ಇಸ್ರೇಲ್ ಮತ್ತು ಹಮಾಸ ನಡುವಿನ ಯುದ್ಧದ ಮೂರನೇ ದಿನ

ಇಸ್ರೇಲ್ ನಿಂದ ಹಮಾಸನ 500 ನೆಲೆಗಳ ನಾಶ !

ತೆಲ್ ಅವಿವ (ಇಸ್ರೇಲ್) – ಇಸ್ರೇಲ್ ಮತ್ತು ಹಮಾಸ ನಡುವಿನ ಯುದ್ಧಯು ದೊಡ್ಡ ಮಟ್ಟದಲ್ಲಿ ಮೂರನೇ ದಿನವೂ ಮುಂದುವರೆದಿದೆ. ಹಮಾಸ ಮೂರನೇ ದಿನವೂ ಇಸ್ರೇಲ್ ಮೇಲೆ 100 ರಾಕೆಟ್‌ಗಳನ್ನು ಹಾರಿಸಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಬದಲಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ನುಗ್ಗಿ ದಾಳಿ ನಡೆಸುತ್ತಿದೆ. ಇದರಲ್ಲಿ ಇಲ್ಲಿಯವರೆಗೆ, ಇಸ್ರೇಲ್‌ನಲ್ಲಿ 700 ಜನರು ಸಾವನ್ನಪ್ಪಿದ್ದಾರೆ ಮತ್ತು 1 ಸಾವಿರ 100 ನಾಗರಿಕರು ಗಾಯಗೊಂಡಿದ್ದಾರೆ. ಹಾಗೆಯೇ ಪ್ಯಾಲೆಸ್ಟೈನ್‌ನಲ್ಲಿ 415 ಕ್ಕೂ ಹೆಚ್ಚು ಜನರು ಮರಣ ಹೊಂದಿದ್ದು, 2 ಸಾವಿರಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ಹಮಾಸನ ಅನೇಕ ನೆಲೆಗಳನ್ನು ನಾಶಪಡಿಸಿರುವುದಾಗಿ ಹೇಳಿಕೊಂಡಿದೆ. ಹಮಾಸನ 500 ಕ್ಕೂ ಹೆಚ್ಚು ಸ್ಥಳಗಳನ್ನು ನಷ್ಟಗೊಳಿಸಿರುವುದಾಗಿ ಹೇಳಲಾಗುತ್ತದೆ.

ಇಸ್ರೇಲ್ ಕೇವಲ ಗಾಜಾ ಪಟ್ಟಿಯಲ್ಲಿ ಹಮಾಸನ 426 ನೆಲೆಗಳನ್ನು ನಷ್ಟಗೊಳಿಸಿದೆ. ಅದೇ ಸಮಯದಲ್ಲಿ, 29 ಕ್ಕೂ ಹೆಚ್ಚು ಪ್ರದೇಶಗಳನ್ನು ಹಮಾಸ್ ಸೈನಿಕರ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ. ಇಸ್ರೇಲ್‌ನಿಂದ 200 ಜನರನ್ನು ಅಪಹರಿಸಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಇದರಲ್ಲಿ ಸೈನಿಕರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದ್ದಾರೆ. ಹಮಾಸ್ ಅವರನ್ನು ಗಾಜಾ ಪಟ್ಟಿಯ ಪಕ್ಕದಲ್ಲಿರುವ ನೆಲಮಾಳಿಗೆಗಳಲ್ಲಿ ಇರಿಸುತ್ತಿದೆ. ಹಮಾಸ್ ಈ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ, ಇದರಿಂದ ಇಸ್ರೇಲ್ ಆಕ್ರಮಣ ಮಾಡಿದರೆ, ಅವರದೇ ಜನರು ಕೊಲ್ಲಲ್ಪಡುತ್ತಾರೆ. ಇಸ್ರೇಲ್ ಕಾರಾಗೃಹದಲ್ಲಿ ಸುಮಾರು 5,200 ಪ್ಯಾಲೆಸ್ತೀನಿಯರು ಬಂಧನದಲ್ಲಿದ್ದಾರೆ.

ಇಸ್ರೇಲ್‌ನಲ್ಲಿರುವ ಎಲ್ಲಾ 18 ಸಾವಿರ ಭಾರತೀಯರು ಸುರಕ್ಷಿತ !

ತೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮಾಹಿತಿಯನುಸಾರ, ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ. ಈಗ ಎಲ್ಲರೂ ಸುರಕ್ಷಿತವಾಗಿದ್ದಾರೆ. ಈ ಭಾರತೀಯ ಪ್ರವಾಸಿಗರು ತಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ. ಏರ್ ಇಂಡಿಯಾ ಅಕ್ಟೋಬರ 14 ರವರೆಗೆ ತನ್ನ ಎಲ್ಲಾ ತೆಲ್ ಅವಿವ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.

ನೇಪಾಳನ 11 ಹಿಂದೂ ವಿದ್ಯಾರ್ಥಿಗಳ ಹತ್ಯೆ

ಹಮಾಸ್ ದಾಳಿಯಲ್ಲಿ 24 ವಿದೇಶಿ ನಾಗರಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಅಮೆರಿಕಾ, ಫ್ರಾನ್ಸ, ಜರ್ಮನಿ, ಉಕ್ರೇನ, ಥೈಲ್ಯಾಂಡ ಮತ್ತು ನೇಪಾಳವನ್ನು ಒಳಗೊಂಡಿದೆ. ನೇಪಾಳದ 17 ವಿದ್ಯಾರ್ಥಿಗಳ ಪೈಕಿ 11 ಹಿಂದೂ ವಿದ್ಯಾರ್ಥಿಗಳ ಹತ್ಯೆ ಮಾಡಲಾಗಿದೆ, 4 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಥಾಯ್ಲೆಂಡ್‌ನ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಥಾಯ್ಲೆಂಡನ 11 ನಾಗರಿಕರನ್ನು ಹಮಾಸ್ ಬಂಧಿಸಿದೆ ಎಂದು ಥಾಯ್ಲೆಂಡ ಪ್ರಧಾನಮಂತ್ರಿಯವರು ಹೇಳಿದ್ದಾರೆ.

ಹಮಾಸ ಟ್ರಕ್‌ನಿಂದ ತೆಗೆದುಕೊಂಡು ಹೋಗಿದ್ದ ಶವ ಜರ್ಮನಿಯ ಮಹಿಳೆ !

ಹಮಾಸ್ ಭಯೋತ್ಪಾದಕರು ಅಕ್ಟೋಬರ್ 7 ರಂದು ಪಿಕಪ್ ಟ್ರಕ್‌ನಲ್ಲಿ ಓರ್ವ ಮಹಿಳೆಯ ಶವವನ್ನು ತೆಗೆದುಕೊಂಡು ಹೋಗಿದ್ದರು. ಆ ಮಹಿಳೆಯನ್ನು ಗುರುತಿಸಲಾಗಿದ್ದು, ಅವಳ ಹೆಸರು ಶಾನಿ ಲೌವೂಕ್ ಆಗಿದ್ದು ,ಅವಳು ಜರ್ಮನ್ ನಾಗರಿಕಳಾಗಿದ್ದಳು. ಅವಳು ಸಂಗೀತೋತ್ಸವದಲ್ಲಿ ಭಾಗವಹಿಸಲು ಇಸ್ರೇಲ್‌ಗೆ ಬಂದಿದ್ದಳು. ಹಮಾಸ್ ಇಲ್ಲಿ ದಾಳಿ ನಡೆಸಿ, 260 ಜನರನ್ನು ಹತ್ಯೆ ಮಾಡಿತು, ಇನ್ನೂ ಕೆಲವು ಜನರನ್ನು ಬಂಧಿಸಿದೆ.