ವಿಶೇಷ ತನಿಖಾ ಸಮಿತಿಯ ಸ್ಥಾಪನೆ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರದಿಂದ ರಾಜ್ಯದಲ್ಲಿನ ಮದರಸಾಗಳಿಗೆ ವಿದೇಶದಿಂದ ಬರುವ ಧನಸಹಾಯದ ವಿಚಾರಣೆ ಮಾಡುವುದಕ್ಕಾಗಿ ಒಂದು ವಿಶೇಷ ತನಿಖಾ ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿ ಮದರಸಾಗಳಿಗೆ ಎಲ್ಲಿಂದ ದನ ಸಹಾಯ ದೊರೆಯುತ್ತದೆ ? ಅದರ ಬಳಕೆ ಹೇಗೆ ಮಾಡಲಾಗುತ್ತದೆ ? ಮತ್ತು ರಾಜ್ಯದಲ್ಲಿ ಎಷ್ಟು ಕಾನೂನ ಬಾಹಿರ ಮದರಸಾಗಲಿವೆ ? ಇದರ ವಿಚಾರಣೆ ನಡೆಸುವುದು. ಈ ಹಿಂದೆ ಸರಕಾರದಿಂದ ದೇಶದಲ್ಲಿನ ಕಾನೂನು ಬಾಹಿರ ಮದರಸಾಗಳ ಶೋಧನೆಗಾಗಿ ಒಂದು ಸಮೀಕ್ಷೆ ಕೂಡ ಮಾಡಲಾಗಿತ್ತು. ಇದರಲ್ಲಿ ೧೬ ಸಾವಿರದ ೫೧೩ ಅಧಿಕೃತ ಮತ್ತು ೮ ಸಾವಿರದ ೫೦೦ ಮದರಸಗಳು ಕಾನೂನ ಬಾಹಿರವಾಗಿರುವುದು ಸ್ಪಷ್ಟವಾಗಿತ್ತು. ಈ ಕಾನೂನು ಬಾಹಿರ ಮದರಸಾಗಳ ಮೇಲೆ ವಿದೇಶಿ ಧನಸಹಾಯ ಸಿಗುತ್ತಿರುವ ಬಗ್ಗೆ ಆರೋಪಿಸಲಾಗಿದೆ. ಈಗ ಇದರದೆ ವಿಚಾರಣೆ ನಡೆಸಲಾಗುವುದು. ಉತ್ತರ ಪ್ರದೇಶದಲ್ಲಿನ ತರೈ ಜಿಲ್ಲೆಯಲ್ಲಿನ ಮದರಸಾಗಳ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಾಗಿದೆ. ಈ ಮದರಸಾಗಳು ನೇಪಾಳದ ಗಡಿಯ ಹತ್ತಿರ ಇದೆ. ಮತ್ತು ಅದರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಈ ಗಡಿಯಲ್ಲಿ ಒಂದು ಸಾವಿರದ ೫೦೦ ಕ್ಕಿಂತಲೂ ಹೆಚ್ಚಿನ ಕಾನೂನು ಬಾಹಿರ ಮದರಸಾಗಳು ಇವೆ. ಹಾಗೂ ನೇಪಾಳ ಗಡಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ.
ಸಂಪಾದಕೀಯ ನಿಲುವುಈ ರೀತಿಯ ಕಾನೂನುಬಾಹಿರ ಮದರಸಾಗಳು ಆರಂಭವಾಗುವವರೆಗೆ ಮತ್ತು ಅವರಿಗೆ ವಿದೇಶದಿಂದ ಧನಸಹಾಯ ಬರುವವರೆಗೆ ಸರಕಾರ ನಿದ್ರಿಸುತ್ತಿತ್ತೆ ? |