ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಸಂಜಯ ಶರ್ಮಾ ಹತ್ಯೆಯಲ್ಲಿ ಒಬ್ಬ ಕಾಶ್ಮೀರಿ ಹಿಂದೂ ಕೈವಾಡ


ಶ್ರೀನಗರ – ಜಮ್ಮು ಮತ್ತು ಕಾಶ್ಮೀರದ ಅಲ್ಶಿಪೋರಾ, ಶೋಪಿಯಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಅವರನ್ನು ಮೊರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಲಿಯಾಸ್ ಅಬ್ರಾರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಜಿಹಾದಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೇರಿದವರು. ಕಾಶ್ಮೀರಿ ಹಿಂದೂ ಸಂಜಯ ಶರ್ಮಾ ಹತ್ಯೆಯಲ್ಲಿ ಭಯೋತ್ಪಾದಕ ಅಬ್ರಾರ್ ಭಾಗಿಯಾಗಿದ್ದಾನೆ ಎಂದು ಕಾಶ್ಮೀರಿ ಸಹಾಯಕ ಪೊಲೀಸ್ ಮಹಾನಿರ್ದೇಶಕ ರಯೀಸ್ ಮೊಹಮ್ಮದ್ ಭಟ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಉಗ್ರರ ವಿರುದ್ಧ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ.

(ಸೌಜನ್ಯ – CNN-News18)

ಫೆಬ್ರವರಿ 26, 2023 ರಂದು, ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕ ಸಂಘಟನೆ ‘ಕಾಶ್ಮೀರ್ ಫ್ರೀಡಂ ಫೈಟರ್ಸ್’ ಗೆ ಸೇರಿದ ಭಯೋತ್ಪಾದಕರು ಸಂಜಯ ಶರ್ಮಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಇದನ್ನು ವಿರೋಧಿಸಿ ನೂರಾರು ಕಾಶ್ಮೀರಿ ಹಿಂದೂಗಳು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾದರೆ ಪಾಕಿಸ್ತಾನದ ವಿರುದ್ಧ ಕ್ರಮ ಅಗತ್ಯ!