‘ಮೇಕ್ ಮೈ ಟ್ರಿಪ್’ ಕಂಪನಿಯ ಪಾಕಿಸ್ತಾನದ ಸಂದರ್ಭದಲ್ಲಿನ ವ್ಯಂಗ್ಯಾತ್ಮಕ ಜಾಹೀರಾತಿನ ಬಗ್ಗೆ ನಟಿ ಸ್ವರಾ ಭಾಸ್ಕರ್ ಇವರಿಗೆ ಅಸೂಯೆ !

ಭಾರತೀಯರನ್ನು ನಾಚಿಸುವಂತಹ ಕೃತ್ಯವನ್ನು ಕಂಪನಿ ಮಾಡಿದೆ ಎಂದು ಟೀಕೆ !

ಕರ್ಣಾವತಿ (ಗುಜರಾತ) – ‘ಮೇಕ್ ಮೈ ಟ್ರಿಪ್’ ಈ ಭಾರತೀಯ ಕಂಪನಿಯ ಜಾಹೀರಾತನ್ನು ಇಲ್ಲಿಯ `ಅಹಮದಾಬಾದ ಟೈಮ್ಸ’ ಪತ್ರಿಕೆಯ ಅಕ್ಟೋಬರ್ 14 ರ ಪುಟ 1 ರಲ್ಲಿ ಪ್ರಸಾರವಾಗಿದ್ದು, ಇದರಲ್ಲಿ ಪಾಕಿಸ್ತಾನವನ್ನು ಟೀಕಿಸಲಾಗಿದೆ. ಅಕ್ಟೋಬರ್ 14 ರಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕ್ರಿಕೆಟ್ ಪಂದ್ಯದ ಹಿನ್ನೆಲೆಯನ್ನು ಆಧರಿಸಿ ಈ ಜಾಹೀರಾತು ನೀಡಲಾಗಿತ್ತು. ಹೆಚ್ಚಿನ ಭಾರತೀಯರು ಜಾಹೀರಾತನ್ನು ಸ್ವಾಗತಿಸಿದರೆ, ನಟಿ ಸ್ವರಾ ಭಾಸ್ಕರ್ ಮತ್ತು ಅವರಂತಹ ಇತರ ಹಿಂದೂ ವಿರೋಧಿ ಕಲಾವಿದರಿಗೆ ಮಾತ್ರ ಇದರಿಂದ ಅಸೂಯೆಯಾಗಿದೆ. ಸ್ವರಾ ಭಾಸ್ಕರ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, “ಇದು ಅತ್ಯಂತ ಅಗೌರವಯುತ ಜಾಹೀರಾತು ಆಗಿದ್ದು, ಇದು ಕ್ರೀಡಾ ಮನೋಭಾವವನ್ನು ತೋರಿಸುವುದಿಲ್ಲ. ‘ಮೇಕ್ ಮೈ ಟ್ರಿಪ್’ ಹೀಗೆ ಮಾಡಬಾರದಿತ್ತು. ನೆರೆಯ ದೇಶಕ್ಕೆ ‘ದಯೆ’ ಮತ್ತು ‘ಸಭ್ಯ ಯಜಮಾನ’ ಎನ್ನುವ ಪಾತ್ರವನ್ನು ನಿಜವಾದ ಅರ್ಥದಿಂದ ನಿರ್ವಹಿಸುವ ಭಾರತೀಯರಿಗೆ ನಾಚಿಸುವಂತಹ ಕೃತ್ಯವಾಗಿದೆ. ಹೀಗೆ ಮಾಡಬೇಡಿರಿ!” ಎಂದು ಬರೆದಿದ್ದಾರೆ.

‘ದಿ ವಾಯರ’ ನ ಹಿಂದೂ ದ್ವೇಷಿ ಸುದ್ದಿ ಜಾಲತಾಣದ ಪತ್ರಕರ್ತೆ ರೋಹಿಣಿ ಸಿಂಗ್ ಕೂಡ ಈ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಜಾಹೀರಾತಿನಲ್ಲಿ ಏನಿದೆ?

‘ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಗಳಿಗೆ ಮುಕ್ತ ಆಹ್ವಾನ !’ ಎಂದು ಶೀರ್ಷಿಕೆ ಇರುವ ‘ಮೇಕ್ ಮೈ ಟ್ರಿಪ್’ ನ ಈ ಜಾಹೀರಾತಿನಲ್ಲಿ , ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ, ‘ಪಾಕಿಸ್ತಾನ ಎಷ್ಟು ಅಂತರದಿಂದ ಸೋಲುತ್ತದೆ?’, ಅದರನುಗುಣವಾಗಿ ಕ್ರಿಕೆಟ ಪ್ರೇಮಿಗಳಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಭಾರತ ಪ್ರವಾಸ ಮಾಡಲು ಸಿಗಲಿದೆ ಈ ರೀತಿಯ ಮೂರು ಯೋಜನೆಗಳನ್ನು ನೀಡಲಾಗಿದೆ. ಇದನ್ನು ನೋಡಿ ಪಾಕಿಸ್ತಾನಿಗಳು ನಗುತ್ತಾರೆ ಎನ್ನುವ ರೀತಿಯಲ್ಲಿ ಅವರನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನವನ್ನು ವಹಿಸಿಕೊಂಡು ಭಾರತೀಯ ಕಂಪನಿಗಳ ವಿರುದ್ಧ ಮಾತನಾಡುವ ಸ್ವರಾ ಭಾಸ್ಕರ್ ನಿರಂತರವಾಗಿ ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಚಕಾರ ಎತ್ತುವುದಿಲ್ಲ ಎಂಬುದನ್ನು ಗಮನಿಸಿರಿ ! ಇದು ಅವರ ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ! ಅವರಿಗೆ ಭಾರತದಲ್ಲಿ ಉಳಿಯುವ ಹಕ್ಕಿದೆಯೇ ?

ಖಲಿಸ್ತಾನಿ ಭಯೋತ್ಪಾದಕ, ಹಮಾಸನಿಂದ ನಡೆಸುತ್ತಿರುವ ಕ್ರೌರ್ಯ ಅಥವಾ ಭಾರತದಲ್ಲಿ ಜಿಹಾದಿ ಭಯೋತ್ಪಾದಕರು ನಡೆಸುತ್ತಿರುವ ಗಲಭೆಗಳನ್ನು ಯಾವಾಗಲೂ ಬೆಂಬಲಿಸುವ ಸ್ವರಾ ಭಾಸ್ಕರ ಇವಳಿಗೆ ಪಾಕಿಸ್ತಾನ ವಿರೋಧಿ ಜಾಹೀರಾತಿನಿಂದ ದುಃಖವೆನಿಸಿದರೆ ಆಶ್ಚರ್ಯವೇನಿದೆ ?