ಭಾಗ್ಯನಗರದಲ್ಲಿ (ತೆಲಂಗಾಣ) ಕ್ರಿಕೆಟ್ ಪಂದ್ಯದ ವೇಳೆ ವೀಕ್ಷಕರಿಂದ ಪಾಕಿಸ್ತಾನದ ಗೆಲುವಿಗಾಗಿ ಘೋಷಣೆ !

ಭಾಗ್ಯನಗರ (ತೆಲಂಗಾಣ) – ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕ್ರಿಕೆಟ್ ವಿಶ್ವಕಪ್ ಪಂದ್ಯವು ಅಕ್ಟೋಬರ್ 10 ರಂದು ನಡೆಯಿತು. ಈ ವೇಳೆ ನೆರೆದಿದ್ದ ಸಾವಿರಾರು ಜನರು ಪಾಕಿಸ್ತಾನದ ಗೆಲುವಿಗಾಗಿ ಘೋಷಣೆಗಳನ್ನು ಕೂಗಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪ್ರಶ್ನೆಗಳು ಎದ್ದಿವೆ.

ವೀಕ್ಷಕರಿಂದ ಪಾಕಿಸ್ತಾನದ ಗೆಲುವಿಗಾಗಿ ಘೋಷಣೆ ನೀಡಿದ ಬಗ್ಗೆ ಪಾಕಿಸ್ತಾನದ ಕ್ರಿಕೆಟಿಗ ರಿಜ್ವಾನ್ ಮಾತನಾಡಿ, ‘ನಾವು ರಾವಲ್ಪಿಂಡಿಯಲ್ಲಿ (ಪಾಕಿಸ್ತಾನ) ಆಡುತ್ತಿರುವಂತೆ ಭಾಸವಾಯಿತು. ವೀಕ್ಷಕರು ನಮಗೆ ತೋರಿಸಿದ ಪ್ರೀತಿಯ ರೀತಿ ಅದ್ಭುತವಾಗಿದೆ. ಈ ಪಂದ್ಯ ನಮಗೆ ಮನೆಯಂತೆ ಭಾಸವಾಯಿತು.’ ಎಂದು ಹೇಳಿದ. ಈ ಪಂದ್ಯ ವೀಕ್ಷಿಸಲು ಭಾಗ್ಯನಗರ ಮಾತ್ರವಲ್ಲದೆ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಿಂದಲೂ ಜನರು ಬಂದಿದ್ದರು.

ಸಂಪಾದಕೀಯ ನಿಲುವು

ಭಾಗ್ಯನಗರದಲ್ಲಿ ಮುಸ್ಲಿಂ ಮತ್ತು ರಜಾಕರ ವಂಶಸ್ಥರು ಇನ್ನೂ ಅಸ್ತಿತ್ವದಲ್ಲಿದ್ದಾರೆ. ಹಾಗಾಗಿ ಅಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಸಿಗುತ್ತಿದ್ದರೆ ಅಚ್ಚರಿ ಪಡಬೇಕಾಗಿಲ್ಲ ! ಇಂತಹ ಸ್ಥಿತಿ ಭಾರತದ ಅನೇಕ ಸ್ಥಳಗಳಲ್ಲಿ ಅನುಭವಿಸಲು ಸಿಗುವುದು! ಈ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋ)ಪರರು ಬಾಯಿ ತೆರೆಯುವುದಿಲ್ಲ, ಇದನ್ನು ಗಮನದಲ್ಲಿಡಿ !