ಲಕ್ಷ್ಮಣಪುರಿ – ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ನಾವು ನಮ್ಮ ಪರಂಪರೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ನಮ್ಮ ಪರಂಪರೆಯ ಮೂಲಕವೇ ನಾವು ಮತ್ತು ನಮ್ಮ ಸಮಾಜದ ಪ್ರಗತಿಯನ್ನು ಸಾಧಿಸಬಹುದು. ನಾವು ಎಷ್ಟೇ ಆಧುನಿಕರಾಗಿದ್ದರೂ ನಮ್ಮ ಪರಂಪರೆಯನ್ನು ನಮ್ಮಿಂದ ಎಂದಿಗೂ ಬೇರ್ಪಡಿಸಲು ಸಾಧ್ಯವಿಲ್ಲ. ಯಾರು ತಮ್ಮನ್ನು ಪರಂಪರೆಯಿಂದ ದೂರವಿಟ್ಟುಕೊಂಡರೋ, ಅವರು ಅಧೋಗತಿ ಹೊಂದಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಯೋಗಿಯವರು ‘ಸಿಂಧಿ ಕೌನ್ಸಿಲ್ ಆಫ್ ಇಂಡಿಯಾ’ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಿಂಧಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ತಮ್ಮ ಮಾತನ್ನು ಮುಂದುವರೆಸುತ್ತಾ, ಅಯೋಧ್ಯೆಯಲ್ಲಿರುವ ಶ್ರೀರಾಮನ ಜನ್ಮಸ್ಥಳವನ್ನು 500 ವರ್ಷಗಳ ನಂತರ ನಮಗೆ ಹಿಂಪಡೆಯಲು ಸಾಧ್ಯವಾದರೆ, ನಾವು ಪಾಕಿಸ್ತಾನದಲ್ಲಿರುವ ಸಿಂಧ್ ಪ್ರದೇಶವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಯೋಗಿ ಮಾತನಾಡುತ್ತಾ, ಕೇವಲ ಒಬ್ಬ ವ್ಯಕ್ತಿಯ ಹಠಮಾರಿತನದಿಂದಲೇ ದೇಶ ವಿಭಜನೆಯ ದುರಂತವನ್ನು ಎದುರಿಸಬೇಕಾಯಿತು ಎಂದು ಹೇಳಿದರು. ದೇಶದ ವಿಭಜನೆಯಿಂದಾಗಿ ಲಕ್ಷಾಂತರ ಜನರ ಹತ್ಯೆಯಾಯಿತು. ಭಾರತದ ದೊಡ್ಡ ಭೂಭಾಗ ಪಾಕಿಸ್ತಾನದ ರೂಪದಲ್ಲಿ ಹೊರಟು ಹೋಯಿತು. ಸಿಂಧಿ ಸಮುದಾಯದವರು ಇದರ ಅತ್ಯಧಿಕ ತೊಂದರೆಯನ್ನು ಸಹಿಸಬೇಕಾಯಿತು. ಸಿಂಧಿ ಸಮಾಜ ಇಂದಿನ ಪೀಳಿಗೆಗೆ ತನ್ನ ಇತಿಹಾಸವನ್ನು ತಿಳಿಸುವ ಆವಶ್ಯಕತೆಯಿದೆ ಎಂದು ಹೇಳಿದರು.