‘ಜೈ ಶ್ರೀ ರಾಮ’ ಘೋಷಣೆಗಳನ್ನು ಕೂಗಬಾರದು ! – ಮತಾಂಧ ಮುಸಲ್ಮಾನರ ಬೆದರಿಕೆ

ಕರ್ಣಾವತಿ (ಗುಜರಾತ್)ಯಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಭಜರಂಗದಳದ ಕಾರ್ಯಕರ್ತರ ಬಸ್ಸನ್ನು ನಿಲ್ಲಿಸಿದ ಮತಾಂಧರು !

ಕರ್ಣಾವತಿ (ಗುಜರಾತ್) – ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಚಂದೋಲಾ ಪ್ರದೇಶದಿಂದ ಹಾದು ಹೋಗುತ್ತಿದ್ದ ಬಜರಂಗದಳದ ಕಾರ್ಯಕರ್ತರ ಬಸ್ಸನ್ನು ಮತಾಂಧ ಮುಸಲ್ಮಾನರು ತಡೆದರು. ಈ ಕಾರ್ಯಕರ್ತರು `ಜೈ ಶ್ರೀ ರಾಮ’ ಎಂದು ಘೋಷಣೆ ಕೂಗುತ್ತ ಹೋಗುತ್ತಿದ್ದರಿಂದ ಮತಾಂಧರು ಬಸ್ಸನ್ನು ತಡೆದು, ಘೋಷಣೆ ನಿಲ್ಲಿಸುವಂತೆ ಬೆದರಿಕೆ ಹಾಕಿದರು. ಈ ಸಂದರ್ಭದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಪ್ರಕರಣದಲ್ಲಿ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.
ಶೌರ್ಯ ಜಾಗರಣ ಯಾತ್ರೆಯ ನಿಮಿತ್ತ ಈ ಕಾರ್ಯಕರ್ತರು ರಿವರ್ ಫ್ರಂಟ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿಂದ ಅವರು ಮರಳಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಮತಾಂಧ ಮುಸಲ್ಮಾನರು ಬಸ್ಸನ್ನು ನಿಲ್ಲಿಸಿ ಬಜರಂಗದಳದ ಕಾರ್ಯಕರ್ತರನ್ನುದ್ದೇಶಿಸಿ, “ನೀವು ನಮ್ಮ ಪ್ರದೇಶದಿಂದ ಹಾದು ಹೋಗುವಾಗ ಏಕೆ ಘೋಷಣೆಗಳನ್ನು ಕೂಗುತ್ತಿದ್ದೀರಿ ? ನಿಮಗೆ ಘೋಷಣೆಗಳನ್ನು ಕೂಗುವುದಿದ್ದರೆ ನಿಮ್ಮ ಪ್ರದೇಶಕ್ಕೆ ಹೋಗಿ ಕೂಗಿರಿ. ನಾವು ನಿಮ್ಮ ಪ್ರದೇಶಕ್ಕೆ ಬಂದು ‘ನಾರಾ-ಎ-ತಕಬೀರ್’ (ಅಲ್ಲಾ ಎಲ್ಲರಿಗಿಂತ ಮಹಾನ ಆಗಿದ್ದಾನೆ) ಮತ್ತು ‘ಅಲ್ಲಾಹು ಅಕ್ಬರ’ (ಅಲ್ಲಾ ಮಹಾನ) ಎಂದು ಕೂಗಿದರೆ ಏನಾಗುತ್ತದೆ ?” ಎಂದು ಕೇಳಿದರು. (‘ಭಾರತದಲ್ಲಿ ಮುಸಲ್ಮಾನ ಅಸುರಕ್ಷಿತರಾಗಿದ್ದಾರೆ’ ಎಂದು ಕೂಗುವವರು ಈ ಘಟನೆಯ ಸಂದರ್ಭದಲ್ಲಿ ಯಾರು ಅಸುರಕ್ಷಿತರಾಗಿದ್ದಾರೆ, ಎಂದು ಹೇಳುವರೇ ? – ಸಂಪಾದಕರು) ಈ ಸಂದರ್ಭದಲ್ಲಿ ಅಲ್ಲಿ ಪೋಲೀಸರೂ ತಲುಪಿದ್ದರು; ಆದರೆ ಅವರು ಅಸಹಾಯಕರಂತೆ ಕಾಣಿಸುತ್ತಿದ್ದರು. (ಮತಾಂಧ ಮುಸಲ್ಮಾನರ ಮುಂದೆ ಅಸಹಾಯಕರಾಗುವ ಭಾಜಪ ರಾಜ್ಯದ ಪೊಲೀಸರನ್ನು ಹಿಂದೂಗಳು ನಿರೀಕ್ಷಿಸುವುದಿಲ್ಲ ! ಇಂತಹ ಪೊಲೀಸರು ಗಲಭೆಗಳ ಸಂದರ್ಭದಲ್ಲಿ ಹಿಂದೂಗಳನ್ನು ಹೇಗೆ ರಕ್ಷಿಸುತ್ತಾರೆ ? – ಸಂಪಾದಕರು)

ಗೋದ್ರಾದಂತಹ ಕೃತ್ಯ ನಡೆಸಲು ಷಡ್ಯಂತ್ರ ರಚಿಸಿದ್ದರೇ ? – ವಿಶ್ವ ಹಿಂದೂ ಪರಿಷತ್ತು

ಈ ಘಟನೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ತಿನ ಗುಜರಾತ ವಕ್ತಾರ ಹಿತೇಂದ್ರ ಸಿಂಹ ರಾಜಪೂತ ಮಾತನಾಡಿ, ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಈಗ ಗುಜರಾತ್‌ನಲ್ಲಿ ಹಿಂದೂಗಳಿಗೆ `ಜೈ ಶ್ರೀ ರಾಮ’ ಎಂದು ಕೂಗುವುದನ್ನು ನಿಷೇಧಿಸಲು ಹೊರಟಿದ್ದಾರೆಯೇ ? ಹಿಂದೂ ಯಾತ್ರಿಕರ ಬಸ್ಸು ನಿಲ್ಲಿಸಿದ ಮುಸಲ್ಮಾನರ ಉದ್ದೇಶವೇನು ? ಇದರ ಹಿಂದೆ ಏನಾದರೂ ಷಡ್ಯಂತ್ರವಿದೆಯೇ ? ಮುಸಲ್ಮಾನರು ಗೋಧ್ರಾದಂತೆ (2002 ರಲ್ಲಿ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಮುಸಲ್ಮಾಣರು ಕಾರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ನ ಒಂದು ಬೋಗಿಗೆ ಬೆಂಕಿ ಹಚ್ಚಿದ್ದರು. ಇದರಲ್ಲಿ 59 ಕಾರಸೇವಕರು ಸಾವನ್ನಪ್ಪಿದ್ದರು.) ಕೃತ್ಯವನ್ನು ಮಾಡಲು ಬಯಸಿದ್ದರೆ ? ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗೃಹ ಸಚಿವ ಹರ್ಷ ಸಂಘವಿ ಮತ್ತು ಪೊಲೀಸ್ ಮಹಾನಿರ್ದೇಶಕರಲ್ಲಿ ಮನವಿ ಮಾಡುತ್ತಿದ್ದೇವೆ. ವಿಡಿಯೋ ಆಧಾರದಲ್ಲಿ ಮುಸಲ್ಮಾನರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.