ಭಾರತದಲ್ಲಿ ಬಾಂಗ್ಲಾದೇಶದ ನುಸುಳುಕೋರರು ನೆಲೆಸಲು ಸಹಾಯ ಮಾಡುವ ತಂಡದ ಬಂಧನ

  • ಒಂದುವರೆ ಕೋಟಿ ರೂಪಾಯಿ ವಶ

  • ಭಾರತೀಯ ನಾಗರಿಕತ್ವದ ಸುಳ್ಳು ದಾಖಲೆ ಸೃಷ್ಟಿ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಉಗ್ರರ ನಿಗ್ರಹ ದಳದಿಂದ ೩ ನುಸುಳುಕೊರ ಬಾಂಗ್ಲಾದೇಶದ ನಾಗರೀಕರನ್ನು ಬಂಧಿಸಿದೆ. ಇವರೆಲ್ಲರೂ ಮಾನವ ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತಂದು ನೆಲೆಗೊಳಿಸುವುದಕ್ಕಾಗಿ ಅವರಿಗೆ ವಿದೇಶದಿಂದ ೨೦ ಕೋಟಿ ಹಣ ನೀಡಲಾಗಿತ್ತು. ಅವರ ಬ್ಯಾಂಕ್ ಅಕೌಂಟ್ ನಿಂದ ಒಂದುವರೆ ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆದಿಲ್ ಮೊಹಮ್ಮದ್ ಆಶರ್ಫಿ ಅಲಿಯಾಸ್ ಆದಿಲ್ ಉರ್ ರೆಹಮಾನ್, ಶೇಕ್ ನಜೀಬುಲ್ ಹಕ್ ಮತ್ತು ಅಬು ಹುರಾಯರ್ ಗಾಜಿ ಎಂದು ಈ ಮೂವರ ಹೆಸರುಗಳಾಗಿವೆ.

೧. ಉಗ್ರರ ನಿಗ್ರಹ ದಳವು, ಮಾನವ ಕಳ್ಳ ಸಾಗಾಣಿಕೆ ಮಾಡುವವರು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತಂದು ನೆಲೆಗೊಳಿಸುವುದಕ್ಕಾಗಿ ಅವರು ಭಾರತೀಯ ನಾಗರಿಕತ್ವದ ಸುಳ್ಳು ದಾಖಲೆ ತಯಾರಿಸುತ್ತಿದ್ದರು. ಅದಕ್ಕಾಗಿ ಅವರಿಗೆ ವಿದೇಶದಿಂದ ಧನಸಹಾಯ ಮಾಡಲಾಗುತ್ತಿತ್ತು. ಇದರಲ್ಲಿ ಆದಿಲ್ ಇವನು ಮುಖ್ಯ ಸೂತ್ರಧಾರನಾಗಿದ್ದಾನೆ. ಅವನಿಂದ ನಕಲಿ ಆಧಾರಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ನಕಲಿ ದಾಖಲೆಗಳಿಗಾಗಿ ಅವನಿಗೆ ಬಾಂಗ್ಲಾದಲ್ಲಿ ಇರುವ ಶೇಕ್ ನಜೀಬೂ ಲಕ್ ಮತ್ತು ಅಬು ಹುರಾಯರ ಗಾಜಿ ಇವರು ಸಹಾಯ ಮಾಡಿದ್ದಾರೆ.

೨. ವಿಚಾರಣೆಯಲ್ಲಿ ವಿದೇಶದಲ್ಲಿನ ಕೆಲವು ಖಾಸಗಿ ಸಂಸ್ಥೆಗಳಿಂದ ಮದರಸಾಗಳಿಗೆ ಮತ್ತು ಶಾಲೆಗಳಿಗೆ ಅರ್ಪಣೆ ರೂಪದಲ್ಲಿ 20 ಕೋಟಿ ರೂಪಾಯಿ ಕಳುಹಿಸಲಾಗಿದೆ, ಇದು ಬೆಳಕಿಗೆ ಬಂದಿದೆ. ಇದನ್ನು ಮಾನವ ಕಳ್ಳಸಾಗಾಣಿಕೆಗಾಗಿ ಬಳಸಲಾಗುತ್ತಿತ್ತು.

ಸಂಪಾದಕೀಯ ನಿಲುವು

ಇಂತಹವರಿಗೆ ಸರಕಾರವು ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಘಟನೆಗಳು ನಿಲ್ಲುವುದು !