ಜಿಹಾದಪ್ರೇಮಿ ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ನಿಂದ ಜಿಹಾದ್ ಭಯೋತ್ಪಾದಕ ‘ಹಮಾಸ್’ನ ದಾಳಿಗೆ ಬೆಂಬಲ !

  • ಹಮಾಸ್ ದಾಳಿ ಪ್ಯಾಲೆಸ್ಟೈನ್ ಮೇಲಿನ ದೌರ್ಜನ್ಯದ ಪ್ರತಿಕ್ರಿಯೆ ! – ಮುಸ್ಲಿಂ ಪರ್ಸನಲ್ ಲಾ ಬೋರ್ಡ್

  • ಇಸ್ರೇಲ್ ಅನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವಂತೆ ಭಾರತ ಸರಕಾರದ ಬಳಿ ಬೇಡಿಕೆ


ನವದೆಹಲಿ – ಮುಸ್ಲಿಂ ಪರ್ಸನಲ ಲಾ ಬೋರ್ಡ `ಹಮಾಸ್’ ನಿಂದ ನಡೆಸುತ್ತಿರುವ ದಾಳಿಗಳನ್ನು ‘ಭಯೋತ್ಪಾದಕ ದಾಳಿ’ ಎಂದು ಕರೆಯಬಾರದು. ಇದು ಒಂದು `ಪ್ರತಿಕ್ರಿಯೆ’ ಆಗಿದೆ’, ಎಂದು ಹೇಳಲು ಪ್ರಯತ್ನಿಸಿದೆ. ಬೋರ್ಡ ಭಾರತ ಸರಕಾರಕ್ಕೆ “ಇಸ್ರೇಲ್ ಅನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸಬೇಕು ಮತ್ತು ಪ್ಯಾಲೆಸ್ಟೈನ್ ಗೆ ಅವರ ದೇಶವನ್ನು ಮರಳಿ ಕೊಡಿಸಲು ಸಹಾಯ ಮಾಡಬೇಕೆಂದು ಒತ್ತಾಯಿಸಿದೆ. ಈ ಕುರಿತು ಬೋರ್ಡ್ ನಿಂದ ಸರಕಾರಕ್ಕೆ ಪತ್ರ ಕಳುಹಿಸಲಾಗಿದೆ. ಬೋರ್ಡ ಮುಸಲ್ಮಾನರಿಗೆ ಪ್ಯಾಲೆಸ್ಟೈನ್ ನಾಗರಿಕರಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದೆ.

1. ಬೋರ್ಡ, ಹಮಾಸ್‌ನ ದಾಳಿಯು ಪ್ಯಾಲೆಸ್ಟೈನ್ ನಾಗರಿಕರ ಮೇಲೆ ನಡೆಯುವ ದೌರ್ಜನ್ಯ ಮತ್ತು ಜೆರುಸಲೆಮ್‌ನ ಅಲ್ ಅಕ್ಸ್ ಮಸೀದಿಯ ಅವಮಾನದ ಪ್ರತಿಕ್ರಿಯೆಯಾಗಿದೆ. ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿ ಅಮಾಯಕರ ಜೀವಗಳನ್ನು ತೆಗೆದುಕೊಳ್ಳುತ್ತಿದೆ. ಜಗತ್ತು ಇಸ್ರೇಲ್ ದಾಳಿ ನಡೆಸುವುದನ್ನು ತಡೆಯಬೇಕು.ಇಲ್ಲವಾದರೆ ಪರಿಸ್ಥಿತಿ ಇನ್ನೂ ಹದಗೆಡುತ್ತದೆ ಎಂದು ಹೇಳಿದೆ.

(ಸೌಜನ್ಯ – INDIA TV)

2. ಬೋರ್ಡ ಅಧ್ಯಕ್ಷ ರಹಮಾನಿಯವರ ಮುಖಂಡತ್ವದಲ್ಲಿ ಸಭೆಯನ್ನು ನಡೆಸಲಾಯಿತು. ಇದರಲ್ಲಿ, ನೆಹರೂ ಅವರಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿಯವರೆಗೆ ಪ್ಯಾಲೆಸ್ಟೈನ್‌ನ ಹಕ್ಕಿಗಾಗಿ ಧ್ವನಿ ಎತ್ತಲಾಗಿತ್ತು ಎಂದು ಹೇಳಿದೆ; ಆದರೆ ಈಗ ದೇಶದಲ್ಲಿ ಮೋದಿ ಸರಕಾರ ಬಂದಾಗಿನಿಂದ ಪ್ಯಾಲೆಸ್ಟೈನ್‌ಗೆ ಬೆಂಬಲ ನೀಡುವುದನ್ನು ನಿಲ್ಲಿಸಿದೆ. (ಹಿಂದಿನ ತಪ್ಪುಗಳನ್ನು ಈಗ ಸರಿಪಡಿಸಲಾಗುತ್ತಿದ್ದರೆ, ಅದು ಸೂಕ್ತವೇ ಆಗಿದೆ ! – ಸಂಪಾದಕರು)

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಹಮಾಸ್‌ ಬೆಂಬಲವಾಗಿ ಪ್ರತಿಭಟನೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಿರಿ ! – ಭಾಜಪ ಸಂಸದ ಸತೀಶ್ ಗೌತಮ್ ಇವರ ಆಗ್ರಹ

ಉತ್ತರ ಪ್ರದೇಶದ ಅಲಿಘಡನಲ್ಲಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮುಸ್ಲಿಂ ವಿದ್ಯಾರ್ಥಿಗಳು 3 ದಿನಗಳ ಹಿಂದೆ ಹಮಾಸ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದರು. ಈ ವಿಷಯದಲ್ಲಿ ಭಾಜಪ ಸಂಸದ ಸತೀಶ ಗೌತಮ್ ಅವರು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು, ‘ಇಂತಹ ಘಟನೆಗಳಿಂದ ವಿಶ್ವವಿದ್ಯಾಲಯದ ಹೆಸರು ಹಾಳಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. (ಮೂಲದಲ್ಲಿ ಅಂತಹ ಬೇಡಿಕೆಯನ್ನು ಮಾಡುವ ಅವಶ್ಯಕತೆ ಬರಬಾರದು, ಪೊಲೀಸರು ತಾವೇ ಸ್ವತಃ ಮುಂದಾಗಿ ಕ್ರಮ ತೆಗೆದುಕೊಳ್ಳಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಹಮಾಸ್ ದಾಳಿಯನ್ನು ಬೆಂಬಲಿಸುವ ಮುಸ್ಲಿಂ ಪರ್ಸನಲ ಲಾ ಬೋರ್ಡ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ಮಾಡಿ, ಅವರ ವಂಶಸಂಹಾರ ಮಾಡಿದರು ಮತ್ತು ಅವರನ್ನು ಪಲಾಯನ ಮಾಡುವಂತೆ ಮಾಡಿದಾಗ, ಈ ಹಿಂದೂಗಳು ಮುಸ್ಲಿಮರ ಮೇಲೆ ಯಾವ ದೌರ್ಜನ್ಯ ಮಾಡಿದ್ದರು? ಎಂದು ಹೇಳುವರೇ ?

ಮಸೀದಿಯ ಧ್ವನಿವರ್ಧಕದಿಂದ ಹಿಂದೂಗಳಿಗೆ ಅವರ ಆಸ್ತಿಯನ್ನು ಮತ್ತು ಮಹಿಳೆಯರನ್ನು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದರು, ಆ ಹಿಂದೂಗಳು ಯಾವ ದೌರ್ಜನ್ಯ ಮಾಡಿದ್ದರು ? ಈ ಪ್ರಶ್ನೆಗಳಿಗೆ ಮುಸ್ಲಿಂ ಪರ್ಸನಲ ಲಾ ಬೋರ್ಡ ಏಕೆ ಉತ್ತರ ನೀಡುವುದಿಲ್ಲ ?

ಕಳೆದ 35 ವರ್ಷಗಳಿಂದ ಭಾರತದಲ್ಲಿ ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿ ಹಿಂದೂಗಳನ್ನು ಕೊಲ್ಲುತ್ತಿರುವ ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸುವಂತೆ ಈ ಬೋರ್ಡ ಅಥವಾ ಯಾವುದೇ ಮುಸ್ಲಿಂ ಸಂಘಟನೆ ಇದುವರೆಗೆ ಒತ್ತಾಯಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ!

ಸಂತ್ರಸ್ಥ ಹಿಂದೂಗಳು ಇಲ್ಲಿಯವರೆಗೆ ತಮ್ಮ ಮೇಲಿನ ಜಿಹಾದಿ ದಾಳಿಗೆ ‘ಪ್ರತಿಕ್ರಿಯೆ’ ಎಂದು ಯಾರ ಮೇಲೂ ದಾಳಿ ಮಾಡಿಲ್ಲ !