ಮಣಿಪುರ ಸರಕಾರ ಮ್ಯಾನ್ಮಾರ್ ಗಡಿಭಾಗದಲ್ಲಿ 100 ಕಿ.ಮೀ. ಬೇಲಿ ಹಾಕಲಿದೆ

ಬೇಲಿ ಹಾಕುವುದರಿಂದ ಮ್ಯಾನ್ಮಾರ್ ನಿಂದ ಭಯೋತ್ಪಾದಕರ ಒಳನುಸುಳುವಿಕೆ ನಿಲ್ಲುತ್ತದೆ ಎಂದು ಹೇಳಲಾಗದು. ಅದಕ್ಕಾಗಿ ಜಾಗರೂಕರಾಗಿರಬೇಕು !

ಇಂಫಾಲ (ಮಣಿಪುರ) – ಮಣಿಪುರಕ್ಕೆ ಹೊಂದಿಕೊಂಡಿರುವ ಮ್ಯಾನ್ಮಾರ್ ಗಡಿಯಲ್ಲಿ 100 ಕಿ.ಮೀ. ಉದ್ದದ ಬೇಲಿಯನ್ನು ನಿರ್ಮಿಸಲು ಕೇಂದ್ರಾಡಳಿತವು ಯೋಜಿಸಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಬೇಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಗಡಿಗಳಲ್ಲಿಯೂ ಇದೇ ರೀತಿಯ ಬೇಲಿಯನ್ನು ನಿರ್ಮಿಸಲಾಗುವುದು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಮ್ಯಾನ್ಮಾರ್ ಮೂಲದ ಭಯೋತ್ಪಾದಕ ಸಂಘಟನೆಗಳು ಹಾಗೂ ಮಾದಕ ವಸ್ತು ಕಳ್ಳಸಾಗಣೆದಾರರು ಶಾಮೀಲಾಗಿದ್ದಾರೆ, ಹೀಗೆಂದು ಮಾಹಿತಿ ತಿಳಿದು ಬಂದಿದೆ. ಅವರ ಕಾರ್ಯಾಚರಣೆಗಳು ಗಡಿಯಲ್ಲಿ ವಿಶೇಷವಾಗಿ ಮೊರೆಹ ಪ್ರದೇಶದಲ್ಲಿವೆ. ಮ್ಯಾನ್ಮಾರ್ ಗಡಿಯು ಎರಡೂ ಬದಿಗಳಲ್ಲಿ 15 ಕಿ.ಮೀ.ವರೆಗೆ ಉಚಿತ ಸಂಚಾರ ಸೌಲಭ್ಯವನ್ನು ಹೊಂದಿದೆ. ಈ ಸೌಲಭ್ಯವನ್ನೂ ತೆಗೆದು ಹಾಕಲಾಗುವುದು.