ಪ್ರಧಾನಮಂತ್ರಿ ಮೋದಿ ಇವರು ‘ಗಗನಯಾನ ಅಭಿಯಾನ’ದ ವಿಮರ್ಶೆ ಸಭೆಯಲ್ಲಿ ವಿಜ್ಞಾನಿಗಳಿಗೆ ಕರೆ !
ನವ ದೆಹಲಿ – ಭಾರತೀಯ ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯನನ್ನು ಕಳಿಸುವ ಧ್ಯೇಯ ಇಡಬೇಕು. ಹಾಗೂ ೨೦೩೫ ರ ವರೆಗೆ ಮೊದಲು ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶ ಕೇಂದ್ರ) ಸ್ಥಾಪಿತಗೊಳಿಸುವುದಕ್ಕಾಗಿ ಕೂಡ ಪ್ರಯತ್ನ ಮಾಡಬೇಕು, ಎಂದು ಪ್ರಧಾನಮಂತ್ರಿ ಮೋದಿ ಇವರು ಇಸ್ರೋದ ವಿಜ್ಞಾನಿಗಳಿಗೆ ಧ್ಯೇಯ ನೀಡಿದ್ದಾರೆ. ಅವರು ಬಾಹ್ಯಾಕಾಶಕ್ಕೆ ಮನುಷ್ಯನನ್ನು ಕಳಿಸಲು ಭಾರತದ ಗಗನಯಾನ ಅಭಿಯಾನದ ವಿಮರ್ಶೆ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಪ್ರಧಾನ ಮಂತ್ರಿಯವರು ‘ವೀನಸ್ ಆರ್ಬಿಟರ್ ಮಿಷನ್’ (ಶುಕ್ರ ಗ್ರಹದ ಸುತ್ತಲೂ ಯಾನ ಕಳಿಸುವ ಅಭಿಯಾನ) ಮತ್ತು ‘ಮಂಗಳ ಲ್ಯಾಂಡರ್’ (ಮಂಗಳ ಗ್ರಹದ ಮೇಲೆ ಯಾನ ಇಳಿಸುವ ಅಭಿಯಾನ) ಇದರ ಬಗ್ಗೆ ಕೂಡ ಕಾರ್ಯ ಮಾಡುವುದಕ್ಕಾಗಿ ವಿಜ್ಞಾನಿಗಳಿಗೆ ಹೇಳಿದರು. ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿರುವ ಈ ಸಭೆಯಲ್ಲಿ ಗಗನಯಾನ ಅಭಿಯಾನದ ಅಡಿಯಲ್ಲಿ ವಿವಿಧ ಹಂತಗಳ ವರದಿ ಪಡೆಯಲಾಯಿತು.
(ಸೌಜನ್ಯ – ANI News)