ISRO Gaganyaan : ‘ಇಸ್ರೋ’ದ ‘ಗಗನಯಾನ’ ಅಭಿಯಾನದಲ್ಲಿನ ಮಹತ್ವದ  ಪರೀಕ್ಷೆ ಯಶಸ್ವಿ !

ತಾಂತ್ರಿಕ ಅಡಚಣೆಯ ನಂತರ ಕೆಲವೇ ನಿಮಿಷದಲ್ಲಿ ಅಂತರಿಕ್ಷಯಾನದಿಂದ ತುರ್ತಾಗಿ ಪಾರಾಗಲು  ಮಾಡಲಾದ ಪರೀಕ್ಷೆ !

ಶ್ರೀಹರಿಕೋಟ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಎಂದರೆ ‘ಇಸ್ರೋ’ದ ‘ಗಗನಯಾನ’ ಅಭಿಯಾನದ ಅಡಿಯಲ್ಲಿ ಗಗನಯಾತ್ರಿಕರು ಯಾವ ಅಂತರಿಕ್ಷಯಾನದಿಂದ ಬಾಹ್ಯಕಾಶಕ್ಕೆ ಹೋಗುವವರಿದ್ದಾರೆ, ಆ ಯಾನದಿಂದ ತುರ್ತು ಪಾರಾಗುವುದಕ್ಕಾಗಾಗಿ ಅಕ್ಟೋಬರ್ ೨೧ ರಂದು ಇಲ್ಲಿಯ ಕ್ಯಾಪ್ಟನ್ ಸತೀಶ ಧವನ ಕೇಂದ್ರದಲ್ಲಿ ಪರೀಕ್ಷೆ ಮಾಡಲಾಯಿತು. ಇಸ್ರೋದ ಈ ಪರೀಕ್ಷೆ ಯಶಸ್ವಿ ಆಗಿದೆ. ಅಪೇಕ್ಷೆಯಂತೆ ಪರೀಕ್ಷೆಗಾಗಿ ಆಯೋಜಿಸಿರುವ ತುರ್ತು ಪಾರಾಗುವ ಎಲ್ಲಾ ಹಂತಗಳು ಪೂರ್ಣ ಆಗಿರುವುದರ ಬಗ್ಗೆ ಹೇಳಲಾಯಿತು. ಈಗ ಗಗನಯಾನದ ಇನ್ನೊಂದು ಪರೀಕ್ಷೆ ಮುಂದಿನ ಕೆಲವು ತಿಂಗಳಲ್ಲಿ ನಡೆಸಲಾಗುವುದು. ಪ್ರತ್ಯಕ್ಷ ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ ಕಳುಹಿಸುವಾಗ ಉಡಾವಣೆ ಸಮಯದಲ್ಲಿ ಅಥವಾ ಉಡಾವಣೆಯ ನಂತರ ಕೆಲವು ನಿಮಿಷದಲ್ಲಿ ತಾಂತ್ರಿಕ ತೊಂದರೆ ಆದರೆ ಆಗ ರಾಕೆಟ್ ನ ಅಗ್ರ ಭಾಗದಲ್ಲಿರುವ ಬಾಹ್ಯಾಕಾಶ ಯಾನದಲ್ಲಿನ ಗಗನಯಾತ್ರಿಕರನ್ನು ಮತ್ತೆ ಸುರಕ್ಷಿತ ಭೂಮಿಗೆ ಹಿಂದೆ ಕರೆತರಲು ಸಾಧ್ಯವಾಗುವುದು.

ಅಂತರಿಕ್ಷ ಯಾನ ಇದು ರಾಕೆಟ್ ನ ಅಗ್ರ ಭಾಗದಲ್ಲಿರುತ್ತದೆ. ಉಡಾವಣೆಯ ಸಮಯದಲ್ಲಿ ಅಥವಾ ಉಡಾವಣೆ ಆದ ನಂತರ ರಾಕೇಟ್ ನಲ್ಲಿ ಏನಾದರೂ ತಾಂತ್ರಿಕ ಅಡಚಣೆ ನಿರ್ಮಾಣವಾದರೆ ಆಗ ರಾಕೆಟ್ ತಕ್ಷಣ ಸ್ಪೋಟವಾಗುವ ಸಾಧ್ಯತೆ ಇರುತ್ತದೆ. ಇದರ ಕಾರಣ ಏನೆಂದರೆ, ರಾಕೆಟ್ ನಲ್ಲಿ ಎಷ್ಟೋ ಸಾವಿರ ಟನ್ ಜ್ವಲನಶೀಲ ಇಂಧನ ಇರುತ್ತದೆ, ಅಂತಹ ಸಮಯದಲ್ಲಿ ಅಂತರಿಕ್ಷ ಯಾನದಲ್ಲಿನ ಗಗನಯಾತ್ರಿಕರ ಸುರಕ್ಷೆ ಮಹತ್ವದ್ದಾಗಿರುತ್ತದೆ. ಆಗ ಈ ಅಂತರಿಕ್ಷಯಾನ ತಕ್ಷಣ ಮುಖ್ಯ ರಾಕೆಟ್ ನಿಂದ ಬೇರ್ಪಟ್ಟು ದೂರ ಹೋಗುತ್ತಾ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗುವ ಆಯೋಜನೆ ಇರುತ್ತದೆ.

‘ಗಗನಯಾನ’ ಅಭಿಯಾನದಲ್ಲಿ ೩ ಗಗನಯಾತ್ರಿಕರು ಪೃಥ್ವಿಯಿಂದ ೪೦೦ ಕಿಲೋಮೀಟರ್ ದೂರದಲ್ಲಿ  ಹೋಗುವರು !

‘ಗಗನಯನ’ದಲ್ಲಿ ೩ ಸದಸ್ಯರ ತಂಡವನ್ನು ೩ ದಿನದ ಅಭಿಯಾನಕ್ಕಾಗಿ ಪೃಥ್ವಿಯಿಂದ ೪೦೦ ಕಿಲೋಮೀಟರ್ ಮೇಲಿನ ಕಕ್ಷೆಗೆ ಕಳುಹಿಸಲಾಗುವುದು. ಇದರ ನಂತರ ಈ ಯಾನದ ಕ್ರೂ ಮಾಡ್ಯುಲ್ (ತಂಡ ಇರುವ ಅಂತರಿಕ್ಷಯಾನ) ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಸಲಾಗುವುದು. ಭಾರತ ಏನಾದರೂ ಈ ಅಭಿಯಾನದಲ್ಲಿ ಸಫಲವಾದರೆ ಹೀಗೆ ಸಾಧನೆ ಮಾಡುವ ನಾಲ್ಕನೆಯ ದೇಶವಾಗುವುದು. ಈ ಹಿಂದೆ ಅಮೇರಿಕಾ, ಚೀನಾ ಮತ್ತು ರಷ್ಯಾ ಇವರು ಸಾಧಿಸಿದ್ದಾರೆ.

ಈ ಅಭಿಯಾನಕ್ಕಾಗಿ ಇಸ್ರೋ ೪ ಗಗನಯಾತ್ರಿಕರಿಗೆ ಪ್ರಶಿಕ್ಷಣ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಗಗನಯಾತ್ರಿಕರ ಪ್ರಶಿಕ್ಷಣ ಸೌಲಭ್ಯದಲ್ಲಿ ವರ್ಗ ಪ್ರಶಿಕ್ಷಣ, ಶಾರೀರಿಕ ಆರೋಗ್ಯ ಪ್ರಶಿಕ್ಷಣ, ಸಿಮಿಲೇಟರ್ ಪ್ರಶಿಕ್ಷಣ ಹಾಗೂ ಫ್ಲೈಟ್ ಸೂಟ್ ಪ್ರಶಿಕ್ಷಣ ನೀಡಲಾಗಿದೆ.