ಪಾಕಿಸ್ತಾನದಲ್ಲಿ ನನಗೆ ಏನು ಸಹಿಸಿಕೊಳ್ಳಬೇಕಾಯಿತು ಅದು ನನಗೆ ಮಾತ್ರ ತಿಳಿದಿದೆ ! – ಮಾಜಿ ಕ್ರಿಕೆಟಿಗ ಶಿವರಾಮಕೃಷ್ಣನ್

‘ಜೈ ಶ್ರೀ ರಾಮ’ ಘೋಷಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಪತ್ರಕರ್ತ ರಾಜದೀಪ್ ಸರದೇಸಾಯಿಗೆ ಮಾಜಿ ಕ್ರಿಕೆಟಿಗ ಶಿವರಾಮಕೃಷ್ಣನ್ ಇವರಿಂದ ಛೀಮಾರಿ !

ನವ ದೆಹಲಿ – ಕರ್ಣಾವತಿಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಿತು. ಇದರಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತು. ಈ ಪಂದ್ಯದ ವೇಳೆ ವೀಕ್ಷಕರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರು. ಈ ಬಗ್ಗೆ ಪತ್ರಕರ್ತ ರಾಜದೀಪ್ ಸರದೇಸಾಯಿ ಟ್ವೀಟ್ ಮಾಡಿ, ‘ಇದು ಸರಿಯೇ ? ಶ್ರೀರಾಮನ ಉಲ್ಲೇಖವು ಸಕಾರಾತ್ಮಕ ಶಕ್ತಿಯ ಮೂಲವಾಗಬೇಕು, ದ್ವೇಷವಲ್ಲ’ ಎಂದು ಬರೆದಿದ್ದರು. (ಇತರ ಸಮಯದಲ್ಲಿ ಹಿಂದೂ ಧರ್ಮ, ಹಿಂದೂಗಳ ದೇವತೆ ಮತ್ತು ಸಂಸ್ಕೃತಿಯ ಮೇಲೆ ಟೀಕೆ ಮಾಡುವ ಪ್ರಗತಿ(ಅಧೋ)ಪರ ಪತ್ರಕರ್ತರಿಗೆ ಪಾಕಿಸ್ತಾನವನ್ನು ಬೆಂಬಲಿಸುವಾಗ ಶ್ರೀರಾಮ ನೆನಪಾಗುತ್ತಾನೆ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು) ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಕಟುವಾದ ಮಾತುಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಿವರಾಮಕೃಷ್ಣನ್ ಇವರು, ‘ಎಕ್ಸ್’ ಪೋಸ್ಟ್‌ನಲ್ಲಿ, ‘ನಾನು 16 ವರ್ಷದ (1983 ರಲ್ಲಿ) ಹದಿಹರೆಯದವನಾಗಿದ್ದಾಗ ಆ ಕಾಲದಲ್ಲಿ ಪಾಕಿಸ್ತಾನದಲ್ಲಿ ನಾನು ಎದುರಿಸಿದ ರೀತಿಯ ಅಪಹಾಸ್ಯ ನನಗೆ ಮಾತ್ರ ತಿಳಿದಿದೆ. ನನ್ನ ಬಣ್ಣ, ನನ್ನ ಧರ್ಮ, ನನ್ನ ದೇಶ ಮತ್ತು ನನ್ನ ಸಂಸ್ಕೃತಿಯ ಕಾರಣದಿಂದ ನನ್ನನ್ನು ಅಪಹಾಸ್ಯ ಮಾಡಲಾಯಿತು. ಅವಾಚ್ಯ ಪದಗಳಲ್ಲಿ ಬಯ್ದರು. ಹಾಗಾಗಿ ಒಂದು ವೇಳೆ ನಿಮಗೆ ಅಂತಹ ಯಾವುದೇ ಅನುಭವವಾಗಿರದಿದ್ದರೆ, ದಯವಿಟ್ಟು ಈ ವಿಷಯಗಳ ಬಗ್ಗೆ ಮಾತನಾಡಬೇಡಿ,” ಎನ್ನುವ ಶಬ್ದಗಳಲ್ಲಿ ರಾಜ್‌ದೀಪ್ ಸರದೇಸಾಯಿಯವರಿಗೆ ಛೀಮಾರಿ ಹಾಕಿದ್ದಾರೆ.

ಸಂಪಾದಕೀಯ ನಿಲುವು

ಕಪಟಿ ಜಾತ್ಯತೀತ ಪತ್ರಕರ್ತರು ಯಾವಾಗಲೂ ಪಾಕಿಸ್ತಾನದ ಪರವಾಗಿಯೇ ಇರುತ್ತಾರೆ. ಅದರಿಂದ ಅವರ ಬಾಲ ಸದಾ ಡೊಂಕವಾಗಿರುವುದರಲ್ಲಿ ಸಂಶಯವಿಲ್ಲ !