ಹಮಾಸ್ ದ ಉನ್ನತ ಕಮಾಂಡರ್ ಬಿಲಾಲ್ ಅಲ್ ಕಾದರ ಹತ

‘ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್’ ಸಂಘಟನೆಯ ಮುಖ್ಯ ಕಚೇರಿ ಧ್ವಂಸ

ತೆಲ್ ಅವಿವ (ಇಸ್ರೇಲ್) – ಇಸ್ರೇಲ್ ನಿಂದ ಅಕ್ಟೋಬರ್ ೧೪ ರ ರಾತ್ರಿ ಗಾಜಾ ಪಟ್ಟಿಯ ಮೇಲೆ ಮಾಡಿರುವ ದಾಳಿಯಲ್ಲಿ ಹಮಾಸದ ಕಮಾಂಡರ್ ಬಿಲಾಲ ಅಲ್ ಕಾದರ ಹತನಾಗಿದ್ದಾನೆ. ಕಾದರ ಇವನು ದಕ್ಷಿಣ ಖಾನ ಯುನಿಸ್ ಬಟಾಲಿಯನ್ ನಲ್ಲಿ ನಹಬಾ ಫೋರ್ಸನ ಕಮಾಂಡರ್ ಆಗಿದ್ದನು. ಅವನು ಇಸ್ರೈಯಿನಲ್ಲಿನ ಅನೇಕ ಜನರ ಹತ್ಯೆಯ ಹೊಣೆಗಾರ ಆಗಿದ್ದ. ಅವನೇ ದಕ್ಷಿಣ ಇಸ್ರೇಲ್ ನ ಕೀಬುಟ್ಜ್ ನಿರಿಮ್ ಮತ್ತು ನಿರೋಜ್ ಪ್ರದೇಶದಲ್ಲಿ ಮನೆಗಳಿಗೆ ನುಗ್ಗಿ ಹತ್ಯೆ ಮಾಡಿದ್ದನು. ಕಾದರ ‘ಹಮಾಸ್’ನಲ್ಲಿ ಕೆಲಸ ಮಾಡುವುದರ ಜೊತೆಗೆ ‘ಪ್ಯಾಲೆಸ್ಟೆನಿ ಇಸ್ಲಾಮಿಕ್ ಜಿಹಾದ್’ ಸಂಘಟನೆಯಲ್ಲಿ ಕೂಡ ಮಹತ್ವದ ಪಾತ್ರ ವಹಿಸಿದ್ದನು. ಇಸ್ರೇಲಿನ ದಾಳಿಯಲ್ಲಿ ‘ಪ್ಯಾಲೆಸ್ಟೆನಿ ಇಸ್ಲಾಮಿಕ್ ಜಿಹಾದ್’ ಸಂಘಟನೆಯ ಸೈನ್ಯದ ಕಾರ್ಯಾಲಯ ಧ್ವಂಸ ಗೊಳಿಸಿದೆ.

(ಸೌಜನ್ಯ – ABP Live Dilhi)

ಇಸ್ರೇಲ್ ರಕ್ಷಣಾ ದಳವು ನೀಡಿರುವ ಮಾಹಿತಿಯ ಪ್ರಕಾರ, ಇಸ್ರೇಲ್ ಸೈನ್ಯ ಗಾಜಾ ಪಟ್ಟಿಯಲ್ಲಿನ ಝೆಯತುನ್, ಖಾನ ಯೂನಿಸ್ ಮತ್ತು ಜಾಬಲಿಯ ಇಲ್ಲಿಯ ಹಮಾಸನ ೧೦೦ ಕೂ ಹೆಚ್ಚಿನ ಸ್ಥಳಗಳ ಮೇಲೆ ದಾಳಿ ಮಾಡಿದೆ. ಯಾವ ಸ್ಥಳದಿಂದ ಹಮಾಸ್ ದಾಳಿ ಮಾಡುತ್ತಿತ್ತು, ಆ ಸ್ಥಳಗಳ ಮೇಲೆ ಕೂಡ ದಾಳಿ ಮಾಡಲಾಗಿದೆ. ಇಸ್ರೇಲ್ ‘ಹಮಾಸದ ಇಸ್ಲಾಮಿಕ್ ಜಿಹಾದ್ ಕೌನ್ಸಿಲ್’ನ ಮುಖ್ಯ ಕಾರ್ಯಾಲಯ, ಕಮಾಂಡ ಸೆಂಟರ್, ಮಿಲಿಟರಿ ಕಾಂಪ್ಲೆಕ್ಸ್, ಲಾಂಚರ್ ಪ್ಯಾಡ್, ಆಂಟಿ ಟಾಕ್ ಪೋಸ್ಟ್ ಮತ್ತು ವಾಚ್ ಟವರ್ ಇದರ ಮೇಲೆ ಕೂಡ ದಾಳಿ ಮಾಡಿದೆ. ಇದರ ಜೊತೆಗೆ ಹಮಾಸದ ಅನೇಕ ಮೂಲಭೂತ ಸೌಲಭ್ಯಗಳು ಕೂಡ ಧ್ವಂಸ ಗೊಳಿಸಲಾಗಿದೆ.