|
ಬರೇಲಿ (ಉತ್ತರ ಪ್ರದೇಶ) – ಇಲ್ಲಿಂದ ಖುಶ್ಬೂ ಬಾನೋ ಹೆಸರಿನ ಓರ್ವ ಮುಸ್ಲಿಂ ಯುವತಿ ಘರವಾಪಸಿ ಆಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಅವಳನ್ನು ಈಗ ಕೇವಲ ಖುಶ್ಬೂ ಹೆಸರಿನಿಂದ ಗುರುತಿಸಲಾಗುತ್ತಿದೆ. ಆಕೆ ಸೆಪ್ಟೆಂಬರ್ 11ರಂದು ಅಗಸ್ತ್ಯ ಮುನಿ ಆಶ್ರಮದಲ್ಲಿ ವಿಶಾಲ ಹೆಸರಿನ ಯುವಕನನ್ನು ವೈದಿಕ ಮಂತ್ರೋಚ್ಛಾರಗಳೊಂದಿಗೆ ವಿವಾಹವಾದರು. 24 ವರ್ಷದ ಖುಶ್ಬೂ ತನ್ನ ಪೂರ್ವಜರು ಇಸ್ಲಾಮಿಕ್ ದಾಳಿಖೋರರ ಅತ್ಯಾಚಾರಕ್ಕೆ ಬೇಸತ್ತು ಮುಸ್ಲಿಮರಾದರು ಎಂದು ಹೇಳಿದ್ದಾಳೆ. ನವವಿವಾಹಿತರು ಅಕ್ಟೋಬರ್ 6 ರಂದು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಪೊಲೀಸರಲ್ಲಿ ರಕ್ಷಣೆ ಕೋರಿದ್ದರು.
ಖುಶ್ಬೂ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಮನವಿಯಲ್ಲಿ ನಾನು ನನ್ನ ಕುಟುಂಬದವರ ವಿರುದ್ಧ ಹೋಗಿ ವಿಶಾಲ್ ನನ್ನು ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾರೆ. ನನ್ನ ಕುಟುಂಬದವರು ಮತ್ತು ಸಂಬಂಧಿಕರು ನಮ್ಮಿಬ್ಬರನ್ನೂ ಕೊಲ್ಲಬಹುದು. ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಗೌರವವಿಲ್ಲ. ಅದಕ್ಕಾಗಿಯೇ ನಾನು ವೈದಿಕ ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದೇನೆ, ಎಂದು ತಿಳಿಸಿದ್ದಾರೆ.
‘ಹಿಂದೂ ಶೇರ್ ಸೇನೆ’ ಯ ಮುಂದಾಳತ್ವ !
ಖುಶ್ಬೂ ಮತ್ತು ವಿಶಾಲ್ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಖುಶ್ಬೂ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ವಿಶಾಲ್ ಹಿಂದೂ ಪರ ಸಂಘಟನೆಯಾದ ‘ಹಿಂದೂ ಶೇರ್ ಸೇನೆ’ಯನ್ನು ಸಂಪರ್ಕಿಸಿದ್ದರು. ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಕಾಸ್ ಹಿಂದೂ ಅವರು ಅಗಸ್ತ್ಯ ಮುನಿ ಆಶ್ರಮದೊಂದಿಗೆ ಅವರ ಸಂಪರ್ಕ ಮಾಡಿಕೊಟ್ಟರು. ಮತ್ತು ಸೆಪ್ಟೆಂಬರ್ 11 ರಂದು ಇವರ ವಿವಾಹವಾಯಿತು. ಇದರೊಂದಿಗೆ ವಿಕಾಸ್ ಹಿಂದೂ ಇವರೂ ಕೂಡ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಇಬ್ಬರಿಗೂ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದ್ ಅನ್ನು ಸುಳ್ಳು ಎಂದು ಹೇಳುವವರು ಅಥವಾ ‘ಪ್ರೀತಿಯನ್ನು ಧರ್ಮದ ಕನ್ನಡಕದಿಂದ ನೋಡಬೇಡಿರಿ’ ಎಂದು ಹಿಂದುತ್ವನಿಷ್ಠರಿಗೆ ಸಲಹೆ ನೀಡುವವರು ಈಗ ಖುಶ್ಬೂ ಕುಟುಂಬದ ವಿರುದ್ಧ ಏಕೆ ಮೌನವಾಗಿದ್ದಾರೆ ? |