭಾವಲಯವನ್ನು ಅಳೆಯಲಾಯಿತು, ಆಗ ಅದು ೧ ಲಕ್ಷದ ೯೩ ಸಾವಿರ ಮೀಟರ್‌ನಷ್ಟು ಇರುವುದು ತಿಳಿಯಿತು. ಇದರಿಂದ ಮಹರ್ಷಿಗಳು ಪರಾತ್ಪರ ಗುರು ಡಾಕ್ಟರರಿಗೆ ‘ಅವತಾರ’ವೆಂದು ಏಕೆ ಸಂಬೋಧಿಸಿದ್ದಾರೆ ಮತ್ತು ಮಹರ್ಷಿಗಳು ಮೇ ೨೦೨೨ ರಲ್ಲಿ ಅವರಿಗೆ ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ಬಿರುದನ್ನು ನೀಡಲು ಏಕೆ ಹೇಳಿದರು, ಎಂಬುದರ ಮಹತ್ವವು ಗಮನಕ್ಕೆ ಬರುತ್ತದೆ.

೬. ಕೃತಜ್ಞತೆ

ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ ಮತ್ತು ಕೃಪಾಶೀರ್ವಾದ, ಅವರ ದಾರ್ಶನಿಕತೆ ಮತ್ತು ಅಮೂಲ್ಯ ಮಾರ್ಗದರ್ಶನದಿಂದಾಗಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಾಡಲಾಗುವ ಆಧ್ಯಾತ್ಮಿಕ ಸಂಶೋಧನೆಯು ಅನೇಕ ಅಡೆತಡೆಗಳನ್ನು ಎದುರಿಸುತ್ತಾ ಮುಂದೆ ಸಾಗುತ್ತಿದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದಲ್ಲಿನ ಸಾಧಕರಿಗೆ ಸಾಕ್ಷಾತ್‌ ಅವತಾರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಮಾಡುವ ಸುವರ್ಣಾವಕಾಶ ಸಿಗುವುದು, ಇದು ಅವರೆಲ್ಲರ ಅನೇಕ ಜನ್ಮಗಳ ಪುಣ್ಯದ ಫಲವಾಗಿದೆ’, ಎಂದು ಅನಿಸುತ್ತದೆ. ಪರಾತ್ಪರ ಗುರು ಡಾಕ್ಟರರು ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಸೇವೆಯ ಅಮೂಲ್ಯ ಅವಕಾಶವನ್ನು ನೀಡಿ ನಮ್ಮೆಲ್ಲ ಸಾಧಕರ ಜೀವನವನ್ನು ಸಾರ್ಥಕಗೊಳಿಸಿದ್ದಾರೆ, ಅದಕ್ಕಾಗಿ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೪.೫.೨೦೨೩)