ಹೆಸರಿನಲ್ಲಿ ‘ನಮೋ’ ಇದ್ದರಿಂದ ಕಾಂಗ್ರೆಸ್ ನಿಂದ ಟೀಕೆ !
ಗಾಜಿಯಾಬಾದ್ (ಉತ್ತರ ಪ್ರದೇಶ) – ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಾಹಿಬಾಬಾದ್‌ನಿಂದ ದೇಶದ ಮೊದಲ ಹೈಸ್ಪೀಡ್ ರೈಲು ‘ನಮೋ ಭಾರತ್’ ಅನ್ನು ಉದ್ಘಾಟಿಸಿದರು. ಆರ್.ಆರ್.ಟಿ.ಎಸ್. ‘ಕನೆಕ್ಟ್’ ಎಂಬ ಆ್ಯಪ್‌ನಲ್ಲಿ ಈ ರೈಲ್ವೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
1. ರೈಲಿನ ಹೆಸರಲ್ಲಿ ‘ನಮೋ’ (ನರೇಂದ್ರ ಮೋದಿ ಅವರನ್ನು ‘ನಮೋ’ ಎಂದು ಕರೆಯಲಾಗುತ್ತದೆ) ಇರುವುದರಿಂದ ಕಾಂಗ್ರೆಸ್ ಟೀಕಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಇವರು, ‘ನಮೋ ಸ್ಟೇಡಿಯಂ ನಂತರ, ಈಗ ನಮೋ ರೈಲು ! ಸ್ವಾರ್ಥಕ್ಕೆ ಮಿತಿಯೇ ಇಲ್ಲ!’ ಎಂದಿದ್ದಾರೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಇವರು, ‘ಭಾರತವನ್ನು ಮಾತ್ರ ಏಕೆ ಬರೆದಿದ್ದೀರಿ? ದೇಶದ ಹೆಸರನ್ನು ನಮೋ ಎಂದು ಬದಲಾಯಿಸಿ!” ಎಂದು ‘ಎಕ್ಸ’ನಲ್ಲಿ ಬರೆದಿದ್ದಾರೆ. ಇದಕ್ಕೂ ಮೊದಲು ಕರ್ಣಾವತಿಯ ಕ್ರಿಕೆಟ್ ಮೈದಾನದ ಹೆಸರನ್ನೂ ‘ನರೇಂದ್ರ ಮೋದಿ ಸ್ಟೇಡಿಯಂ’ ಎಂದು ಬದಲಾಯಿಸಲಾಗಿತ್ತು.
2. ಈ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಮತ್ತು ಮೊದಲ ಹಂತದಲ್ಲಿ ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ದುಹಾಯಿ ವರೆಗೆ 17 ಕಿಮೀ ಪ್ರದೇಶದಲ್ಲಿ ಚಲಿಸುತ್ತದೆ. ಈ ‘ಕಾರಿಡಾರ್’ನ ಒಟ್ಟು ಉದ್ದ 82 ಕಿ.ಮೀ. ಇದರಲ್ಲಿ 14 ಕಿಮೀ ದೆಹಲಿಯಲ್ಲಿದ್ದರೆ, 68 ಕಿಮೀ ಉತ್ತರ ಪ್ರದೇಶದಲ್ಲಿದೆ. ನಮೋ ಭಾರತ್ ದೆಹಲಿ ಮೆಟ್ರೋದ ವಿವಿಧ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ. ಇದು ಅಲ್ವಾರ್, ಪಾಣಿಪತ್ ಮತ್ತು ಮೀರತ್‌ನಂತಹ ನಗರಗಳನ್ನು ದೆಹಲಿಗೆ ಸಂಪರ್ಕಿಸುತ್ತದೆ. ಈ ರೈಲನ್ನು ‘ಬುಲೆಟ್ ಟ್ರೈನ್’ನ ಮೊದಲ ಹಂತವಾಗಿಯೂ ನೋಡಲಾಗುತ್ತಿದೆ.