ದಾಳಿಯಲ್ಲಿ 1 ಸಾವಿರದ 500 ಹಮಾಸ್ ಭಯೋತ್ಪಾದಕರ ಹತ್ಯೆ ಇಸ್ರೇಲ್ ನ ದಾವೆ

ತೆಲ್ ಅವಿವ (ಇಸ್ರೇಲ್) – ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಮಾಡಿದ ದಾಳಿಗೆ ಕಳೆದ 4 ದಿನಗಳಿಂದ ಇಸ್ರೇಲ್ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಪ್ಯಾಲೆಸ್ತೇನ್‌ನ ಭಾಗವಾಗಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆ ನಿರಂತರ ಬಾಂಬ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟಮಾಡಿದೆ. ಇಸ್ರೇಲಿ ಸೈನಿಕ ಪಡೆಗಳು ಹಮಾಸ್ ನ 475 ರಾಕೆಟ್ ವ್ಯವಸ್ಥೆಗಳನ್ನು ಮತ್ತು 73 ಕಮಾಂಡ್ ಸೆಂಟರ್‌ಗಳನ್ನು ನಾಶಪಡಿಸಿವೆ. ಹಮಾಸ್ ಭಯೋತ್ಪಾದಕರು ಬಳಸುತ್ತಿದ್ದ 23 ಕಟ್ಟಡಗಳ ಮೇಲೂ ಇಸ್ರೇಲ್ ದಾಳಿ ನಡೆಸಿದೆ. ಹಮಾಸ್ ನ 22 ನೆಲೆಗಳನ್ನು ಸಹ ಧ್ವಂಸಗೊಳಿಸಲಾಗಿದೆ ಮತ್ತು ಇಸ್ರೇಲ್ ಗಡಿಯೊಳಗೆ ನುಸುಳಿದ 1 ಸಾವಿರದ 500 ಹಮಾಸ್ ಭಯೋತ್ಪಾದಕರನ್ನು ಕೊಲ್ಲಲಾಯಿತು. ಅವರ ಶವಗಳು ಎಲ್ಲೆಡೆ ಬಿದ್ದಿವೆ. ಎಂದು ಇಸ್ರೇಲ್‌ನ ಸ್ಥಳೀಯ ಮಾಧ್ಯಮಗಳು ಹೇಳಿವೆ.

ಗಾಜಾದಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ 704 ಪ್ಯಾಲೆಸ್ತೇನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೇನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಅವರಲ್ಲಿ 143 ಮಕ್ಕಳು ಮತ್ತು 105 ಮಹಿಳೆಯರು ಸೇರಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದಿದೆ.