ಭಾರತದ ವಿರೋಧದ ಬಳಿಕವೂ ಚೀನಾದ ಬೇಹುಗಾರಿಕಾ ಹಡಗು ತನ್ನ ಬಂದರಿಗೆ ಬರಲು ಶ್ರೀಲಂಕಾದಿಂದ ಅನುಮತಿ.!

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾವು ಭಾರತದ ವಿರೋಧದ ಬಳಿಕವೂ ಚೀನಾದ ಬೇಹುಗಾರಿಕಾ ಹಡಗನ್ನು ತನ್ನ ಬಂದರಿಗೆ ಪ್ರವೇಶಿಸಲು ಅನುಮತಿ ನೀಡಿದೆ. ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಇವರು ಮಾತನಾಡಿ ‘ಚೀನಾದ ‘ಕ್ಸಿ ಯಾನ್-6’ ಹಡಗು ನವೆಂಬರ್ 25 ರಂದು ಶ್ರೀಲಂಕಾದ ಹಂಬನಟೋಟಾಕ್ಕೆ ಬರಲಿದೆ.” ಎಂದು ಹೇಳಿದರು. ಭಾರತವು ಈ ಬಗ್ಗೆ ವಿರೋಧಿಸಿರುವ ವಿಷಯದ ಕುರಿತು ಅಲಿ ಸಾಬ್ರಿ ಮಾತನಾಡಿ, ನಮ್ಮ ಮೇಲೆ ಇತರ ದೇಶಗಳಿಂದಲೂ ಒತ್ತಡವಿತ್ತು; ಆದರೆ ನಾವು ಎಲ್ಲ ದೇಶಗಳೊಂದಿಗೆ ಸಮತೋಲನವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ ಎಂದರು. (ಸಮತೋಲನ ಸಾಧಿಸುವ ಹೆಸರಿನಲ್ಲಿ ಭಾರತಕ್ಕೆ ದಕ್ಕೆಯಾಗಿದೆ, ಎಂಬುದನ್ನು ಭಾರತವು ಗಮನಕ್ಕೆ ತೆಗೆದುಕೊಂಡು ಶ್ರೀಲಂಕಾಕ್ಕೆ ತಕ್ಕ ಪಾಠ ಕಲಿಸುವುದು ಆವಶ್ಯಕವಿದೆ ! – ಸಂಪಾದಕರು)

ಚೀನಾದ ಈ ಹಡಗು ಸಂಶೋಧನೆಯ ಹೆಸರಿನಲ್ಲಿ ಬೇಹುಗಾರಿಕೆ ನಡೆಸುತ್ತದೆ. ಅದರ ಮೇಲೆ ಇರುವ ಯಂತ್ರದ ಮೂಲಕ ಬೇಹುಗಾರಿಕೆ ನಡೆಸಲಾಗುತ್ತದೆ. ಈ ವ್ಯವಸ್ಥೆಯಿಂದ ಸಿಗುವ ಮಾಹಿತಿಯನ್ನು ಉಪಗ್ರಹದ ಮೂಲಕ ಚೀನಾಕ್ಕೆ ಕಳುಹಿಸಲಾಗುತ್ತದೆ. ಈ ಹಡಗು ಶ್ರೀಲಂಕಾದಲ್ಲಿ ಬಂದು ನಿಂತ ಬಳಿಕ ದಕ್ಷಿಣ ಭಾರತದ ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿ ನಗರಗಳು ಮತ್ತು ನೌಕಾ ನೆಲೆಗಳ ಬಗ್ಗೆ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಬಹುದು.

ಸಂಪಾದಕೀಯ ನಿಲುವು

ಭಾರತ ಯಾವ ದೇಶಕ್ಕೆ ಸಹಾಯ ಮಾಡುತ್ತದೆಯೋ, ಅದರಲ್ಲಿ ಹೆಚ್ಚಿನ ದೇಶಗಳು ಭಾರತಕ್ಕೆ ವಿಶ್ವಾಸದ್ರೋಹವನ್ನು ಮಾಡುತ್ತವೆ ಎಂದು ಕಂಡುಬರುತ್ತವೆ. ಇದರಿಂದ ಭಾರತವು ಯಾರಿಗಾದರೂ ಸಹಾಯ ಮಾಡುವ ಮೊದಲು ಈ ಬಗ್ಗೆ ವಿಚಾರ ಮಾಡಬೇಕಾಗಿದೆ !