|
ಮುಂಬಯಿ – ಮರ‍್ಗರ‍್ಶಿ (ಗೈಡೆಡ್) ಕ್ಷಿಪಣಿ ನಾಶಕವಾಗಿರುವ ಮೂರನೇ ಸ್ಟಿಲ್ಥ್ ಯುದ್ಧನೌಕೆ `ಐ.ಎನ್.ಎಸ್.ಇಂಫಾಲ’ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತದಲ್ಲಿ ತಯಾರಿಸಲಾದ ಶಕ್ತಿಶಾಲಿ ಯುದ್ಧನೌಕೆಯಾಗಿದೆ. ನಿಗದಿತ ಕಾಲಾವಧಿಗಿಂತ ೪ ತಿಂಗಳ ಮೊದಲೇ ಅದರ ಕೆಲಸ ಪರ‍್ಣಗೊಂಡಿದೆ. ಈ ಯುದ್ಧನೌಕೆಯು ಮೇಲ್ಮೈಯಿಂದ ಮೇಲ್ಮೈಗೆ ಸೂಪರ್‌ಸಾನಿಕ್ ‘ಬ್ರಹ್ಮೋಸ್’ ಕ್ಷಿಪಣಿ ಮತ್ತು ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಆಕಾಶದಲ್ಲಿ ಹೊಡೆದುರುಳಿಸುವ ‘ಬರಾಕ್-೮’ ಕ್ಷಿಪಣಿಯಿಂದ ಸುಸಜ್ಜಿತವಾಗಿದೆ. ಈ ಯುದ್ಧನೌಕೆಯನ್ನು ರಕ್ಷಣಾ ಸಚಿವಾಲಯದ ಮುಂಬಯಿಯಲ್ಲಿರುವ ಶಿಪ್‌ಯರ‍್ಡ್ `ಮಜಗಾಂವ್ ಡಾಕ್‌ಶಿಪ್ ಬಿಲ್ರ‍್ಸ್ ಲಿಮಿಟೆಡ್’ ನರ‍್ಮಿಸಿದೆ. `ಇಂಫಾಲ್’ ಅದರಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ವಾಸಿಸಲು ಸ್ಥಳಾವಕಾಶ ಕಲ್ಪಿಸಿದ ನೌಕಾದಳದ ಮೊದಲ ಯುದ್ಧನೌಕೆಯಾಗಿದೆ. ಈ ಯುದ್ಧನೌಕೆಯಲ್ಲಿ ೩೧೨ ಜನರು ವಾಸಿಸಬಹುದು.
ಸಂಪಾದಕೀಯ ನಿಲುವುಸರಕಾರಿ ಕೆಲಸಗಳಲ್ಲಿ ಮುಂದೂಡುವಿಕೆ ಮತ್ತು ನಿರ್ಲಕ್ಷತನವನ್ನು ನೋಡಿದರೆ, ನಿಗದಿತ ಸಮಯದ ೪ ತಿಂಗಳು ಮುಂಚಿತವಾಗಿಯೇ ಯುದ್ಧನೌಕೆ ಪೂರ್ಣಗೊಳಿಸಿರುವುದು ಶ್ಲಾಘನೀಯವಾಗಿದೆ. ಇದಕ್ಕಾಗಿ, ‘Mazagon Dock Shipbuilders Limited (MDL)’ ಕಂಪನಿಯು ಜನತೆಯ ಅಭಿನಂದನೆಗೆ ರ‍್ಹವಾಗಿದೆ ! |