ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಂಸ್ಕೃತ ಸಪ್ತಾಹದ ನಿಮಿತ್ತ ವಿಶೇಷ ‘ಟ್ವಿಟರ್ ಲೈವ್’ ಕಾರ್ಯಕ್ರಮದ ಆಯೋಜನೆ

‘ಸಂಸ್ಕೃತವು ಮೃತ ಭಾಷೆಯಾಗಿದೆ ಅಥವಾ ವ್ಯವಹಾರ ಮಾಡಲು ನಿರುಪಯುಕ್ತವಾಗಿದೆ’, ಎಂದು ಹೇಳುವುದು ತಪ್ಪಾಗಿದೆ. ಇಂದು ಜರ್ಮನಿಯ ೧೪ ಮತ್ತು ಬ್ರಿಟನ್‌ನ ೪ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ ಮತ್ತು ೧೭ ದೇಶಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಲಾಗುತ್ತಿದೆ.