ಇಸ್ರೇಲ್ ಆದೇಶ ನಿರಾಕರಿಸುತ್ತಾ ಟರ್ಕಿ ಕೆಂಡಮಂಡಲ !

೨೪ ಗಂಟೆಯಲ್ಲಿ ಗಾಜಾ ತೆರವುಗೊಳಿಸಲು ಇಸ್ರೇಲ್ ನಿಂದ ಆದೇಶ ನೀಡಿರುವ ಪ್ರಕಾರಣ

ತೆಲ್ ಅವಿವ (ಇಸ್ರೇಲ್) – ಪ್ಯಾಲೆಸ್ಟೈನ್ ನ ಆರೋಗ್ಯ ಸಚಿವಾಲಯದಿಂದ ಅಕ್ಟೋಬರ್ ೧೫ ರಂದು, ಇಸ್ರೇಲ್ ನ ವಾಯು ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿ ೭೦ ಜನರು ಸಾವನ್ನಪ್ಪಿದ್ದಾರೆ ಹಾಗೂ ೨೦೦ ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ನೀಡಿರುವ ಸೂಚನೆಯ ನಂತರ ಈ ಎಲ್ಲಾ ಜನರು ಉತ್ತರ ಗಾಜಾ ಬಿಟ್ಟು ಹೋಗುತ್ತಿದ್ದರು, ಎಂದೂ ಸಹ ಪ್ಯಾಲೆಸ್ಟೈನ್ ಹೇಳಿದೆ. ಪ್ಯಾಲೆಸ್ಟೈನ್ ದ ವೇಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಇಸ್ರೇಲ್ ಸೈನ್ಯದ ಕ್ರಮದಿಂದ ೧೧ ಜನರು ಹತರಾಗಿರುವ ಮಾಹಿತಿ ಇದೆ. ‘೨೪ ಗಂಟೆಯಲ್ಲಿ ಗಾಜಾ ತೆರವುಗೊಳಿಸುವ ಅಸಾಧ್ಯ ಎಂದು ಇಸ್ರೇಲ್ ನ ಈ ಆದೇಶ ಒಪ್ಪಲು ಸಾಧ್ಯವಿಲ್ಲ. ಜಗತ್ತಿನ ಎಲ್ಲಾ ದೇಶಗಳು ಈ ಸಂದರ್ಭದಲ್ಲಿ ಧ್ವನಿ ಎತ್ತಬೇಕು. ಉತ್ತರ ಗಾಜಾದ ನಾಗರಿಕರನ್ನು ಹೊರಹೋಗುವುದಕ್ಕಾಗಿ ಸಮಯಾವಕಾಶ ನೀಡಬೇಕೆಂದು’ ಟರ್ಕಿ ಸರಕಾರ ಹೇಳಿದೆ.

ಇನ್ನೊಂದು ಕಡೆ ಇಸ್ರೇಲ್ ಸೈನ್ಯವು ಗಾಜಾದಲ್ಲಿ. ಕ್ರಮ ಕೈಗೊಳ್ಳುವ ಸಮಯದಲ್ಲಿ ಫಾಸ್ಫರಸ್ ಬಾಂಬ್ ಬಳಸಿರುವ ದಾವೆ ಮಾಡಿರುವ ವಾರ್ತೆಯನ್ನು ಖಂಡಿಸಿದೆ. ಇಸ್ರೇಲ್ ಸೈನ್ಯ, ಈ ವಾರ್ತೆ ಸುಳ್ಳಾಗಿದ್ದು ಇಸ್ರೇಲ್ ವಿರುದ್ಧ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ಎಲ್ಲದರಲ್ಲಿ ಅಮೆರಿಕಾದ ವಿದೇಶಾಂಗ ಸಚಿವ ಆಂಟನಿ ಲಿಂಕನ್ ಅಕ್ಟೋಬರ್ ೧೩ ರಂದು ಕತಾರಕ್ಕೆ ತಲುಪಿದ್ದಾರೆ. ಅವರು, ”ಕತಾರವು ಹಮಾಸ್ ಮೇಲೆ ಒತ್ತಡ ತಂದು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಿ. ಗಾಜಾ ಪಟ್ಟಿಯಲ್ಲಿ ಸೈನ್ಯದ ಕ್ರಮ ಕೈಗೊಂಡಾಗ ಸಾಮಾನ್ಯ ಜನರಿಗೆ ಹಾನಿ ಆಗಬಾರದು, ಇದಕ್ಕಾಗಿ ಇಸ್ರೇಲ್ ಸರಕಾರ ಪ್ರಯತ್ನ ಮಾಡುತ್ತಿದೆ”.

ಸಂಪಾದಕೀಯ ನಿಲುವು

ಹಮಾಸ್ ಭಯೋತ್ಪಾದಕರು ಅಮಾಯಕ ಇಸ್ರೇಲ್ ನಾಗರೀಕರ ಹತ್ಯೆ ಮಾಡಿದರು, ಅದರ ಬಗ್ಗೆ ಟರ್ಕಿ ಚಕಾರ ಕೂಡ ಎತ್ತುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ಕಾಶ್ಮೀರದಲ್ಲಿ ಚಿಗುರುತ್ತಿರುವ ಪಾಕಿಸ್ತಾನ ಪೋಷಿತ ಜಿಹಾದ್ಅನ್ನು ಯಾವಾಗಲೂ ಬೆಂಬಲಿಸುವ ಟರ್ಕಿಯಿಂದ ಇನ್ಯಾವ ಅಪೇಕ್ಷೆ ಮಾಡಲು ಸಾಧ್ಯ ?