ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಪಕ್ಷದ ಸಂಸದ ಬಹುದ್ದೀನ್ ಬಹಾರ್ ಇವರಿಂದ ದುರ್ಗಾ ಪೂಜೆಯನ್ನು ಮದ್ಯದ ಹಬ್ಬ ಎಂದು ಉಲ್ಲೇಖ !

ಅಸಮಾಧಾನಗೊಂಡಿರುವ ಹಿಂದುಗಳ ಪ್ರತಿಭಟನೆಯ ಮೇಲೆ ಸರಕಾರದ ಪಕ್ಷದ ಸಂಘಟನೆಯಿಂದ ದಾಳಿ : ೫ ಹಿಂದುಗಳಿಗೆ ಗಾಯ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕೋಮಿಲಾನಗರದಲ್ಲಿ ನಜರುಲ್ ಅವೆನ್ಯೂ ಪ್ರದೇಶದಲ್ಲಿ ಆಡಳಿತಾರೂಢ ಅವಮಿ ಲೀಗದ ಸಂಸದ ಬಹುದ್ದೀನ್ ಬಹಾರ್ ಇವರ ವಿರುದ್ಧ ಹಿಂದೂಗಳಿಂದ ನಡೆಸಲಾದ ಪ್ರತಿಭಟನಾ ಆಂದೋಲನದ ಮೇಲೆ ದಾಳಿ ಮಾಡಲಾಗಿದೆ. ಇದರಲ್ಲಿ ೫ ಹಿಂದೂಗಳು ಗಾಯಗೊಂಡಿದ್ದಾರೆ. ಅದರಲ್ಲಿನ ಒಬ್ಬರ ಸ್ಥಿತಿ ಚಿಂತಾ ಜನಕವಾಗಿದೆ. ‘ಛಾತ್ರ ಲೀಗ’ ಮತ್ತು ‘ಜೋಬೊ ಲೀಗ್’ ಈ ಇಸ್ಲಾಮಿ ಕಟ್ಟರವಾದಿಗಳಿಂದ ದಾಳಿ ನಡೆಸಲಾಗಿದೆ. ಸಂಸದ ಬಹಾರ ಇವರು ದುರ್ಗಾ ಪೂಜೆಯನ್ನು ‘ಮದ್ಯದ ಹಬ್ಬ’ ಎಂದು ಉಲ್ಲೇಖಿಸಿದ್ದರು. ಇದರ ವಿರುದ್ಧ ಹಿಂದೂಗಳು ಇಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯ ಆಯೋಜನೆ ಬಾಂಗ್ಲಾದೇಶದ ಯುವ ಏಕತಾ ಪರಿಷತ್, ಹಿಂದೂ ಬೌದ್ಧ ಇಸಾಯಿ ಏಕತಾ ಪರಿಷತ್, ಛಾತ್ರ ಏಕತಾ ಪರಿಷತ್ ಮತ್ತು ಮಹಿಳಾ ಏಕತಾ ಪರಿಷತ್ ಇವರಿಂದ ಮಾಡಲಾಗಿತ್ತು. ದಾಳಿ ಮಾಡುವವರಲ್ಲಿ ‘ಛಾತ್ರ ಲೀಗ’ ಈ ಸಂಘಟನೆ ಪ್ರಧಾನಮಂತ್ರಿ ಶೇಕ್ ಹಸೀನಾ ಇವರ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆ ಆಗಿದೆ. ಹಾಗೂ ‘ಜೋಬೋ ಲೀಗ’ ಇದು ಇದೇ ಪಕ್ಷದ ಯುವ ಸಂಘಟನೆ ಆಗಿದೆ.

೧. ಹಿಂದೂ ಬೌದ್ಧ ಇಸಾಯಿ ಏಕತಾ ಪರಿಷತ್ತಿನ ಕಾರ್ಯದರ್ಶಿ ರಾಣಾ ದಾಸ ಗುಪ್ತ ಇವರು, ಬಹಾರ ಇವರು, ಮದ್ಯದ ಮಾರಾಟ ಏನಾದರೂ ಕಡಿಮೆ ಆದರೆ, ಆಗ ದುರ್ಗಾ ಪೂಜಾ ಮಂಟಪದ ಸಂಖ್ಯೆ ಕಡಿಮೆ ಆಗುವುದು, ಬಹಾರ ಇವರು ಎರಡು ಬಾರಿ ದುರ್ಗಾ ಪೂಜೆಯ ಸಂಬಂಧ ಮದ್ಯಕ್ಕೆ ಜೋಡಿಸಿದ್ದಾರೆ ಎಂದು ಹೇಳಿದರು.

೨. ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿನ ಮುನ್ಸಿ ಗಂಜ ಇಲ್ಲಿಯ ಮಹಾಪೌರ ಪೈಸೆಲ್ ಇವರು ಹಿಂದೂ ಸಂಸದ ಶ್ರೀ. ಮೃಣಾಲ ಕಾಂತಿದಾಸ ಇವರಿಗೆ, ಮಲೌ (ಹಿಂದುಗಳಿಗಾಗಿ ಅಪಮಾನಸ್ಪದ ಪದ), ನಪುಂಸಕ ಮತ್ತು ಚಾಂಡಾಳ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಪ್ರಧಾನಮಂತ್ರಿ ಶೇಖ ಹಸಿನ ಇವರ ಜೊತೆಗೆ ಭಾರತದ ಸಂಬಂಧ ಒಳ್ಳೆಯದಾಗಿದ್ದರೂ ಅವರ ಪಕ್ಷದಿಂದ ಹಿಂದುಗಳ ಹಬ್ಬದ ಬಗ್ಗೆ ಅವಮಾನ ಕಾರಕ ಹೇಳಿಕೆ ನೀಡಿ ಮತ್ತೆ ಹಿಂದುಗಳ ಮೇಲೆಯೆ ದಾಳಿ ಮಾಡಲಾಗುತ್ತದೆ, ಹಾಗಾದರೆ ಭಾರತ ಸರಕಾರದಿಂದ ಶೇಖ ಹಸೀನಾ ಇವರಿಗೆ ಬುದ್ಧಿ ಹೇಳುವುದು ಅವಶ್ಯಕವಾಗಿದೆ !

ಬಾಂಗ್ಲಾದೇಶದ ನಿರ್ಮಾಣ ಭಾರತದಿಂದಲೇ ಆಗಿರುವಾಗ ಅಲ್ಲಿ ಹಿಂದುಗಳ ನರಸಂಹಾರ ನಡೆಯುತ್ತಿದ್ದರೆ ಮತ್ತು ಭಾರತ ಸರಕಾರವು ಏನು ಮಾಡದೆ ಇರುವುದು ಇದು ಹಿಂದುಗಳ ದೌರ್ಭಾಗ್ಯವೇ ಸರಿ !

ಇಸ್ಲಾಮಿ ದೇಶದ ಸಂಘಟನೆ ಜಗತ್ತಿನಲ್ಲಿ ಮುಸಲ್ಮಾನರ ವಿರುದ್ಧ ಏನಾದರೂ ಆದರೆ, ತಕ್ಷಣ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ, ಭಾರತ ಹೀಗೆ ಯಾವಾಗ ಮಾಡುವುದು ?