ಅಲಹಾಬಾದ ಉಚ್ಚ ನ್ಯಾಯಾಲಯದಿಂದ ಭಾರತ ಸರಕಾರ ಮತ್ತು ಉತ್ತರಪ್ರದೇಶ ಸರಕಾರಕ್ಕೆ ಆದೇಶ !
ಪ್ರಯಾಗರಾಜ (ಉತ್ತರಪ್ರದೇಶ) – ಭಾರತದಲ್ಲಿ ಕೆಲವು ಯೋಜನೆಗಳ ಅಡಿಯಲ್ಲಿ ಮದರಸಾಗಳಿಗೆ ಸಹಾಯವೆಂದು ಅನುದಾನ ನೀಡಲಾಗುತ್ತದೆ. ಇಂತಹ ಯೋಜನೆಗಳ ಮಾಹಿತಿ ನೀಡುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ಉತ್ತರ ಪ್ರದೇಶ ಸರಕಾರಕ್ಕೆ ಮತ್ತು ಭಾರತ ಸರಕಾರಕ್ಕೆ ಆದೇಶ ನೀಡಿದೆ. ನ್ಯಾಯಾಲಯವು ೩ ವಾರಗಳಲ್ಲಿ ವರದಿ ಪ್ರಸ್ತುತಪಡಿಸಿ ಇದರ ಬಗ್ಗೆ ಮಾಹಿತಿ ನೀಡಲು ಹೇಳಿದೆ. ನ್ಯಾಯಮೂರ್ತಿ ಓಂಪ್ರಕಾಶ ಶುಕ್ಲ ಇವರ ವಿಭಾಗೀಯಪೀಠದಿಂದ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಈ ಆದೇಶ ನೀಡಿದೆ. ‘ಧರ್ಮಶಿಕ್ಷಣ ನೀಡುವ ಸಂಸ್ಥೆಗಳಿಗೆ ರಾಜ್ಯ ಸರಕಾರದಿಂದ ಹಣ ಪೂರೈಕೆ ಮಾಡುವುದು, ಇದು ಸಂವಿಧಾನದ ಕಲಂ.೧೪, ೨೫,೨೬,೨೯ ಮತ್ತು ೩೦ ರ ಉಲ್ಲಂಘನೆ ಆಗಿದೆಯೇ ?’ ಈ ಸಂದರ್ಭದಲ್ಲಿ ನ್ಯಾಯಾಲಯವು ವರದಿ ಪ್ರಸ್ತುತಪಡಿಸಲು ಹೇಳಿದೆ. ಹಿಂದಿನ ವಿಚಾರಣೆಯ ಸಮಯದಲ್ಲಿ ಮಕ್ಕಳ ರಕ್ಷಣಾ ಅಧಿಕಾರ ಆಯೋಗದ (ಎನ್.ಸಿ.ಪಿ.ಸಿ.ಆರ್.ರ) ನ್ಯಾಯವಾದಿ ಸ್ವರೂಪಮಾ ಚತುರ್ವೇದಿ ಇವರು ನಿರೀಕ್ಷಣಾ ವರದಿ ಪ್ರಸ್ತುತಪಡಿಸಿದ್ದರು. ಇದರ ಸಂದರ್ಭದಲ್ಲಿ ನ್ಯಾಯಾಲಯವು ಹಿರಿಯ ನ್ಯಾಯವಾದಿ ಜೆ. ಎನ್. ಮಾಥೂರ್ ಇವರಿಗೆ ‘ನ್ಯಾಯಮಿತ್ರ’ ಎಂದು ನೇಮಕ ಮಾಡಿದೆ.