ಭಾರತಕ್ಕೆ ಹೊಂದಿಕೊಂಡಿರುವ ನೇಪಾಳದ ಗಡಿ ಪ್ರದೇಶಗಳಲ್ಲಿ ಉದ್ದೇಶಪೂರ್ವಕವಾಗಿ ಗಲಭೆಗಳಿಗೆ ಪ್ರಚೋದನೆ !

ಗಲಭೆಯ ಹಿಂದೆ ಭಾರತದ ಗಡಿಯಲ್ಲಿರುವ ಮದರಸಾಗಳ ಕೈವಾಡವಿರುವ ಸಂದೆಹ !

ನವ ದೆಹಲಿ – ನೇಪಾಳದಲ್ಲಿ ಕಳೆದ ಕೆಲವು ವಾರಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಗಲಭೆಗಳು ನಡೆಯುತ್ತಿವೆ. ನೇಪಾಳದ ಬಾಂಕೆ ಜಿಲ್ಲೆಯ ನೇಪಾಳಗಂಜ ಪ್ರದೇಶದಲ್ಲಿ ಕೆಲವು ಜನರು ಗೋಮಾಂಸ ತಿನ್ನುತ್ತಿರುವ ವಿಡಿಯೋ ಸೆಪ್ಟೆಂಬರ್ 25 ರಂದು ಪ್ರಸಾರವಾದ ಬಳಿಕ ಅಕ್ಟೋಬರ್ 3 ರಂದು ಗಲಭೆಗಳು ನಡೆದವು. ಇದಾದ ನಂತರ ನೇಪಾಳ-ಭಾರತ ಗಡಿಯನ್ನು ನೇಪಾಳ ಮುಚ್ಚಿತ್ತು. ಈ ಘಟನೆಯ ನಂತರ, ನೇಪಾಳದ ಗಡಿಯಲ್ಲಿರುವ ಉತ್ತರ ಪ್ರದೇಶದ ಮಹಾರಾಜಗಂಜ, ಸಿದ್ಧಾರ್ಥನಗರ, ಬಲರಾಮಪುರ, ಶ್ರಾವಸ್ತಿ, ಬಹರಾಯಿಚ, ಲಖಿಮಪುರ ಖಿರಿ ಮತ್ತು ಪಿಲಿಭಿತ್‌ನಲ್ಲಿ ಪೊಲೀಸರನ್ನು ಎಚ್ಚರಿಕೆಯಿಂದ ಇರುವಂತೆ ಆದೇಶಿಸಲಾಗಿದೆ. ನೇಪಾಳದಲ್ಲಿ 2023 ರಿಂದ ಇಲ್ಲಿಯವರೆಗೆ ಗೋಹತ್ಯೆಯ ಮೇಲೆ 5 ಗಲಭೆಗಳು ನಡೆದಿವೆ. ಇದರಿಂದ ನೇಪಾಳದಲ್ಲಿ ಉದ್ದೇಶಪೂರ್ವಕವಾಗಿ ಹಿಂಸಾಚಾರ ನಡೆಸುವ ಷಡ್ಯಂತ್ರ್ಯ ರೂಪಿಸಲಾಗಿದೆಯೆಂದು ಕಂಡು ಬರುತ್ತಿದೆ. ನೇಪಾಳದ ಗಡಿಯಲ್ಲಿರುವ ಭಾರತದ ಭಾಗಗಳಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮದರಸಾಗಳಿಂದ ಈ ಷಡ್ಯಂತ್ರ್ಯ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದ ನೇಪಾಳ ಗಡಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಕ್ರಮವಾಗಿ ಬೃಹತ್ಪ್ರಮಾಣದಲ್ಲಿ ಮುಸಲ್ಮಾನರ ವಸತಿಯಾಗುವುದರೊಂದಿಗೆ ಮಸೀದಿ ಮತ್ತು ಮದರಸಾಗಳನ್ನು ನಿರ್ಮಿಸಲಾಗುತ್ತಿದೆ. ‘ಇದು ಪೊಲೀಸರಿಗೆ ಗೊತ್ತಿದ್ದರೂ ಅವರ ವಿರುದ್ಧ ಇನ್ನೂ ಏಕೆ ಕ್ರಮಕೈಗೊಂಡಿಲ್ಲ ?’ ಎನ್ನುವುದು ಆಶ್ಚರ್ಯವೇ ಆಗಿದೆ.