ಭಾಗ್ಯನಗರ (ತೆಲಂಗಾಣ) – ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಸಂಘರ್ಷ ಮುಂದುವರೆದು ಇಸ್ರೇಲ್ ನಿಂದ ಗಾಜ ಪಟ್ಟಿಯಲ್ಲಿನ ನಾಗರಿಕರಿಗೆ ಸ್ಥಳಾಂತರವಾಗಲು ಕರೆ ನೀಡಿತ್ತು. ಇದಕ್ಕಾಗಿ ಅವರಿಗೆ ೨೪ ಗಂಟೆಗಳ ಸಮಯಾವಕಾಶ ಕೂಡ ನೀಡಿತ್ತು. ಇದರ ಬಗ್ಗೆ ಎಂಐಎಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸದ್ದುದ್ದೀನ್ ಓವೈಸಿ ಇವರಿಗೆ ಹೊಟ್ಟೆಯಿರಿಯಾಗಿದೆ. ಅವರು, ೨೧ ಲಕ್ಷ ಜನ ಸಂಖ್ಯೆ ಇರುವ ಗಾಜಾನಗರದಲ್ಲಿನ ೧೦ ಲಕ್ಷ ಜನರು ಮನೆ ಕಳೆದುಕೊಂಡಿದ್ದಾರೆ. ಇಸ್ರೇಲ್ ಇವರ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಹೇಳಿದರು.
ಓವೈಸಿ ಮಾತು ಮುಂದುವರೆಸಿ, ಇದೆಲ್ಲವೂ ನಡೆದರೂ ಕೂಡ ಸಂಪೂರ್ಣ ಜಗತ್ತು ಶಾಂತವಾಗಿದೆ. ಜಗತ್ತಿನಲ್ಲಿ ಭೀಷಣ ಶಾಂತತೆ ಇದೆ. ಗಾಜಾದಲ್ಲಿನ ಜನರು ಏನು ಮಾಡಿದ್ದಾರೆ ? ಅವರಿಗೆ ಏಕೆ ಕೊಲ್ಲಲಾಗುತ್ತಿದೆ ? ಇಸ್ರೇಲ್ ಹಮಾಸ್ ಇವರಲ್ಲಿನ ಯುದ್ಧದಿಂದ ಇಸ್ರೆಲ್ ನ ಪರವಾಗಿ ಏಕಪಕ್ಷಿಯವಾಗಿ ವರದಿ ಮಾಡಲಾಗುತ್ತಿದೆ.
ಇಲ್ಲಿಯವರೆಗೆ ಹಮಾಸದಿಂದ ಮಾಡಿರುವ ದಾಳಿಯಲ್ಲಿ ೧ ಸಾವಿರದ ೩೦೦ ಕ್ಕಿಂತಲೂ ಹೆಚ್ಚಿನ ಇಸ್ರೈಲಿ ಜನರು ಸಾವನ್ನಪ್ಪಿದ್ದು ಇಸ್ರೇಲ್ ನಿಂದ ಮಾಡಿರುವ ಪ್ರತಿದಾಳಿಯಲ್ಲಿ ಪ್ಯಾಲೆಸ್ಟೈನಿನ್ ೨ ಸಾವಿರಕ್ಕಿಂತಲೂ ಹೆಚ್ಚಿನ ಜನರು ಹತರಾಗಿದ್ದಾರೆ. ಇದೆಲ್ಲದರ ನಡುವೆ ಭಾರತ ಸಹಿತ ಅನೇಕ ಪಶ್ಚಿಮಾತ್ಯ ದೇಶಗಳಿಂದ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಇಲ್ಲಿಯ ನಾಗರಿಕರನ್ನು ಸುರಕ್ಷಿತವಾಗಿ ಮಾತೃದೇಶಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.
ಇಸ್ರೆಲ್ ೭೦ ವರ್ಷಗಳಿಂದ ಪ್ಯಾಲೆಸ್ಟೈನ್ ನ ಭೂಮಿಯನ್ನು ವಶಕ್ಕೆ ಪಡೆದಿದೆ ! – ಓವೈಸಿ
ಭಾರತದ ಕಾಶ್ಮೀರದಲ್ಲಿನ ಭೂಮಿಯನ್ನು ಪಾಕಿಸ್ತಾನ ಮತ್ತು ಚೀನಾ ವಶಕ್ಕೆ ಪಡೆದಿದೆ. ಇದರ ಬಗ್ಗೆ ಎಂದಾದರೂ ಓವೈಸಿ ಮಾತನಾಡುವರೇ ? ಅಥವಾ ಅದು ಅವರ ಮನಸ್ಸಿನಂತೆ ಆಗಿದೆ, ಎಂದು ಭಾರತೀಯರು ತಿಳಿಯಬೇಕೇ ?
ಓವೈಸಿ ಮಾತು ಮುಂದುವರೆಸಿ, ಇಸ್ರೇಲ್ ೭೦ ವರ್ಷಗಳಿಂದ ಪ್ಯಾಲೆಸ್ಟೈನ್ ನ ಭೂಮಿಯನ್ನು ವಶದಲ್ಲಿ ಇಟ್ಟುಕೊಂಡಿದೆ. ಇದೆಲ್ಲವೂ ಯಾರಿಗೂ ಕಾಣಿಸುತ್ತಿಲ್ಲ. ಇಸ್ರೇಲಿನ ದೌರ್ಜನ್ಯ ಯಾರಿಗೂ ಕಾಣುತ್ತಿಲ್ಲವೆ ? (ಭಾರತದಲ್ಲಿನ ಜಿಹಾದಿ ಭಯೋತ್ಪಾದನೆ ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳ ಮೇಲೆ ಹಾಗೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಮತಾಂಧ ಮುಸಲ್ಮಾನರು ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಅದು ಓವೈಸಿ ಇವರಿಗೆ ಕಾಣುವುದಿಲ್ಲವೇ ? – ಸಂಪಾದಕರು)
ಸಂಪಾದಕೀಯ ನಿಲುವು೩೨ ವರ್ಷಗಳ ಹಿಂದೆ ಜಿಹಾದಿ ಭಯೋತ್ಪಾದಕರ ಭಯದಿಂದ ಏಳುವರೆ ಲಕ್ಷ ಕಾಶ್ಮೀರಿ ಹಿಂದುಗಳು ತಮ್ಮ ದೇಶದಲ್ಲಿಯೇ ನಿರಾಶ್ರಿತರಾದರು. ಇದರ ಬಗ್ಗೆ ಓವೈಸಿ ಮಹೋದಯರು ಎಂದಾದರೂ ಮಾತನಾಡಿದ್ದಾರೆಯೇ ? ಭಾರತದಲ್ಲಿನ ಜಿಹಾದಿ ಭಯೋತ್ಪಾದನೆಯ ವಿರುದ್ಧ ಮಾತನಾಡಲು ಏಕೆ ಹೆದರುತ್ತಾರೆ ? ಹಮಾಸ್ ಭಯೋತ್ಪಾದಕರು ನಡೆಸಿರುವ ಅಮಾನವೀಯ ವಿದ್ವಾಂಸದ ಬಗ್ಗೆ ಓವೈಸಿ ಏಕೆ ಮಾತನಾಡುವುದಿಲ್ಲ ? ತದ್ವಿರುದ್ಧ ಇಸ್ರೇಲ್ ನಿಂದ ಗಾಜಾ ಪಟ್ಟಿಯಲ್ಲಿನ ನಾಗರಿಕರನ್ನು ಸ್ಥಳಾಂತರವಾಗಲು ಹೇಳಿದ್ದಾರೆ, ಹಮಾಸ್ ನಿಂದ ಸಾಮಾನ್ಯ ಇಸ್ರೆಲಿಗಳ ಮೇಲೆ ನಿರಂತರ ದೌರ್ಜನ್ಯ ಏಸಗಿದ್ದಾರೆ. ಇದರ ಬಗ್ಗೆ ಮೌನವಾಗಿರುವುದು ಓವೈಸಿ ಇವರಿಗೆ ನಾಚಿಕೆ ಆಗಬೇಕು ! |